
ಗಾಯದ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಆರ್‌ಸಿಬಿ ನಾಯಕ ರಜತ್ ಪಾಟಿದರ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 55 ರನ್ಗಳಿಂದ ಸೋತಿತ್ತಾದರೂ, ರಜತ್ ಪಾಟಿದರ್ ಮಾತ್ರ ನಾಯಕನಾಗಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು ಅಗ್ರಸ್ಥಾನದಲ್ಲಿಯೇ ಉಳಿಯುವಂತೆ ಮಾಡಿದರು (PC- RCB X).

ಆರ್‌ಸಿಬಿ ಅಗ್ರಸ್ಥಾನದಲ್ಲಿ ಉಳಿಯಬೇಕಿದ್ದರೆ, ಸನ್‌ರೈಸರ್ಸ್ ತಂಡ ನೀಡಿದ್ದ 255 ರನ್ಗಳ ಗುರಿಯಲ್ಲಿ 166 ರನ್ ಬಾರಿಸಲೇಬೇಕಿತ್ತು. ಅದರಂತೆ ಗುರಿ ಬೆನ್ನಟ್ಟಿದ ಆರ್‌ಸಿಬಿ ಸುಲಭವಾಗಿ ಗುರಿ ಬೆನ್ನಟ್ಟುವ ಸುಳಿವು ನೀಡಿತ್ತು. ಆದರೆ ಒಂದರ ಹಿಂದೆ ಒಂದರಂತೆ ಮೂರು ವಿಕೆಟ್ಗಳು ಬಿದ್ದ ಬಳಿಕ ಗುರಿ ಬೆನ್ನಟ್ಟುವುದು ಕಷ್ಟಕರವಾಯಿತು. ಈ ಹಂತದಲ್ಲಿ ತಾಳ್ಮೆಯ ಇನ್ನಿಂಗ್ಸ್ ಆಡಿದ ನಾಯಕ ರಜತ್ ಪಾಟಿದರ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು (PC- RCB X).

ತಮ್ಮ ಇನ್ನಿಂಗ್ಸ್ನಲ್ಲಿ 39 ಎಸೆತಗಳನ್ನು ಎದುರಿಸಿದ ರಜತ್ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 56 ರನ್ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ ಏಕೈಕ ಸಿಕ್ಸರ್ ಬಾರಿಸುವ ಮೂಲಕ ರಜತ್, ಐಪಿಎಲ್‌ನಲ್ಲಿ ಸಿಕ್ಸರ್‌ಗಳ ಶತಕವನ್ನು ಪೂರೈಸಿದರು. ಈ ಮೂಲಕ ಪಾಟಿದಾರ್ ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು (PC- RCB X).

ವಾಸ್ತವವಾಗಿ ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಆಂಡ್ರೆ ರಸೆಲ್ ಹೆಸರಿನಲ್ಲಿದೆ. ರಸೆಲ್ 657 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ನಿಕೋಲಸ್ ಪೂರನ್ ಎರಡನೇ ಸ್ಥಾನದಲ್ಲಿದ್ದು, ಅವರು 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು 884 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಕೇವಲ 933 ಎಸೆತಗಳಲ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿರುವ ಪಾಟಿದಾರ್ ಹೆಸರು ಮೂರನೇ ಸ್ಥಾನದಲ್ಲಿದೆ (PC- RCB X).

ಈ ಪಟ್ಟಿಯಲ್ಲಿ ಪಾಟಿದಾರ್ ನಂತರ ಕ್ರಮವಾಗಿ 943, 950 ಮತ್ತು 992 ಎಸೆತಗಳಲ್ಲಿ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಕ್ರಿಸ್ ಗೇಲ್, ಸುನಿಲ್ ನರೈನ್ ಮತ್ತು ಶಿವಂ ದುಬೆ ಇದ್ದಾರೆ. ಮಾತ್ರವಲ್ಲದೆ ಪಾಟಿದಾರ್, ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶಿವಂ ದುಬೆ ಅವರ (992 ಎಸೆತಗಳು) ದಾಖಲೆಯನ್ನು ಮುರಿದರು (PC- RCB X).