RCB: ಕೊಹ್ಲಿ, ರಾಹುಲ್, ಪಂತ್ ಅಲ್ಲ; ಆರ್​ಸಿಬಿಗೆ ಈತನೇ ಸೂಕ್ತ ನಾಯಕ ಎಂದ ರಾಬಿನ್ ಉತ್ತಪ್ಪ

Updated on: Nov 20, 2024 | 10:39 PM

RCB: ಐಪಿಎಲ್ ಮೆಗಾ ಹರಾಜು ಸಮೀಪಿಸುತ್ತಿದ್ದಂತೆ, ಆರ್‌ಸಿಬಿ ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, ರಜತ್ ಪಾಟೀದಾರ್ ಅವರನ್ನು ಆರ್​ಸಿಬಿ ನಾಯಕನನ್ನಾಗಿ ನೇಮಿಸುವಂತೆ ಸಲಹೆ ನೀಡಿದ್ದಾರೆ.

1 / 6
ಐಪಿಎಲ್ ಮೆಗಾ ಹರಾಜಿಗೆ ಇನ್ನ ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿವೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ ತಂಡಗಳಿಗಿಂತ ಮಿಗಿಲಾಗಿ ಆರ್​ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಆಟಗಾರರು ಹಾಗೂ ನಾಯಕರನ್ನು ಹುಡುಕುತ್ತಿದೆ.

ಐಪಿಎಲ್ ಮೆಗಾ ಹರಾಜಿಗೆ ಇನ್ನ ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿವೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ ತಂಡಗಳಿಗಿಂತ ಮಿಗಿಲಾಗಿ ಆರ್​ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಆಟಗಾರರು ಹಾಗೂ ನಾಯಕರನ್ನು ಹುಡುಕುತ್ತಿದೆ.

2 / 6

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕೇವಲ 3 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ಕಳೆದ ಸೀಸನ್​ನವರೆಗೆ ಈ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಅವರ ಹೆಸರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡ ಮುಂದಿನ ಸೀಸನ್‌ನಲ್ಲಿ ಹೊಸ ನಾಯಕನೊಂದಿಗೆ ಆಡುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ, ಆರ್​ಸಿಬಿಯ ನಾಯಕನ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

3 / 6

ರಾಯಲ್ ಚಾಲೆಂಜರ್ಸ್ ಬೆಂಗಳೂರು ರಜತ್ ಪಾಟಿದಾರ್ ಅವರನ್ನು ತಂಡದ ನಾಯಕನನ್ನಾಗಿ ಮಾಡಬೇಕು ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ನಾಯಕನ ಪಾತ್ರದಲ್ಲಿ ರಜತ್ ಪಾಟಿದಾರ್ ಅವರನ್ನು ನೋಡಬೇಕೆಂದು ನಾನು ಭಾವಿಸುತ್ತೇನೆ. ಏಕೆಂದರೆ ಎರಡು ವರ್ಷಗಳ ನಂತರ ಆರ್​ಸಿಬಿಗೆ ಹೊಸ ನಾಯಕನ ಅಗತ್ಯ ಎದುರಾಗಿದೆ. ಆದ್ದರಿಂದ, ರಜತ್​ ಪಾಟಿದರ್ ಮೇಲೆ ನಂಬಿಕೆ ಇಡಬಹುದು. ಇದರಿಂದ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ರಜತ್ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು ಎಂದಿದ್ದಾರೆ.

4 / 6

ರಜತ್ ಪಾಟಿದಾರ್ ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 27 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 34.73 ಸರಾಸರಿಯಲ್ಲಿ 799 ರನ್ ಗಳಿಸಿದ್ದಾರೆ. ರಜತ್ ಪಾಟಿದಾರ್ ಐಪಿಎಲ್‌ನಲ್ಲಿ 7 ಅರ್ಧ ಶತಕ ಮತ್ತು 1 ಶತಕವನ್ನು ಸಹ ಸಿಡಿಸಿದ್ದಾರೆ. 2022ರ ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಅವರು ಲಕ್ನೋ ವಿರುದ್ಧ ಈ ಶತಕವನ್ನು ಸಿಡಿಸಿದ್ದರು.

5 / 6

ಇದಲ್ಲದೇ ರಜತ್ ಪಾಟಿದಾರ್ ಟೀಂ ಇಂಡಿಯಾ ಪರ 3 ಟೆಸ್ಟ್ ಪಂದ್ಯ ಹಾಗೂ 1 ಏಕದಿನ ಪಂದ್ಯವನ್ನೂ ಆಡಿದ್ದಾರೆ. ಟೆಸ್ಟ್‌ನಲ್ಲಿ, ಅವರು 10.50 ಸರಾಸರಿಯಲ್ಲಿ ಕೇವಲ 63 ರನ್‌ ಗಳಿಸಿದರೆ, ಏಕದಿನದಲ್ಲಿ 22 ರನ್‌ಗಳ ಇನ್ನಿಂಗ್ಸ್‌ ಆಡಿದ್ದಾರೆ. ಆದರೂ ಅವರು ಟೀಂ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ.

6 / 6

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕೇವಲ 3 ಆಟಗಾರರನ್ನು ಉಳಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆರ್‌ಸಿಬಿ ವಿರಾಟ್ ಕೊಹ್ಲಿಯನ್ನು ಗರಿಷ್ಠ 21 ಕೋಟಿ ರೂ., ರಜತ್ ಪಾಟಿದಾರ್ ಅವರನ್ನು 11 ಕೋಟಿಗೆ ಉಳಿಸಿಕೊಂಡಿದ್ದರೆ, ಯಶ್ ದಯಾಳ್ ಅವರನ್ನು 5 ಕೋಟಿಗೆ ಉಳಿಸಿಕೊಳ್ಳಲಾಗಿದೆ. ಪ್ರಸ್ತುತ ತಂಡದ ಬಳಿ 83 ಕೋಟಿ ರೂ ಹಣವಿದ್ದು, 3 ಮ್ಯಾಚ್ ಕಾರ್ಡ್‌ ಆಯ್ಕೆಯನ್ನು ಹೊಂದಿದೆ.

Published On - 10:39 pm, Wed, 20 November 24

Loading...
Unable to load recommendations.
Follow Us