AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಪೃಥ್ವಿ ಶಾ ಖರೀದಿಗೆ ಮೂರು ಐಪಿಎಲ್ ಫ್ರಾಂಚೈಸಿಗಳಿಂದ ತಯಾರಿ

Prithvi Shaw: ಪೃಥ್ವಿ ಶಾ ಅವರು ಇತ್ತೀಚೆಗೆ ಬುಚ್ಚಿ ಬಾಬು ಟೂರ್ನಮೆಂಟ್‌ನಲ್ಲಿ ಭರ್ಜರಿ ಶತಕ ಬಾರಿಸಿ ಐಪಿಎಲ್ 2026 ರ ಹರಾಜಿನಲ್ಲಿ ಮೂರು ತಂಡಗಳ ಗಮನ ಸೆಳೆದಿದ್ದಾರೆ. ಕೆಕೆಆರ್, ಡಿಸಿ ಮತ್ತು ಸಿಎಸ್ಕೆ ತಂಡಗಳು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿವೆ. 2025ರಲ್ಲಿ ಕಳಪೆ ಪ್ರದರ್ಶನ ನೀಡಿದ ಈ ತಂಡಗಳಿಗೆ ಪೃಥ್ವಿ ಶಾ ಅವರ ಅನುಭವ ಮತ್ತು ಬ್ಯಾಟಿಂಗ್ ಸಾಮರ್ಥ್ಯ ಅಗತ್ಯವಿದೆ.

ಪೃಥ್ವಿಶಂಕರ
|

Updated on: Aug 21, 2025 | 10:36 PM

Share
ಪ್ರಸ್ತುತ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಮೆಂಟ್​ನಲ್ಲಿ ಮಹಾರಾಷ್ಟ್ರ ಪರ ಪಾದಾರ್ಪಣೆ ಮಾಡಿರುವ ಪೃಥ್ವಿ ಶಾ ಛತ್ತೀಸ್​ಗಢ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ 111 ರನ್​ಗಳ ಇನ್ನಿಂಗ್ಸ್ ಆಡಿದ್ದ ಪೃಥ್ವಿ, 15 ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಾರಿಸಿದ್ದರು. ಸದ್ಯ ಉತ್ತಮ ಫಾರ್ಮ್​ನಲ್ಲಿ ಕಾಣಿಸಕೊಂಡಿರುವ ಪೃಥ್ವಿ ಖರೀದಿಗಾಗಿ ಮೂರು ಐಪಿಎಲ್ ತಂಡಗಳು ಯೋಜನೆ ಹಾಕಿಕೊಂಡಿವೆ.

1 / 7
ಐಪಿಎಲ್​ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಪೃಥ್ವಿ ಶಾರನ್ನು 2025 ರ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ. ಆದಾಗ್ಯೂ ಪೃಥ್ವಿ ಪ್ರಸ್ತುತ ಇರುವ ಫಾರ್ಮ್ ಅನ್ನು ಗಮನಿಸಿದರೆ, 2026 ರ ಐಪಿಎಲ್​ನಲ್ಲಿ ಮೂರು ತಂಡಗಳು ಖಂಡಿತವಾಗಿಯೂ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತವೆ. ಇವುಗಳಲ್ಲಿ ಒಂದು ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಆಗಿರಬಹುದು.

2 / 7
ಪೃಥ್ವಿ ಶಾ ಕೊನೆಯ ಬಾರಿಗೆ 2024 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದರು. ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಎಂಟು ಪಂದ್ಯಗಳನ್ನಾಡಿದ್ದ ಪೃಥ್ವಿ 24.75 ರ ಸರಾಸರಿಯಲ್ಲಿ 198 ರನ್ ಗಳಿಸಿದ್ದರು. 2025 ರ ಸೀಸನ್‌ಗೂ ಮೊದಲು ಡೆಲ್ಲಿ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಲು ಇದೇ ಕಾರಣ.

3 / 7
ಐಪಿಎಲ್​ನ ಆರಂಭಿಕ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪೃಥ್ವಿ ಭರವಸೆ ಮೂಡಿಸಿದ್ದರು. ಆದರೆ ಆ ಬಳಿಕ ಅವರ ಫಾರ್ಮ್​ ಕ್ಷೀಣಿಸಲಾರಂಭಿಸಿತು. ಹೀಗಾಗಿ ಇದುವರೆಗೆ ಐಪಿಎಲ್​ನಲ್ಲಿ 79 ಪಂದ್ಯಗಳನ್ನಾಡಿರುವ ಅವರು 23.95 ರ ಸರಾಸರಿಯಲ್ಲಿ 1892 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 14 ಅರ್ಧಶತಕಗಳಿದ್ದು, ಅತ್ಯುತ್ತಮ ಸ್ಕೋರ್ 99 ರನ್‌ಗಳಾಗಿವೆ.

4 / 7
2025 ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ತಂಡವು ಪ್ಲೇಆಫ್​ಗೆ ತಲುಪಲು ವಿಫಲವಾಯಿತು. ಆಡಿದ 14 ಪಂದ್ಯಗಳಲ್ಲಿ ಕೇವಲ ಐದು ಪಂದ್ಯಗಳನ್ನು ಮಾತ್ರ ಗೆದ್ದಿತು. ಅದರಲ್ಲೂ ತಂಡದಲ್ಲಿ ಉತ್ತಮ ಆರಂಭಿಕರ ಕೊರತೆ ಎದ್ದು ಕಾಣಿಸುತ್ತಿದ್ದು, ಪೃಥ್ವಿ ಆ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಹುದು.

5 / 7
ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಸೇರಿದೆ. ಡೆಲ್ಲಿ ತಂಡ ಕೂಡ ಪ್ಲೇಆಫ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಈ ಇಡೀ ಆವೃತ್ತಿಯಲ್ಲಿ 4 ವಿಭಿನ್ನ ಆಟಗಾರರನ್ನು ಆರಂಭಿಕರನ್ನಾಗಿ ಡೆಲ್ಲಿ ಕಣಕ್ಕಿಳಿಸಿತು. ಅದರಲ್ಲಿ ಫಾಫ್ ಡು ಪ್ಲೆಸಿಸ್ 9 ಇನ್ನಿಂಗ್ಸ್‌ಗಳಲ್ಲಿ 202 ರನ್ ಗಳಿಸಿದರೆ, ಜ್ಯಾಕ್ ಫ್ರಾಂಜರ್-ಮೆಕ್‌ಗುರ್ಕ್ 6 ಪಂದ್ಯಗಳಲ್ಲಿ ಕೇವಲ 55 ರನ್ ಬಾರಿಸಿದರು. ಕೆಎಲ್ ರಾಹುಲ್ 539 ರನ್ ಗಳಿಸಿದರೆ, ಅಭಿಷೇಕ್ ಪೊರೆಲ್ 301 ರನ್ ಗಳಿಸಿದರು. ಹೀಗಾಗಿ ಸ್ಥಿರ ಆರಂಭ ನೀಡುವ ಮತ್ತೊಬ್ಬ ಆರಂಭಿಕ ಆಟಗಾರ ಡೆಲ್ಲಿ ತಂಡಕ್ಕೆ ಅಗತ್ಯವಾಗಿದೆ.

6 / 7
ಚೆನ್ನೈ ಸೂಪರ್ ಕಿಂಗ್ಸ್ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯವನ್ನು ಮಾತ್ರ ಗೆದ್ದಿತ್ತು. ಸೀಸನ್ ಉದ್ದಕ್ಕೂ ತಂಡದ ಬ್ಯಾಟ್ಸ್‌ಮನ್‌ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಮೊದಲ ಕೆಲವು ಪಂದ್ಯಗಳ ನಂತರ, ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಹೊರಗುಳಿದರು, ಇದರಿಂದಾಗಿ ಅಗ್ರ ಕ್ರಮಾಂಕವು ದೊಡ್ಡ ಸ್ಕೋರ್‌ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪೃಥ್ವಿ ಶಾ ಆಗಮನದಿಂದ ತಂಡದ ಬ್ಯಾಟಿಂಗ್ ಲೈನ್ ಅಪ್ ತುಂಬಾ ಬಲಿಷ್ಠವಾಗಲಿದೆ. ಆದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖಂಡಿತವಾಗಿಯೂ ಇವರ ಮೇಲೆ ಕಣ್ಣಿಟ್ಟಿರುತ್ತದೆ.

7 / 7
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ