IPL 2021: UAE ನಲ್ಲಿ ಯಾವ ತಂಡ ಬಲಿಷ್ಠ?
TV9 Web | Updated By: ಝಾಹಿರ್ ಯೂಸುಫ್
Updated on:
Sep 11, 2021 | 4:40 PM
IPL 2021: ಇನ್ನು ಕಳೆದ ಸೀಸನ್ ಯುಎಇ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಈ ಬಾರಿ ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 6 ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
1 / 9
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ ದ್ವಿತಿಯಾರ್ಧ ಶುರುವಾಗಲು ಇನ್ನು ವಾರಗಳು ಮಾತ್ರ ಉಳಿದಿವೆ. ಈಗಾಗಲೇ ಬಹುತೇಕ ತಂಡಗಳ ಆಟಗಾರರು ಯುಎಇನಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮುಖಾಮುಖಿಯೊಂದಿಗೆ ದ್ವಿತಿಯಾರ್ಧಕ್ಕೆ ಚಾಲನೆ ಸಿಗಲಿದೆ. ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಳಿದ 31 ಪಂದ್ಯಗಳು ನಡೆಯಲಿದ್ದು, ಈ ಹಿಂದಿನ ಲೆಕ್ಕಚಾರಗಳು ಮರಳುಗಾಡಿನ ಮೈದಾನದಲ್ಲಿ ತಲೆಕೆಳಗಾಗುವ ಸಾಧ್ಯತೆಯಿದೆ.
2 / 9
ಐಪಿಎಲ್ನ ದ್ವಿತಿಯಾರ್ಧಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ದ್ವಿತಿಯಾರ್ಧ ಆರಂಭಕ್ಕೂ ಮುನ್ನವೇ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.
3 / 9
ಒಟ್ಟಿನಲ್ಲಿ ಐಪಿಎಲ್ನಲ್ಲಿ 2011ರ ಬಳಿಕ ಮತ್ತೊಮ್ಮೆ 10 ತಂಡಗಳನ್ನು ಕಣಕ್ಕಿಳಿಯಲ್ಲಿದ್ದು, ಅದರಂತೆ ಯಾವ ಹೊಸ ತಂಡಗಳು ಸೇರ್ಪಡೆಯಾಗಲಿದೆ ಕಾದು ನೋಡಬೇಕಿದೆ.
4 / 9
ಇನ್ನು ಟಾಪ್-4ನಲ್ಲಿ ಕಾಣಿಸಿಕೊಳ್ಳಲಿರುವ ಮತ್ತೊಂದು ತಂಡವೆಂದರೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್. ಮುಂಬೈ ಕೂಡ ಪ್ಲೇ ಆಫ್ ಆಡಲಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
5 / 9
ಡೆಲ್ಲಿ ಕ್ಯಾಪಿಟಲ್ಸ್
6 / 9
ಈ ಪಟ್ಟಿಯಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್ ಫೇವರೇಟ್ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಇರುವುದು ವಿಶೇಷ. ಆರ್ಸಿಬಿ ಇದುವರೆಗೆ ಯುಎಇನಲ್ಲಿ 19 ಪಂದ್ಯಗಳನ್ನು ಆಡಿದೆ. ಅದರಲ್ಲಿ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಕಳೆದ ಬಾರಿ 14 ರಲ್ಲಿ 7 ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಿತ್ತು. ಇದೀಗ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ಬಾರಿ ಯುಎಇನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಕಾರಣ ಈ ಸಲ ಕೂಡ ಪ್ಲೇ ಆಫ್ ಪ್ರವೇಶಿಸುವುದು ಖಚಿತ ಎನ್ನಬಹುದು.
7 / 9
ಸನ್ ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದ ಮುಂದಿನ ಏಳು ಪಂದ್ಯಗಳಲ್ಲಿ 7ರಲ್ಲೂ ಜಯ ಸಾಧಿಸುವುದ ಅನಿವಾರ್ಯ.
8 / 9
ಚೆನ್ನೈ ಸೂಪರ್ ಕಿಂಗ್ಸ್: ಕಳೆದ ಸೀಸನ್ನಲ್ಲಿ 7 ನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಅನುಭವಿಗಳದ್ದೇ ಚಿಂತೆ. ಅದರಲ್ಲೂ ತಂಡದ ಬೆನ್ನೆಲುಬಾಗಿರುವ ಸುರೇಶ್ ರೈನಾ ಮತ್ತು ಎಂಎಸ್ ಧೋನಿ ಫಾರ್ಮ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಮೊದಲಾರ್ಧದಲ್ಲಿ ರೈನಾ 123 ರನ್ ಮತ್ತು ಧೋನಿ 37 ರನ್ ಮಾತ್ರ ಗಳಿಸಿದ್ದರು. ಇನ್ನು ಧೋನಿಯ ಬ್ಯಾಟ್‌ನಿಂದ ರನ್ ಬರದಿರುವುದು ಚೆನ್ನೈ ತಂಡದ ಕೆಳ ಕ್ರಮಾಂಕದ ಮೇಲೆ ಪರಿಣಾಮ ಬೀರಿದೆ. ಇತ್ತ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಗಾಯಗೊಂಡಿರುವುದು ಕೂಡ CSK ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಲಿದೆ.
9 / 9
ಕಳೆದ ಬಾರಿಯ ಪ್ರದರ್ಶನ ಹಾಗೂ ಈ ಸಲದ ಪ್ರದರ್ಶನಗಳ ಒಟ್ಟಾರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಪ್ರಸ್ತುತ ಟಾಪ್ 4 ನಲ್ಲಿರುವ ಮೂರು ತಂಡಗಳೇ ಗೆಲ್ಲುವ ಹಾಟ್ ಫೇವರೇಟ್ ಎನಿಸಿಕೊಂಡಿದೆ. ಅದರಂತೆ ಯುಎಇನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ಬಲಿಷ್ಠ ಎನ್ನಬಹುದು.