ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಲಕ್ಷ ಮೊತ್ತದ ಆಫರ್ ತಿರಸ್ಕರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದು ಕೂಡ ಬಿಗ್ ಬ್ಯಾಷ್ ಲೀಗ್ನ ಲಕ್ಷಗಳ ಆಫರ್ ಎಂಬುದು ವಿಶೇಷ.
ಸ್ಮೃತಿ ಮಂಧನಾ ಫೆಬ್ರವರಿಯಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಕಳೆದ ತಿಂಗಳ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಿಂಚಿದ್ದ ಮಂಧನಾ ಆ ಬಳಿಕ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಕೊಂಡಿದ್ದರು. ಇದೀಗ ಆತಿಥೇಯ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯ ಭಾಗವಾಗಿದ್ದಾರೆ.
ಆದರೆ ಇದರ ನಡುವೆ ಬಿಗ್ ಬ್ಯಾಷ್ ಲೀಗ್‌ನಿಂದ ಮಂಧನಾಗೆ ಬಿಗ್ ಆಫರ್ ಬಂದಿದೆ. ಆದರೆ ಮುಂಬರುವ ಸರಣಿಗಳಿಗಾಗಿ ಭಾರತದ ಪರ ಸ್ಮೃತಿ ಮಂಧನಾ ಈ ಆಫರ್ಗಳನ್ನು ತಿರಸ್ಕರಿಸಿದ್ದಾರೆ. ಇಂಗ್ಲೆಂಡ್ ಸರಣಿ ಬಳಿಕ ಫಿಟ್ನೆಸ್ನತ್ತ ಗಮನಹರಿಸಿ ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ಮಂಧನಾ ಬಿಗ್ ಬ್ಯಾಷ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ.
ಭಾರತಕ್ಕಾಗಿ ಆಡುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ. ಹೀಗಾಗಿ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು ಸ್ಮೃತಿ ಮಂಧನಾ ಹೇಳಿದ್ದಾರೆ.
ನಾನು ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ದೇಶಕ್ಕಾಗಿ ಆಡಲು ಬಯಸುತ್ತೇನೆ. ದೇಶಕ್ಕಾಗಿ 100 ಪ್ರತಿಶತವನ್ನು ನೀಡಲು ಇಚ್ಛಿಸುತ್ತೇನೆ. ಹಾಗಾಗಿ ಬಿಗ್ ಬ್ಯಾಷ್ ಲೀಗ್ನಲ್ಲಿ ಕಾಣಿಸಿಕೊಳ್ಳದೇ, ಅವಧಿಯಲ್ಲಿ ಫಿಟ್ನೆಸ್ನತ್ತ ಗಮನಹರಿಸುತ್ತೇನೆ. ಈ ಮೂಲಕ ದೇಶದ ಗೆಲುವಿಗಾಗಿ 100 ಪ್ರತಿಶತವನ್ನು ನೀಡಲು ಬಯಸುತ್ತೇನೆ ಎಂದು ಸ್ಮೃತಿ ಮಂಧಾನ ತಿಳಿಸಿದ್ದಾರೆ.
Published On - 2:10 pm, Tue, 13 September 22