AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊನ್ನೆ ಸುತ್ತುವುದರಲ್ಲಿ ಅಫ್ರಿದಿಯನ್ನು ಹಿಂದಿಕ್ಕಿದ ಸೈಮ್ ಅಯ್ಯೂಬ್

Saim Ayub's Duck record: ಟಿ20 ಕ್ರಿಕೆಟ್​ನಲ್ಲಿ ಸೈಮ್ ಅಯ್ಯೂಬ್ ಬೇಡದ ದಾಖಲೆ ಬರೆಯುವತ್ತ ದಾಪುಗಾಲಿಟ್ಟಿದ್ದಾರೆ. ಅದು ಸಹ ಡಕ್​ ಮ್ಯಾನ್ ಖ್ಯಾತಿಯ ಶಾಹಿದ್ ಅಫ್ರಿದಿಯ ದಾಖಲೆ ಮುರಿಯುವ ಮೂಲಕ. ಅಂದರೆ ಪಾಕಿಸ್ತಾನ್ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ 2ನೇ ಬ್ಯಾಟರ್ ಎಂಬ ಹೀನಾಯ ದಾಖಲೆಯೊಂದನ್ನು ಸೈಮ್ ಅಯ್ಯೂಬ್ ನಿರ್ಮಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Sep 27, 2025 | 9:04 AM

Share
ಈ ಬಾರಿಯ ಏಷ್ಯಾಕಪ್​ನಲ್ಲಿ ಹ್ಯಾಟ್ರಿಕ್ ಡಕ್​ ಔಟ್ ಆಗಿ ಅನಗತ್ಯ ದಾಖಲೆ ಬರೆದ ಪಾಕಿಸ್ತಾನ್ ತಂಡದ ಯುವ ದಾಂಡಿಗ ಸೈಮ್ ಅಯ್ಯೂಬ್ (Saim Ayub) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಅದು ಅತ್ಯಧಿಕ ಬಾರಿ ಸೊನ್ನೆ ಸುತ್ತುವ ಮೂಲಕ ಎಂಬುದು ವಿಶೇಷ.

1 / 5
ಪಾಕಿಸ್ತಾನ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆಗೆ ಔಟಾದ ದಾಖಲೆಗಳ ಪಟ್ಟಿಯಲ್ಲಿ ಮಾಜಿ ನಾಯಕ ಶಾಹಿದ್ ಅಫ್ರಿದಿ ದ್ವಿತೀಯ ಸ್ಥಾನದಲ್ಲಿದ್ದರು. ಅಫ್ರಿದಿ 90 ಇನಿಂಗ್ಸ್​ಗಳಲ್ಲಿ ಒಟ್ಟು 8 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

2 / 5
ಇದೀಗ ಸೈಮ್ ಅಯ್ಯೂಬ್ ಅಫ್ರಿದಿಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ಬಾರಿಯ ಏಷ್ಯಾಕಪ್​ನಲ್ಲಿ 6 ಇನಿಂಗ್ಸ್ ಆಡಿರುವ ಸೈಮ್ ಒಟ್ಟು 4 ಬಾರಿ ಡಕ್ ಔಟ್ ಆಗಿದ್ದಾರೆ. ಇದರೊಂದಿಗೆ ಸೈಮ್ ಅಯ್ಯೂಬ್ ಅವರ ಒಟ್ಟು ಸೊನ್ನೆಗಳ ಸಂಖ್ಯೆ 9 ಕ್ಕೇರಿದೆ.

3 / 5
ಈ ಮೂಲಕ ಪಾಕಿಸ್ತಾನ್ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಬೇಡದ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಸೈಮ್ ಇನ್ನೊಂದು ಬಾರಿ ಶೂನ್ಯಕ್ಕೆ ಔಟಾದಾರೆ ಸಾಕು.

4 / 5
ಸದ್ಯ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಉಮರ್ ಅಕ್ಮಲ್. ಪಾಕಿಸ್ತಾನ್ ಪರ 79 ಟಿ20 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಉಮರ್ ಅಕ್ಮಲ್ 10 ಬಾರಿ ಡಕ್ ಔಟ್ ಆಗಿದ್ದಾರೆ. ಇದೀಗ ಕೇವಲ 45 ಇನಿಂಗ್ಸ್​ಗಳಲ್ಲಿ 9 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವ ಸೈಮ್ ಅಯ್ಯೂಬ್ ಮುಂಬರುವ ದಿನಗಳಲ್ಲಿ ಬೇಡ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದನ್ನು ಎದುರು ನೋಡಬಹುದು.

5 / 5