IPL 2026: ಈ ಐಪಿಎಲ್‌ನಲ್ಲಿ ರೋಹಿತ್ ‘ಇಂಪ್ಯಾಕ್ಟ್’ ಹೇಗಿರಲಿದೆ? ಸ್ಪಷ್ಟನೆ ನೀಡಿದ ಹೆಡ್​ ಕೋಚ್

Updated on: Mar 17, 2026 | 8:23 PM

Rohit Sharma in IPL 2026: IPL 2026 ರಲ್ಲಿ ರೋಹಿತ್ ಶರ್ಮಾ ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಉಳಿಯುವುದಿಲ್ಲ. ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ, ರೋಹಿತ್ ಈ ಬಾರಿ ಹೆಚ್ಚಿನ ಪಂದ್ಯಗಳಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಫಿಟ್ನೆಸ್ ಕಾರಣದಿಂದ ಪೂರ್ಣ ಸಮಯ ಆಡಿರಲಿಲ್ಲ. ಆದರೆ, ಈ ಬಾರಿ ಅಭಿಮಾನಿಗಳು ರೋಹಿತ್ ಅವರ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ ಕೂಡ ವೀಕ್ಷಿಸಲು ಸಜ್ಜಾಗಿದ್ದಾರೆ, ಇದು ಅಭಿಮಾನಿಗಳ ಸಂತಸ ಹೆಚ್ಚಿಸಿದೆ.

1 / 6
2026 ರ ಐಪಿಎಲ್ ಸಮೀಪಿಸುತ್ತಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಭಿಮಾನಿಗಳು ಈ ಚುಟುಕು ಮಾದರಿಯಲ್ಲಿ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಕಾರಣ, ಇವರಿಬ್ಬರು ಈ ಮಾದರಿಯಲ್ಲಿ ಆಡುವುದು ಐಪಿಎಲ್‌ನಲ್ಲಿ ಮಾತ್ರ. ಹೀಗಾಗಿ ಈ ಇಬ್ಬರು ದಿಗ್ಗಜರು ವರ್ಷದ ನಂತರ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.

2026 ರ ಐಪಿಎಲ್ ಸಮೀಪಿಸುತ್ತಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಭಿಮಾನಿಗಳು ಈ ಚುಟುಕು ಮಾದರಿಯಲ್ಲಿ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಕಾರಣ, ಇವರಿಬ್ಬರು ಈ ಮಾದರಿಯಲ್ಲಿ ಆಡುವುದು ಐಪಿಎಲ್‌ನಲ್ಲಿ ಮಾತ್ರ. ಹೀಗಾಗಿ ಈ ಇಬ್ಬರು ದಿಗ್ಗಜರು ವರ್ಷದ ನಂತರ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.

2 / 6

ಅದರಲ್ಲೂ ಹಿಟ್​ಮ್ಯಾನ್ ರೋಹಿತ್ ಶರ್ಮಾ ಈ ಲೀಗ್​ಗಾಗಿ ಸಾಕಷ್ಟು ಬೆವರು ಹರಿಸುತ್ತಿದ್ದು, ಅದರ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಇದೆಲ್ಲದರ ನಡುವೆ ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅವರ ಪಾತ್ರ ಕೇವಲ ಬ್ಯಾಟಿಂಗ್​ಗೆ ಮಾತ್ರ ಸೀಮಿತವಾಗಿರುತ್ತಾ? ಅಥವಾ ಇತರ ಆಟಗಾರರಂತೆ ಪೂರ್ಣ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

3 / 6

ಈ ಪ್ರಶ್ನೆಗೆ ಉತ್ತರಿಸಿರುವ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ ಜಯವರ್ಧನೆ, ‘ಈ ಬಾರಿ ರೋಹಿತ್ ಶರ್ಮಾ ಅವರ ಆಟ ಇಂಪ್ಯಾಕ್ಟ್ ಪ್ಲೇಯರ್​ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಅವರು ಐಪಿಎಲ್​ನ ಬಹುತೇಕ ಪಂದ್ಯಗಳಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಇದು ರೋಹಿತ್ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

4 / 6

ವಾಸ್ತವವಾಗಿ ಕಳೆದ ಕೆಲವು ಆವೃತ್ತಿಗಳಿಂದ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡುತ್ತಿದ್ದಾರೆ. ಅಂದರೆ ರೋಹಿತ್ ಕೇವಲ ಬ್ಯಾಟಿಂಗ್​ಗೆ ಮಾತ್ರ ಸೀಮಿತರಾಗಿರುತ್ತಿದ್ದರು. ಅದಾದ ಬಳಿಕ ರೋಹಿತ್ ಫೀಲ್ಡಿಂಗ್ ಮಾಡುತ್ತಿರಲಿಲ್ಲ ಮತ್ತು ಮೈದಾನದಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ರೋಹಿತ್ ಬ್ಯಾಟಿಂಗ್‌ ಜೊತೆಗೆ ಮೈದಾನದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

5 / 6

ಇದಕ್ಕೆ ಕಾರಣವನ್ನು ನೀಡಿರುವ ಜಯವರ್ಧನೆ, ‘ಕಳೆದ ಐಪಿಎಲ್ ಋತುವಿನಲ್ಲಿ ರೋಹಿತ್ ಫಿಟ್ನೆಸ್ ಸಮಸ್ಯೆಗಳನ್ನು ಹೊಂದಿದ್ದರು. ಹೀಗಾಗಿ ಅವರ ಕೆಲಸದ ಹೊರೆಯನ್ನು ನಿರ್ವಹಿಸುವ ಅಗತ್ಯವಿತ್ತು. ಅದರ ಹೊರತಾಗಿಯೂ, ಅವರು ಮೈದಾನದಲ್ಲಿರಲಿ ಅಥವಾ ಇಲ್ಲದಿರಲಿ, ತಂಡದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದ್ದರು. ಆದಾಗ್ಯೂ, ಈ ಬಾರಿಯ ಐಪಿಎಲ್​ನಲ್ಲಿ ಅವರು ಮೈದಾನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ತಂಡದ ಸಂಯೋಜನೆಯಲ್ಲಿ ಪಂದ್ಯದ ಪರಿಸ್ಥಿತಿ ಮತ್ತು ಸಮತೋಲನವನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದಿದ್ದಾರೆ.

6 / 6

ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, 272 ಪಂದ್ಯಗಳ 267 ಇನ್ನಿಂಗ್ಸ್‌ಗಳಲ್ಲಿ 7,046 ರನ್ ಗಳಿಸಿದ್ದಾರೆ. ಈ ರನ್‌ಗಳಲ್ಲಿ ಸುಮಾರು 6,000 ರನ್‌ಗಳು ಮುಂಬೈ ಇಂಡಿಯನ್ಸ್‌ ತಂಡದ ಪರವೆ ಬಂದಿವೆ. ರೋಹಿತ್ ಶರ್ಮಾ 2011 ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ್ದು, ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ.

Loading...
Unable to load recommendations.
Follow Us