AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಸೋಲು, ಸೋಲು, ಸೋಲು.. ನಾಯಕನಾಗಿ ‘ಶುಭ’ ಆರಂಭ ಮಾಡದ ಗಿಲ್

Shubman Gill's Unwanted Captaincy Record: ಶುಭ್​ಮನ್ ಗಿಲ್ ಟೆಸ್ಟ್, ಏಕದಿನ, ಟಿ20, ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಸೇರಿದಂತೆ ಎಲ್ಲ ಸ್ವರೂಪಗಳ ನಾಯಕತ್ವ ವಹಿಸಿಕೊಂಡ ತಮ್ಮ ಮೊದಲ ಪಂದ್ಯದಲ್ಲಿ ಸೋತ ಮೊದಲ ಭಾರತೀಯ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿಗಿಂತಲೂ ಭಿನ್ನವಾಗಿ, ಗಿಲ್ ಈ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಅನಪೇಕ್ಷಿತ ಐತಿಹಾಸಿಕ ಆರಂಭ ಕಂಡಿದ್ದಾರೆ.

ಪೃಥ್ವಿಶಂಕರ
|

Updated on:Oct 19, 2025 | 7:32 PM

Share
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಂತೆಯೇ, ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯೂ ಕೂಡ ಸೋಲಿನೊಂದಿಗೆ ಪ್ರಾರಂಭವಾಗಿದೆ. ಈ ಮೂಲಕ ಶುಭ್​ಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಮಾದರಿಗಳೆರಡರಲ್ಲೂ ಪೂರ್ಣ ಪ್ರಮಾಣದ ನಾಯಕರಾಗಿ ತಮ್ಮ ಮೊದಲ ಪಂದ್ಯದಲ್ಲೇ ಸೋಲನ್ನು ಎದುರಿಸಿ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

1 / 6
ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನು ಸೋತಿರುವ ಶುಭ್​ಮನ್ ಗಿಲ್ ಮುಜುಗರದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅದೆನೆಂದರೆ, ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಿಕೊಂಡು ಮೊದಲ ಪಂದ್ಯವನ್ನು ಸೋತ ಮೊದಲ ಭಾರತೀಯ ನಾಯಕ ಎಂಬ ಬೇಡದ ದಾಖಲೆಗೆ ಗಿಲ್ ಕೊರಳೊಡ್ಡಿದ್ದಾರೆ.

2 / 6
ಆಶ್ಚರ್ಯಕರ ಸಂಗತಿಯೆಂದರೆ ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ಇದೇ ರೀತಿಯ ಆರಂಭವನ್ನು ಪಡೆದುಕೊಂಡಿದ್ದರು. ಮತ್ತೊಂದು ಸಂಗತಿಯೆಂದರೆ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್ ಇಬ್ಬರೂ ಸಹ ನಾಯಕತ್ವ ವಹಿಸಿಕೊಂಡ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಸಹ ಸೋತಿದ್ದರು. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಸೋತ ಕಾರಣ ಶುಭ್​ಮನ್ ಗಿಲ್, ನಾಯಕನಾಗಿ ಮೊದಲ ಪಂದ್ಯ ಸೋತ ವಿಚಾರದಲ್ಲಿ ಕೊಹ್ಲಿಯನ್ನು ಮೀರಿಸಿದ್ದಾರೆ.

3 / 6
ವಾಸ್ತವವಾಗಿ, ಶುಭ್​ಮನ್ ಗಿಲ್ ಜಿಂಬಾಬ್ವೆ ವಿರುದ್ಧ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದರು. ಜುಲೈ 6, 2024 ರಂದು ಗಿಲ್ ನಾಯಕತ್ವದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ಈ ವರ್ಷ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕತ್ವವಹಿಸಿಕೊಂಡಿರುವ ಗಿಲ್, ಎರಡೂ ಮಾದರಿಯಲ್ಲು ಸೋಲಿನ ಆರಂಭ ಕಂಡಿದ್ದಾರೆ.

4 / 6
2025 ರ ಜೂನ್ 20 ರಂದು ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್ ಮೊದಲ ಬಾರಿಗೆ ತಂಡದ ನಾಯಕತ್ವವಹಿಸಿಕೊಂಡಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಇದೀಗ ಆಸೀಸ್ ಪ್ರವಾಸದಲ್ಲಿ ಏಕದಿನ ತಂಡದ ನಾಯಕತ್ವವಹಿಸಿಕೊಂಡಿರುವ ಗಿಲ್ ತಮ್ಮ ಮೊದಲ ಪಂದ್ಯವನ್ನು ಸೋತಿದ್ದಾರೆ. ಇದಲ್ಲದೆ ಐಪಿಎಲ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೂ ಸಹ ಗಿಲ್, ಪಂಜಾಬ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಿದ್ದರು.

5 / 6
ಗಿಲ್​ಗೂ ಮೊದಲು ವಿರಾಟ್ ಕೊಹ್ಲಿ ಈ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಆದರೆ ಅವರು ಎಂದಿಗೂ ತಮ್ಮ ರಾಜ್ಯ ತಂಡದ ನಾಯಕತ್ವವನ್ನು ವಹಿಸಿಕೊಂಡಿಲ್ಲ. ಪರಿಣಾಮವಾಗಿ, ಶುಭ್​ಮನ್ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್, ಐಪಿಎಲ್ ಮತ್ತು ವೃತ್ತಿಪರ ದೇಶೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಿಕೊಂಡು ತನ್ನ ಮೊದಲ ಪಂದ್ಯವನ್ನು ಸೋತ ಏಕೈಕ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.

6 / 6

Published On - 6:57 pm, Sun, 19 October 25

ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್

ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!

ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್

ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು

ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!

ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ

ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!

ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ

ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು