- Kannada News Photo gallery Cricket photos Hardik Pandya's Historic 100th T20I Wicket vs South Africa: A Fast Bowler's Record
IND vs SA: ಮೊಟ್ಟ ಮೊದಲ ಬೌಲಿಂಗ್ ಆಲ್‌ರೌಂಡರ್; ಇತಿಹಾಸ ಸೃಷ್ಟಿಸಲಿರುವ ಹಾರ್ದಿಕ್ ಪಾಂಡ್ಯ
Hardik Pandya Record: ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಐತಿಹಾಸಿಕ ಸಾಧನೆಗೆ ಸಜ್ಜಾಗಿದ್ದಾರೆ. ಅವರು 100 ಟಿ20ಐ ವಿಕೆಟ್‌ಗಳನ್ನು ಪೂರೈಸುವ ಮೂಲಕ ಈ ಸಾಧನೆ ಮಾಡಿದ ಮೊದಲ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಲಿದ್ದಾರೆ. ಅಲ್ಲದೆ, 1000 ರನ್ ಮತ್ತು 100 ವಿಕೆಟ್ ಪಡೆದ ನಾಲ್ಕನೇ ಕ್ರಿಕೆಟಿಗರೆನಿಸಲಿದ್ದಾರೆ. ಸ್ಪಿನ್ ಆಲ್‌ರೌಂಡರ್‌ಗಳಿಂದ ಭಿನ್ನವಾಗಿ, ಹಾರ್ದಿಕ್ ವೇಗದ ಬೌಲರ್ ಆಗಿ ಈ ದಾಖಲೆ ಬರೆಯುವುದು ವಿಶೇಷವಾಗಿದೆ.
Updated on: Dec 11, 2025 | 4:49 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20ಐ ಚಂಡೀಗಢದ ಹೊಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಲ್ಲನ್‌ಪುರದಲ್ಲಿ ಹೊಸದಾಗಿ ಪೂರ್ಣಗೊಂಡ ಕ್ರೀಡಾಂಗಣದಲ್ಲಿ ಪುರುಷರ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಕಟಕ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಂದು ಇತಿಹಾಸ ರಚಿಸಲು ಎದುರು ನೋಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸೃಷ್ಟಿಸಲಿರುವ ಇತಿಹಾಸವನ್ನು ಬೇರೆ ಯಾರೂ ಮಾಡಿಲ್ಲ ಎಂದಲ್ಲ . ಅವರಿಗಿಂತ ಮೊದಲು ಮೂರು ಅಥವಾ ನಾಲ್ಕು ಆಟಗಾರರು ಟಿ20ಯಲ್ಲಿ ಆ ಸಾಧನೆ ಮಾಡಿದ್ದಾರೆ. ಆದರೆ ಈಗ ಹಾರ್ದಿಕ್ ಪಾಂಡ್ಯ ಆ ಪಟ್ಟಿಗೆ ಸೇರಿದಾಗ, ಅವರು ಇತರರಿಗಿಂತ ಸ್ವಲ್ಪ ಭಿನ್ನವಾಗಿರುತ್ತಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 100ವಿಕೆಟ್ ಪೂರೈಸಲಿದ್ದಾರೆ. ಮೊದಲ ಟಿ20ಯಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ್ದ ಹಾರ್ದಿಕ್ ಇದೀಗ 100 ವಿಕೆಟ್‌ಗಳನ್ನು ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ವೇಗದ ಬೌಲಿಂಗ್ ಆಲ್‌ರೌಂಡರ್ ಎನಿಸಿಕೊಳ್ಳಲಿದ್ದಾರೆ.

ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ಅವರಿಗಿಂತ ಮೊದಲು ಈ ಸಾಧನೆ ಮಾಡಿದ ಮೂವರು ಆಟಗಾರರೆಂದರೆ ಜಿಂಬಾಬ್ವೆಯ ಸಿಕಂದರ್ ರಜಾ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಮತ್ತು ಮಲೇಷ್ಯಾದ ವೀರಂದೀಪ್ ಸಿಂಗ್. ಆದರೆ ಈ ಮೂವರೂ ಸ್ಪಿನ್ ಆಲ್‌ರೌಂಡರ್‌ಗಳಾಗಿದ್ದು, ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20ಯಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ, ಹಾರ್ದಿಕ್ ಪಾಂಡ್ಯ ಪುರುಷರ ಟಿ20ಯಲ್ಲಿ 1,000 ರನ್ ಗಳಿಸಿದ ಮತ್ತು 100 ವಿಕೆಟ್ ಪಡೆದ ನಾಲ್ಕನೇ ಕ್ರಿಕೆಟಿಗನಾಗಲಿದ್ದಾರೆ. ಹಾರ್ದಿಕ್ಗಿಂತ ಮೊದಲು, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಮತ್ತು ಜಿಂಬಾಬ್ವೆಯ ಸಿಕಂದರ್ ರಜಾ ಈ ಸಾಧನೆ ಮಾಡಿದ್ದಾರೆ. ಆದಾಗ್ಯೂ, ಮೂವರೂ ಸ್ಪಿನ್ ಆಲ್‌ರೌಂಡರ್‌ಗಳಾಗಿದ್ದಾರೆ.




