AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: ಶುಭ್​ಮನ್ ಶುಭಾರಂಭ: ಆರಂಭದಲ್ಲೇ 2 ದಾಖಲೆ ಉಡೀಸ್

Shubman Gill: 20 ಏಕದಿನ ಇನಿಂಗ್ಸ್​ಗಳಲ್ಲಿ ನಾಲ್ಕು ಬಾರಿ ಅಜೇಯರಾಗಿ ಉಳಿದಿದ್ದಾರೆ. ಇನ್ನು 1 ದ್ವಿಶತಕ, 3 ಶತಕ ಹಾಗೂ 5 ಅರ್ಧಶತಕದೊಂದಿಗೆ ಒಟ್ಟು 1064 ರನ್​ ಕಲೆಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 22, 2023 | 10:06 PM

ಶುಭ್​ಮನ್ ಗಿಲ್....ಟೀಮ್ ಇಂಡಿಯಾದ ಭರವಸೆಯ ಯುವ ಆಟಗಾರ. ಈಗಾಗಲೇ ಏಕದಿನ ಕ್ರಿಕೆಟ್​ನಲ್ಲಿ ರನ್​ ಮೇಲೆ ರನ್​ಗಳಿಸುತ್ತಾ ಮುನ್ನುಗ್ಗಿತ್ತಿದ್ದಾರೆ. ವಿಶೇಷ ಎಂದರೆ ಈ ಮುನ್ನುಗ್ಗುವಿಕೆಯ ನಡುವೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​ ಹಾಗೂ ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರನ್ನು ಹಿಂದಿಕಿದ್ದಾರೆ. ಹೀಗಾಗಿಯೇ ಶುಭ್​ಮನ್ ಗಿಲ್ ಟೀಮ್ ಇಂಡಿಯಾ ಪರ ಶುಭಾರಂಭ ಮಾಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ಅಂಕಿ ಅಂಶಗಳು.

1 / 8
ಹೌದು, ಶುಭ್​ಮನ್ ಗಿಲ್ ಟೀಮ್ ಇಂಡಿಯಾ ಪರ ಕೇವಲ 20 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ 20 ಇನಿಂಗ್ಸ್​ನಲ್ಲಿ 1 ದ್ವಿಶತಕ, 3 ಶತಕ ಹಾಗೂ 5 ಅರ್ಧಶತಕಗಳು ಮೂಡಿಬಂದಿವೆ. ಅಂದರೆ ಗಿಲ್​ 71.38 ಸರಾಸರಿಯಲ್ಲಿ ರನ್​ಗಳಿಸಿದ್ದಾರೆ.

2 / 8
ಹೀಗೆ ರನ್ ಪೇರಿಸುತ್ತಾ ಸಾಗುತ್ತಿರುವ ಶುಭ್​ಮನ್ ಗಿಲ್ ಹಳೆಯ ದಾಖಲೆಗಳನ್ನು ಕೂಡ ಮುರಿಯುತ್ತಿರುವುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ 500 ರನ್​ ಕಲೆಹಾಕಿದ ದಾಖಲೆ ಇದೀಗ ಶುಭ್​ಮನ್ ಹೆಸರಿನಲ್ಲಿದೆ.

3 / 8
ಈ ಹಿಂದೆ ಈ ದಾಖಲೆ ನವಜೋತ್ ಸಿಂಗ್ ಸಿಧು ಹೆಸರಿನಲ್ಲಿತ್ತು. ಸಿಧು ಮೊದಲ 11 ಇನಿಂಗ್ಸ್​ನಲ್ಲಿ 500 ರನ್ ಕಲೆಹಾಕಿದ್ದರು. ಆದರೆ ಯುವ ದಾಂಡಿಗ ಗಿಲ್ ಕೇವಲ 10 ಇನಿಂಗ್ಸ್​ನಲ್ಲಿ 500 ರನ್ ಪೇರಿಸುವ ಮೂಲಕ 1987 ರಲ್ಲಿ ಸಿಧು ಬರೆದಿಟ್ಟ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

4 / 8
ಅಷ್ಟೇ ಅಲ್ಲದೆ ಇದೀಗ ಅತ್ಯಂತ ವೇಗವಾಗಿ 1000 ರನ್ ಪೂರೈಸಿದ ಭಾರತೀಯ ಬ್ಯಾಟರ್​ ಎಂಬ ಹೆಗ್ಗಳಿಕೆಗೂ ಶುಭ್​ಮನ್ ಗಿಲ್ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಹೆಸರಿನಲ್ಲಿತ್ತು.

5 / 8
ಧವನ್ ಹಾಗೂ ಕೊಹ್ಲಿ 24 ಏಕದಿನ ಇನಿಂಗ್ಸ್​ ಮೂಲಕ ಸಾವಿರ ರನ್​ ಪೂರೈಸಿ ದಾಖಲೆ ಬರೆದಿದ್ದರು. ಆದರೆ ಇದೀಗ ಕೇವಲ 19 ಇನಿಂಗ್ಸ್​ ಮೂಲಕ ಶುಭ್​ಮನ್ ಗಿಲ್ ಸಾವಿರ ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಕಿಂಗ್ ಕೊಹ್ಲಿಗಿಂತ 5 ಇನಿಂಗ್ಸ್​ ಕಡಿಮೆ ಅವಧಿಯಲ್ಲಿ ಗಿಲ್ ಈ ಸಾಧನೆ ಮಾಡಿದ್ದಾರೆ.

6 / 8
ಪ್ರಸ್ತುತ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ 500 ಹಾಗೂ 1000 ರನ್​ ಕಲೆಹಾಕಿದ ದಾಖಲೆ ಶುಭ್​ಮನ್ ಗಿಲ್ ಹೆಸರಿನಲ್ಲಿದೆ. ಆರಂಭದಲ್ಲೇ 2 ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವ ಗಿಲ್ ಮುಂಬರುವ ದಿನಗಳಲ್ಲಿ ಮತ್ತಷ್ಟು ರೆಕಾರ್ಡ್​ಗಳನ್ನು ನಿರ್ಮಿಸುವುದರಲ್ಲಿ ಅನುಮಾನವೇ ಇಲ್ಲ.

7 / 8
ಏಕೆಂದರೆ ಆಡಿರುವ 20 ಏಕದಿನ ಇನಿಂಗ್ಸ್​ಗಳಲ್ಲಿ ನಾಲ್ಕು ಬಾರಿ ಅಜೇಯರಾಗಿ ಉಳಿದಿದ್ದಾರೆ. ಇನ್ನು 1 ದ್ವಿಶತಕ, 3 ಶತಕ ಹಾಗೂ 5 ಅರ್ಧಶತಕದೊಂದಿಗೆ ಒಟ್ಟು 1064 ರನ್​ ಕಲೆಹಾಕಿದ್ದಾರೆ. ಹೀಗಾಗಿಯೇ ಶುಭ್​ಮನ್ ಗಿಲ್ ಅವರನ್ನು ಭವಿಷ್ಯದ ಧ್ರುವತಾರೆ ಎಂದು ಬಣ್ಣಿಸಲಾಗುತ್ತಿದೆ.

Shubhman Gill

8 / 8
Follow us
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು

ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು

ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ

ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ

ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ

ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು

ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ

ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್

ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ

ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ