AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Tewatia: ರೋಚಕ ಫೈಟ್​ನಲ್ಲಿ ಫೋರ್ ಸಿಡಿಸಿ ಪಂದ್ಯ ಗೆಲ್ಲಿಸಿದ ರಾಹುಲ್ ತೇವಾಟಿಯಾ

PBKS vs GT, IPL 2023: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಕೊನೆಯ 2 ಎಸೆತದಲ್ಲಿ ಗೆಲುವಿಗೆ 4 ರನ್ ಬೇಕಾಗಿದ್ದಾಗ ರಾಹುಲ್ ತೇವಾಟಿಯಾ ಚೆಂಡನ್ನು ಬೌಂಡಿಗೆ ಅಟ್ಟಿ ರೋಚಕ ಜಯ ತಂದಿಟ್ಟರು.

Vinay Bhat
|

Updated on: Apr 14, 2023 | 8:11 AM

Share
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲ ಪಂದ್ಯಗಳು ಅಂತಿಮ ಹಂತದ ವರೆಗೆ ತಲುಪುತ್ತಿದೆ. 20ನೇ ಓವರ್​ನಲ್ಲಿ ಗೆಲುವು ಕಂಡು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿದೆ. ಗುರುವಾರ ಐಪಿಎಲ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಕೂಡ ಇದೇ ರೀತಿಯಿತ್ತು.

1 / 8
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಕೊನೆಯ 2 ಎಸೆತದಲ್ಲಿ ಗೆಲುವಿಗೆ 4 ರನ್ ಬೇಕಾಗಿದ್ದಾಗ ರಾಹುಲ್ ತೇವಾಟಿಯಾ ಚೆಂಡನ್ನು ಬೌಂಡಿಗೆ ಅಟ್ಟಿ ರೋಚಕ ಜಯ ತಂದಿಟ್ಟರು.

2 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್ ಆರಂಭದಲ್ಲೇ ಶಿಖರ್​ ಧವನ್​ (8) ಮತ್ತು ಪ್ರಭುಶಿಮ್ರಾನ್​ ಸಿಂಗ್​​ (0) ವಿಕೆಟ್ ಕಳೆದುಕೊಂಡಿತು. ಫಾರ್ಮ್​ನಲ್ಲಿದ್ದ ಧವನ್ ಬೇಗನೆ ಔಟ್ ಆಗಿದ್ದು ತಂಡಕ್ಕೆ ಹಿನ್ನಡೆ ಆಯಿತು.

3 / 8
ಮ್ಯಾಥ್ಯೂ ಶಾರ್ಟ್​​​ 36 ರನ್ ಗಳಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಜಿತೇಶ್​ ವರ್ಮಾ 25 ರನ್​ಗಳ ಕೊಡುಗೆ ನೀಡಿದರು. ಸ್ಯಾಮ್​ ಕರನ್​ 22 ಎಸೆತಗಳಲ್ಲಿ 22 ಶಾರುಖ್​ ಖಾನ್​​ 9 ಎಸೆತಗಳಲ್ಲಿ 22 ರನ್​ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು.

4 / 8
ರನ್​ ಗಳಿಸಲು ಪರದಾಡಿದ ರಾಜಪಕ್ಸೆ 26 ಎಸೆತಗಳಲ್ಲಿ 20 ರನ್​ ಗಳಿಸಿ ಅಲ್ಜಾರಿ ಜೋಸೆಫ್​ ಬೌಲಿಂಗ್​​ನಲ್ಲಿ ನಿರ್ಗಮಿಸಿದರು. ಪಂಜಾಬ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು. ಜಿಟಿ ಪರ ಮೊಹಿತ್ ಶರ್ಮಾ 4 ಓವರ್​​ಗೆ 18 ರನ್ ನೀಡಿ 2 ವಿಕೆಟ್ ಪಡೆದರು.

5 / 8
154 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಗುಜರಾತ್​ ತಂಡ ಉತ್ತಮ ಆರಂಭ ಪಡೆಯಿತು. ವೃದ್ಧಿಮಾನ್ ಸಹಾ 30 ಬಾರಿಸಿದರು. ​ಕೊನೆಯ ಓವರ್​ವರೆಗೂ ಕ್ರೀಸ್​ನಲ್ಲಿದ್ದ ಶುಭಮನ್ ಗಿಲ್​ ಆರ್ಕಷಕ ಅರ್ಧಶತಕ ಬಾರಿಸಿದರು.

6 / 8
ಗಿಲ್ 49 ಬಾಲ್​ಗಳಲ್ಲಿ 7 ಬೌಂಡರಿಗಳು ಮತ್ತು ಒಂದು ಸಿಕ್ಸರ್​ ಸಮೇತ 67 ರನ್​ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸಾಯಿ ಸುದರ್ಶನ್ 19 ರನ್​ ಮತ್ತು ನಂತರದಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ 8 ರನ್​ಗೆ ವಿಕೆಟ್​ ಒಪ್ಪಿಸಿದರು.

7 / 8
ಡೇವಿಡ್​ ಮಿಲ್ಲರ್​ ಅಜೇಯ 17 ರನ್​ ಹಾಗೂ ರಾಹುಲ್ ತೇವಾಟಿಯಾ ಅಜೇಯ 5 ರನ್​ಗಳೊಂದಿಗೆ ಗುಜರಾತ್​ ಕೊನೆಯ ಓವರ್​ನಲ್ಲಿ ಒಂದು ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು.

8 / 8
Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?

ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ

ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ

ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ

ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್

ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!

ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್