AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babar Azam: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಗೆದ್ದರೆ ಬಾಬರ್ ಅಜಮ್ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದ ಗವಾಸ್ಕರ್

Pakistn vs England Final: ಟೀಮ್ ಇಂಡಿಯಾ ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ 2022 ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಗೆದ್ದರೆ 2048 ರಲ್ಲಿ ಬಾಬರ್ ಅಜಮ್ ಪಾಕಿಸ್ತಾನ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

TV9 Web
| Updated By: Vinay Bhat|

Updated on:Nov 11, 2022 | 12:24 PM

Share
ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಭಾನುವಾರ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಹಾಗೂ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಗಳ ನಡುವೆ ಫೈನಲ್ ಕದನ ನಡೆಯಲಿದ್ದು ಗೆದ್ದ ತಂಡ ಪ್ರಶಸ್ತಿಗೆ ಮುತ್ತಿಕ್ಕಲಿದೆ. ಸೆಮಿ ಫೈನಲ್​ನಲ್ಲಿ ಪಾಕ್ ನ್ಯೂಜಿಲೆಂಡ್ ಅನ್ನು ಸೋಲಿಸಿ ಹಾಗೂ ಇಂಗ್ಲೆಂಡ್ ಭಾರತವನ್ನು ಸೋಲಿಸಿ ಫೈನಲ್​ಗೆ ಪ್ರವೇಶ ಪಡೆದಿತ್ತು.

1 / 8
ಇದೀಗ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಪಾಕಿಸ್ತಾನ- ಇಂಗ್ಲೆಂಡ್ ನಡುವಣ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ತಯಾರಾಗುತ್ತಿದೆ. ವಿಶೇಷ ಎಂದರೆ 1992 ವಿಶ್ವಕಪ್​ ಅನ್ನು ಈ ವಿಶ್ವಕಪ್​ಗೆ ಹೋಲಿಸಿ ಅನೇಕ ಕಾಕತಾಳೀಯ ಸಂಗತಿಗಳು ನಡೆಯುತ್ತಿದೆ. ಮೊದಲನೆಯದಾಗಿ 2022ರ ಟಿ20 ವಿಶ್ವಕಪ್‌ನಂತೆಯೇ ಆಸ್ಟ್ರೇಲಿಯಾ 1992 ರ ಏಕದಿನ ವಿಶ್ವಕಪ್​ಗೂ ಆತಿಥ್ಯವಹಿಸಿತ್ತು.

2 / 8
1992 ರ ಏಕದಿನ ವಿಶ್ವಕಪ್‌ನಂತೆಯೆ ಆಸ್ಟ್ರೇಲಿಯಾ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಗುಂಪು ಹಂತದಿಂದಲೇ ನಿರ್ಗಮಿಸಿದೆ. ಅಲ್ಲದೆ ಅಂದು ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತು. ಈ ಬಾರಿ ಕೂಡ ಅದೇರೀತಿ ನಡೆದಿದೆ. ಅಷ್ಟೇ ಅಲ್ಲದೆ ಅಂದು ಪಾಕಿಸ್ತಾನ ಗುಂಪು ಹಂತದ ಪಂದ್ಯದಲ್ಲಿ ಭಾರತದ ಎದುರು ಸೋಲುಂಡಿತ್ತು.

3 / 8
ಇದಕ್ಕೆ ಮತ್ತಷ್ಟು ಪುಷ್ಠಿ ಎಂಬಂತೆ 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಸೆಮಿಫೈನಲ್‌ ಟಿಕೆಟ್ ಖಚಿತ ಪಡಿಸಿಕೊಳ್ಳಲು ಗುಂಪು ಹಂತದ ಕೊನೆಯ ದಿನದವರೆಗೂ ಕಾಯಬೇಕಾಗಿತ್ತು. 2022ರ ಟಿ20 ವಿಶ್ವಕಪ್‌ನಲ್ಲೂ ಅದೇ ರೀತಿಯ ಘಟನೆ ನಡೆದಿದೆ. ಅಲ್ಲದೆ ಫೈನಲ್​ನಲ್ಲಿ ಪಾಕಿಸ್ತಾನ – ಇಂಗ್ಲೆಂಡ್ ಮುಖಾಮುಖಿ ಆಗಿತ್ತು. ಈ ಬಾರಿ ಕೂಡ ಅದೇರೀತಿ ನಡೆಯಲಿದೆ.

4 / 8
ಅಂದು ನಡೆದ ಫೈನಲ್ ಪಂದ್ಯದಲ್ಲಿ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 22 ರನ್​ಗಳ ಜಯ ಸಾಧಿಸಿ ಚೊಚ್ಚಲ ಏಕದಿನ ವಿಶ್ವಕಪ್ ಎತ್ತಿಹಿಡಿದಿತ್ತು. ಈ ಬಾರಿ ಬಾಬರ್ ಅಜಮ್ ಕೂಡ ಈ ಸಾಧನೆ ಮಾಡಲಿದ್ದಾರೆ. ಹಿಂದಿನ ಘಟನೆ ಮರುಕಳಿಸಲಿದೆ ಎಂದು ಅನೇಕರು ಹೇಳುತ್ತಿದ್ದಾರೆ.

5 / 8
ಇದರ ನಡುವೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ 2022 ರಲ್ಲಿ ಪಾಕಿಸ್ತಾನ ಗೆದ್ದರೆ 2048 ರಲ್ಲಿ ಬಾಬರ್ ಅಜಮ್ ಪಾಕಿಸ್ತಾನ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

6 / 8
ಗವಾಸ್ಕರ್ ಈರೀತಿ ಹೇಳಲು ಕಾರಣ ಕೂಡ ಇದೆ. 1992 ರಲ್ಲಿ ಪಾಕಿಸ್ತಾನ ಗೆದ್ದಾಗ ಆಗ ತಂಡದ ನಾಯಕ ಇಮ್ರಾನ್ ಖಾನ್ ಆಗಿದ್ದರು. ನಂತರ ಅವರು ಪಾಕ್ ಪ್ರಧಾನಿ ಆದರು. ಹಿಂದಿನ ಘಟನೆ ಮರುಕಳಿಸುತ್ತದೆ ಎಂದಾದರೆ 2048 ರಲ್ಲಿ ಬಾಬರ್ ಕೂಡ ಪ್ರಧಾನಿ ಆಗಲಿದ್ದಾರೆ ಎಂಬುದು ಗವಾಸ್ಕರ್ ಹೇಳಿಕೆಯ ಒಳಾರರ್ಥ.

7 / 8
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಣ ಐಸಿಸಿ ಟಿ20 ವಿಶ್ವಕಪ್ 2022 ಫೈನಲ್ ಪಂದ್ಯ ನವೆಂಬರ್ 13 ಭಾನುವಾರದಂದು ನಡೆಯಲಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.

8 / 8

Published On - 12:24 pm, Fri, 11 November 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!