Jos Buttler: ಜೋಸ್ ಬಟ್ಲರ್​ಗೆ 40 ಕೋಟಿ ರೂ. ಆಫರ್ ನೀಡಿದ ರಾಜಸ್ಥಾನ್ ರಾಯಲ್ಸ್..!

| Updated By: ಝಾಹಿರ್ ಯೂಸುಫ್

Updated on: Jul 01, 2023 | 10:59 PM

Rajasthan Royals: ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ರಾಷ್ಟ್ರೀಯ ತಂಡದ ಒಪ್ಪಂದವನ್ನು ಕೊನೆಗೊಳಿಸಿ ಮೇಜರ್ ಲೀಗ್ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್ ಕೂಡ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಜೊತೆಗಿನ ಒಪ್ಪಂದ ಕೊನೆಗೊಳಿಸಿದ್ದಾರೆ.

1 / 6
ಇಂಗ್ಲೆಂಡ್ ಟಿ20 ತಂಡದ ನಾಯಕ ಜೋಸ್ ಬಟ್ಲರ್​ಗೆ (Jos Buttler) ರಾಜಸ್ಥಾನ್ ರಾಯಲ್ಸ್ (Rajasthan Royals) ಬರೋಬ್ಬರಿ 40 ಕೋಟಿ ರೂ. ಆಫರ್ ನೀಡಿದೆ. ಆದರೆ ಇದು ಐಪಿಎಲ್ ಆಡಲು ಅಲ್ಲ. ಬದಲಾಗಿ ಇನ್ನಿತರೆ ಟಿ20 ಲೀಗ್​ಗಳಲ್ಲಿ ಕಣಕ್ಕಿಳಿಯಲು ಎಂಬುದು ವಿಶೇಷ.

2 / 6
ಅಂದರೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಪಾರ್ಲ್​ ರಾಯಲ್ಸ್​ ಹಾಗೂ ವೆಸ್ಟ್ ಇಂಡೀಸ್​ನ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡಗಳನ್ನು ಹೊಂದಿದೆ. ಹಾಗೆಯೇ ಇನ್ನಿತರ ಲೀಗ್​ಗಳಲ್ಲೂ ಹೊಸ ತಂಡಗಳನ್ನು ಖರೀದಿಸಲು ಆಸಕ್ತಿ ಹೊಂದಿದೆ.

3 / 6
ಈ ಎಲ್ಲಾ ತಂಡಗಳ ಪರ ಆಡಲು ಜೋಸ್ ಬಟ್ಲರ್ ಜೊತೆ ಖಾಯಂ ಒಪ್ಪಂದ ಮಾಡಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಇಂಗ್ಲೆಂಡ್ ಆಟಗಾರನಿಗೆ ಆರ್​ಆರ್​ ಫ್ರಾಂಚೈಸಿ ನೀಡಿದ ಆಫರ್ ಬರೋಬ್ಬರಿ 40 ಕೋಟಿ ರೂ.

4 / 6
ಆದರೆ ಇದಕ್ಕಾಗಿ ರಾಷ್ಟ್ರೀಯ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಈಗಾಗಲೇ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ರಾಷ್ಟ್ರೀಯ ತಂಡದ ಒಪ್ಪಂದವನ್ನು ಕೊನೆಗೊಳಿಸಿ ಮೇಜರ್ ಲೀಗ್ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್ ಕೂಡ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಜೊತೆಗಿನ ಒಪ್ಪಂದ ಕೊನೆಗೊಳಿಸಿದ್ದಾರೆ. ಅಲ್ಲದೆ ಲೀಗ್​ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ.

5 / 6
ಇದೇ ಮಾದರಿಯಲ್ಲಿ ಜೋಸ್ ಬಟ್ಲರ್​ಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 40 ಕೋಟಿ ರೂ.ಗಳ ಆಫರ್ ನೀಡಿದೆ. ಇದಕ್ಕಾಗಿ ಬಟ್ಲರ್ ರಾಷ್ಟ್ರೀಯ ಒಪ್ಪಂದ ಕೊನೆಗೊಳಿಸಬೇಕಾಗಿ ಬರಬಹುದು.

6 / 6
ಏಕೆಂದರೆ ಈ ಒಪ್ಪಂದಗಳ ಪ್ರಕಾರ ಫ್ರಾಂಚೈಸಿ ಲೀಗ್​ಗಳ ಪಂದ್ಯಗಳಿರುವಾಗ ಅವರು ರಾಷ್ಟ್ರೀಯ ತಂಡದ ಪರ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಟ್ಲರ್ ಅವರ ಮುಂದಿನ ನಡೆಯೇನು ಎಂಬುದೇ ಈಗ ಕುತೂಹಲ.

Published On - 10:54 pm, Sat, 1 July 23