AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಪರ್ತ್​ ಮೈದಾನದಲ್ಲಿ ಕಿಂಗ್ ಕೊಹ್ಲಿಯ ಬಯಕೆ ಕೊನೆಗೂ ಈಡೇರಲಿಲ್ಲ

Virat Kohli's Perth Nightmare: ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಏಕದಿನದಲ್ಲಿ ಟೀಂ ಇಂಡಿಯಾ 136 ರನ್‌ಗಳಿಗೆ ಆಲೌಟ್ ಆಯಿತು. ಮಳೆಯಿಂದ 26 ಓವರ್‌ಗಳಿಗೆ ಇಳಿಕೆಯಾಗಿದ್ದ ಪಂದ್ಯದಲ್ಲಿ, ರೋಹಿತ್ ಹಾಗೂ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ಅದರಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿ ಪರ್ತ್‌ನಲ್ಲಿ ಶತಕ ಬಾರಿಸುವ ಕನಸನ್ನು ಭಗ್ನಗೊಳಿಸಿದರು. ಈ ಸರಣಿ ಅವರ ವಿಶ್ವಕಪ್ ಭವಿಷ್ಯಕ್ಕೆ ನಿರ್ಣಾಯಕವಾಗಿದೆ.

ಪೃಥ್ವಿಶಂಕರ
|

Updated on:Oct 19, 2025 | 3:45 PM

Share
ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 136 ರನ್ ಕಲೆಹಾಕಿದೆ. ವಾಸ್ತವವಾಗಿ ಮಳೆಯಿಂದಾಗಿ ಈ ಪಂದ್ಯವನ್ನು 26 ಓವರ್​ಗಳಿಗೆ ನಿಗದಿಪಡಿಲಾಗಿದೆ. ಆದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡುವಲಿ ಎಡವಿದೆ. ಹೀಗಾಗಿ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.

1 / 7
ಅದರಲ್ಲೂ 7 ತಿಂಗಳುಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಮರಳಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್​ನ ನಿರೀಕ್ಷೆ ಮಾಡಲಾಗಿತ್ತು. ಆದರೆ ಇವರಿಬ್ಬರು ಭಾರಿ ನಿರಾಸೆ ಮೂಡಿಸಿದರು. ನಾಯಕತ್ವ ಕಳೆದುಕೊಂಡ ಬಳಿಕ ಮೊದಲ ಪಂದ್ಯವನ್ನಾಡಿದ ರೋಹಿತ್ ಕೇವಲ 8 ರನ್​ಗಳಿಗೆ ಸುಸ್ತಾದರೆ, ಇತ್ತ ವಿರಾಟ್ ಕೊಹ್ಲಿಗೆ ಖಾತೆ ಕೂಡ ತೆರೆಯಲಾಗಲಿಲ್ಲ.

2 / 7
ಈ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡ ಕೊಹ್ಲಿಯ ಅದೊಂದು ಬಯಕೆ ಈಡೇರದೆ ಹಾಗೆಯೇ ಉಳಿದಂತ್ತಾಗಿದೆ. ವಾಸ್ತವವಾಗಿ ತಮ್ಮ ವೃತ್ತಿಜೀವನದಲ್ಲಿ ಭಾಗಶಃ ಮೈದಾನಗಳಲ್ಲಿ ಶತಕ ಸಿಡಿಸಿರುವ ಕೊಹ್ಲಿಗೆ, ಈ ಪರ್ತ್​ ಮೈದಾನದಲ್ಲಿ ಮಾತ್ರ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ನಡೆದ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿ ತಮ್ಮ ಬರವನ್ನು ನೀಗಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

3 / 7
ಪರ್ತ್‌ ಮೈದಾನದಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 60 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 242 ರನ್ ಗಳಿಸಿದ್ದಾರೆ. ಆದರೆ ಈ ಮೈದಾನದಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. 2012 ರಲ್ಲಿ ನಡೆದಿದ್ದ ಪಂದ್ಯದಲ್ಲಿ  77 ರನ್‌ಗಳಿಸಿ ಔಟಾಗಿದ್ದ ವಿರಾಟ್, 2016 ರಲ್ಲಿ ನಡೆದಿದ್ದ ಪಂದ್ಯದಲ್ಲಿ 91 ರನ್‌ಗಳಿಗೆ ಔಟಾಗಿದ್ದರು. ಅಂದರೆ ಪರ್ತ್​ ಮೈದಾನದಲ್ಲಿ ಕೊಹ್ಲಿ ಅತ್ಯಧಿಕ ಸ್ಕೋರ್ 91 ರನ್.

4 / 7
ಬರೋಬ್ಬರಿ 223 ದಿನಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ವಿರಾಟ್ ಕೊಹ್ಲಿಯಿಂದ ಭಾರತೀಯ ಅಭಿಮಾನಿಗಳು ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದರು. ಆದರೆ, ಕೇವಲ ಎಂಟು ಎಸೆತಗಳನ್ನು ಎದುರಿಸಿದ ಕೊಹ್ಲಿ, ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಶೂನ್ಯಕ್ಕೆ ಔಟಾದರು . ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 8 ಎಸೆತಗಳಲ್ಲಿ ಶೂನ್ಯಕ್ಕೆ ಔಟಾದ ಮೊದಲ ಪಂದ್ಯ ಇದಾಗಿದೆ.

5 / 7
ಈ ವಿಕೆಟ್ ಪಡೆಯುವ ಮೂಲಕ ಮಿಚೆಲ್ ಸ್ಟಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ನೇ ಬಾರಿಗೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು. ಈ ಪೈಕಿ, ಸ್ಟಾರ್ಕ್ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯನ್ನು ಎರಡು ಬಾರಿ ಔಟ್ ಮಾಡಿದ್ದಾರೆ.

6 / 7
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವಿರಾಟ್ ಕೊಹ್ಲಿಗೆ ನಿರ್ಣಾಯಕವಾಗಿದೆ. 2027 ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಅವರ ಆಶಯ ಈ ಸರಣಿಯ ಮೇಲೆ ನಿಂತಿದೆ. ಆದಾಗ್ಯೂ, ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿಫಲರಾಗಿರುವ ಕೊಹ್ಲಿ, ಉಳಿದ ಎರಡು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ.

7 / 7

Published On - 3:42 pm, Sun, 19 October 25