Sourav Ganguly: ವಿರಾಟ್ ಕೊಹ್ಲಿ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ

Virat Kohli vs Sourav Ganguly: ವಿರಾಟ್ ಕೊಹ್ಲಿಯ ಹೇಳಿಕೆಗಳ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. (ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

TV9 Web
| Updated By: ಝಾಹಿರ್ ಯೂಸುಫ್

Updated on:Dec 16, 2021 | 8:26 PM

ಟೀಮ್ ಇಂಡಿಯಾ ಕ್ಯಾಪ್ಟನ್ಸಿ ವಿವಾದದ ಬಗ್ಗೆ ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೌನ ಮುರಿದಿದ್ದಾರೆ. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದರು. ಈ ವೇಳೆ  ಬಿಸಿಸಿಐ ಹಾಗೂ ಸೌರವ್ ಗಂಗೂಲಿ ನನ್ನೊಂದಿಗೆ ಟಿ20 ಕ್ಯಾಪ್ಟನ್ಸಿ ಬಿಡದಂತೆ ಯಾವುದೇ ಮನವಿ ಮಾಡಿರಲಿಲ್ಲ ಎಂದು ತಿಳಿಸಿದ್ದರು.

1 / 6
ಅಷ್ಟೇ ಅಲ್ಲದೆ ಏಕದಿನ ತಂಡದ ನಾಯಕನ ಸ್ಥಾನದಿಂದ ವಜಾಗೊಳಿಸುವ ಕೇವಲ ಒಂದುವರೆ ಗಂಟೆ ಮೊದಲು ನನಗೆ ಕರೆ ಮಾಡಿ ತಿಳಿಸಲಾಗಿತ್ತು. ಈ ಬಗ್ಗೆ ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು ಕೊಹ್ಲಿ ತಿಳಿಸಿದ್ದರು.

2 / 6
ಆದರೆ ಅತ್ತ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟಿ20 ನಾಯಕತ್ವ ತ್ಯಜಿಸದಂತೆ ಬಿಸಿಸಿಐ ವಿರಾಟ್ ಕೊಹ್ಲಿ ಅವರಲ್ಲಿ ಮನವಿ ಮಾಡಿತ್ತು. ಅಷ್ಟೇ ಅಲ್ಲದೆ ನಾನು ಕೂಡ ಅವರೊಂದಿಗೆ ಈ ಚರ್ಚಿಸಿದ್ದೆ. ಇದಾಗ್ಯೂ ಅವರು ನಮ್ಮ ಮಾತು ಕೇಳಿರಲಿಲ್ಲ ಎಂದು ತಿಳಿಸಿದ್ದರು.

3 / 6
ಅಷ್ಟೇ ಅಲ್ಲದೆ ಅವರು ಟಿ20 ನಾಯಕತ್ವ ತ್ಯಜಿಸಿದ ಪರಿಣಾಮ, ಆಯ್ಕೆದಾರರು ಏಕದಿನ ಹಾಗೂ ಟಿ20 ತಂಡಕ್ಕೆ ಒಬ್ಬನೇ ನಾಯಕನನ್ನು ಆಯ್ಕೆ ಮಾಡಿದೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಯಾರು ಕೂಡ ನನ್ನೊಂದಿಗೆ ಚರ್ಚಿಸಿಲ್ಲ ಎಂಬುದನ್ನು ಕೊಹ್ಲಿ ತಿಳಿಸುವ ಮೂಲಕ ಬಿಸಿಸಿಐ ಹೇಳುತ್ತಿರುವುದು ಸುಳ್ಳು ಎಂದು ಪರೋಕ್ಷವಾಗಿ ತಿಳಿಸಿದ್ದರು.

4 / 6
ಕೊಹ್ಲಿಯ ಈ ನೇರ ನುಡಿಗಳಿಂದಾಗಿ ಬಿಸಿಸಿಐ ಮುಜುಗರಕ್ಕೊಳಗಾಗಿತ್ತು. ಇದೀಗ ವಿರಾಟ್ ಕೊಹ್ಲಿಯ ಹೇಳಿಕೆಗಳ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ  ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ವಿಚಾರದ ಬಗ್ಗೆ ತಾನು ಸದ್ಯ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

5 / 6
ಅಷ್ಟೇ ಅಲ್ಲದೆ ಈ ವಿಚಾರವನ್ನು ಬಿಸಿಸಿಐ ಸೂಕ್ತವಾಗಿ ನಿಭಾಯಿಸಲಿದೆ. ಹೀಗಾಗಿ ಸದ್ಯ ನಾನು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಇದರೊಂದಿಗೆ ಬಿಸಿಸಿಐನ ಮುಂದಿನ ನಡೆಯೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಬಹಿರಂಗ ಹೇಳಿಕೆಗಳಿಂದ ಇದೀಗ ಬಿಸಿಸಿಐ ಮುಜುಗರಕ್ಕೊಳಗಾಗಿರುವುದಂತು ಸ್ಪಷ್ಟ.

6 / 6

Published On - 8:26 pm, Thu, 16 December 21

Follow us