IND vs SL: ಕಪಿಲ್ ದೇವ್ ನಂತರ ಈ ಸಾಧನೆ ಮಾಡಿದ ಏಕೈಕ ಆಲ್‌ರೌಂಡರ್ ಜಡೇಜಾ

Updated on: Aug 17, 2026 | 8:00 PM

Ravindra Jadeja: ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ 350 ಟೆಸ್ಟ್ ವಿಕೆಟ್‌ಗಳನ್ನು ಪೂರೈಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 4000+ ರನ್‌ಗಳು ಮತ್ತು 350+ ವಿಕೆಟ್‌ಗಳ ಮೈಲಿಗಲ್ಲು ದಾಟಿದ ವಿಶ್ವದ ನಾಲ್ಕನೇ, ಭಾರತದ ಎರಡನೇ ಆಲ್‌ರೌಂಡರ್ ಎನಿಸಿದ್ದಾರೆ. ಕಪಿಲ್ ದೇವ್ ಅವರಂತಹ ದಿಗ್ಗಜರ ಪಟ್ಟಿಗೆ ಸೇರ್ಪಡೆಯಾಗಿ, ಭಾರತೀಯ ಕ್ರಿಕೆಟ್‌ಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

1 / 6
ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದು ಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ ಈ ಮೂರು ವಿಕೆಟ್​ಗಳಿಂದಾಗಿ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ದಾಟಿದ್ದಾರೆ(PC-PTI).

ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದು ಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ ಈ ಮೂರು ವಿಕೆಟ್​ಗಳಿಂದಾಗಿ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ದಾಟಿದ್ದಾರೆ(PC-PTI).

2 / 6

ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಕೇಶರ ನುವಂತಾ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ 350 ವಿಕೆಟ್​ಗಳ ಗಡಿ ದಾಟಿದರು. ಇದರೊಂದಿಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ 4,000+ ರನ್‌ಗಳು ಮತ್ತು 350+ ವಿಕೆಟ್‌ಗಳನ್ನು ಪಡೆದ ಆಲ್‌ರೌಂಡರ್‌ಗಳ ಎಲೈಟ್ ಕ್ಲಬ್‌ಗೆ ಜಡೇಜಾ ಸೇರ್ಪಡೆಗೊಂಡಿದ್ದಾರೆ(PC-PTI).

3 / 6

ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 4,000 ಕ್ಕೂ ಹೆಚ್ಚು ರನ್ ಗಳಿಸಿ 350 ವಿಕೆಟ್ ಪಡೆದ ವಿಶ್ವದ ನಾಲ್ಕನೇ ಆಲ್‌ರೌಂಡರ್ ಮತ್ತು ಭಾರತದ ಎರಡನೇ ಆಲ್‌ರೌಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಡೇಜಾಗಿಂತ ಮೊದಲು ಇಯಾನ್ ಬೋಥಮ್, ಕಪಿಲ್ ದೇವ್ ಮತ್ತು ಡೇನಿಯಲ್ ವೆಟ್ಟೋರಿ ಈ ಸಾಧನೆ ಮಾಡಿದ್ದಾರೆ(PC-PTI).

4 / 6

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಯಾನ್ ಬೋಥಮ್ 5200 ರನ್‌ಗಳು ಮತ್ತು 383 ವಿಕೆಟ್‌ಗಳನ್ನು ಪಡೆದಿದ್ದರೆ, ಕಪಿಲ್ ದೇವ್ 5248 ರನ್‌ಗಳು ಮತ್ತು 434 ವಿಕೆಟ್‌ಗಳನ್ನು ಕಬಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಡೇನಿಯಲ್ ವೆಟ್ಟೋರಿ 4531 ರನ್‌ಗಳು ಮತ್ತು 362 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ ಜಡೇಜಾ ನಾಲ್ಕನೇ ಸ್ಥಾನಕ್ಕೇರಿದ್ದಾರೆ(PC-PTI).

5 / 6

ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಐದನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನಿಲ್ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ 537 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕಪಿಲ್ ದೇವ್ ಕೂಡ 434 ವಿಕೆಟ್‌ಗಳನ್ನು ಪಡೆದಿದ್ದಾರೆ(PC-PTI).

6 / 6

ಹರ್ಭಜನ್ ಸಿಂಗ್ ಕೂಡ 417 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈಗ ಜಡೇಜಾ ಕೂಡ ಈ ಪಟ್ಟಿಗೆ ಸೇರಿದ್ದಾರೆ. 350 ವಿಕೆಟ್‌ಗಳೊಂದಿಗೆ, ಜಡೇಜಾ ಎಡಗೈ ಸ್ಪಿನ್ನರ್‌ಗಳ ಸಾರ್ವಕಾಲಿಕ ಪಟ್ಟಿಯಲ್ಲಿ ವಿಶ್ವದ ಮೂರನೇ ಸ್ಥಾನವನ್ನು ತಲುಪಿದ್ದಾರೆ. ಈಗ ರಂಗನ ಹೆರಾತ್ ಮತ್ತು ಡೇನಿಯಲ್ ವೆಟ್ಟೋರಿ ಮಾತ್ರ ಜಡೇಜಾಗಿಂತ ಮುಂದಿದ್ದಾರೆ(PC-PTI).

Loading...
Unable to load recommendations.
Follow Us