KKR vs GT: ಐಪಿಎಲ್‌ನಲ್ಲಿ ವಿಶೇಷ ದ್ವಿಶತಕ ಪೂರೈಸಿದ ಸುನಿಲ್ ನರೈನ್

Updated on: May 16, 2026 | 8:44 PM

Sunil Narine Makes IPL History: ಐಪಿಎಲ್ 2026 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ 60ನೇ ಪಂದ್ಯ ಪ್ಲೇಆಫ್ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ತಮ್ಮ 200ನೇ ಐಪಿಎಲ್ ಪಂದ್ಯವಾಡುತ್ತಿದ್ದಾರೆ. ಕೆಕೆಆರ್ ಪರ ಸುದೀರ್ಘ ಕಾಲ ಆಡಿರುವ ನರೈನ್, ಈ ಮೂಲಕ 200 ಐಪಿಎಲ್ ಪಂದ್ಯಗಳನ್ನಾಡಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 200ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ವಿದೇಶಿ ಬೌಲರ್ ಎಂಬ ಹೆಗ್ಗಳಿಕೆಯೂ ನರೈನ್ ಹೆಸರಿಗಿದೆ.

1 / 5
ಐಪಿಎಲ್ 2026 ರ 60 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಉಭಯ ತಂಡಗಳು ಈ ಆವೃತ್ತಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಎರಡನೇ ಬಾರಿ. ಪ್ಲೇಆಫ್‌ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೆ ಬಹುಮುಖ್ಯವಾಗಿದೆ. ಹಾಗೆಯೇ ಈ ಪಂದ್ಯ ವಿಂಡೀಸ್ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ಅವರಿಗೂ ಐತಿಹಾಸಿಕ ಪಂದ್ಯವಾಗಿದೆ (PC- IPL X).

2 / 5
ಬಹಳ ವರ್ಷಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್​ ಪರ ಆಡುತ್ತಿರುವ ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್​ಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯ ಐಪಿಎಲ್‌ನಲ್ಲಿ 200ನೇ ಪಂದ್ಯವಾಗಿದೆ. ಈ ಮೂಲಕ ನರೈನ್ ಈ ಹಿಂದೆ ಯಾವುದೇ ವಿದೇಶಿ ಆಟಗಾರ ಮಾಡದ ಸಾಧನೆ ಮಾಡಿದ್ದಾರೆ. ಅಂದರೆ ನರೈನ್ 200 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (PC- IPL X).

3 / 5
2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸುನಿಲ್ ನರೈನ್ ಅಂದಿನಿಂದ ಈ ಫ್ರಾಂಚೈಸಿಯ ಭಾಗವಾಗಿದ್ದಾರೆ. ಈ ಸಮಯದಲ್ಲಿ, ಅವರು ಕೆಕೆಆರ್‌ ತಂಡ ಮೂರು ಬಾರಿ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ (PC- IPL X).

4 / 5
ಇನ್ನು ಐಪಿಎಲ್‌ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಸುನಿಲ್ ನರೈನ್ 200 ಪಂದ್ಯಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕೀರನ್ ಪೊಲಾರ್ಡ್ 189 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆರ್​ಸಿಬಿ ಪರ ಆಡಿದ್ದ ಎಬಿ ಡಿವಿಲಿಯರ್ಸ್ ಮತ್ತು ಡೇವಿಡ್ ವಾರ್ನರ್ ತಲಾ 184 ಪಂದ್ಯಗಳನ್ನು ಆಡಿದ್ದಾರೆ (PC- IPL X).

5 / 5
ಐಪಿಎಲ್‌ನಲ್ಲಿ 200 ಪಂದ್ಯಗಳನ್ನು ಆಡುವುದರ ಜೊತೆಗೆ ಈ ಲೀಗ್​ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ವಿದೇಶಿ ಬೌಲರ್ ಎಂಬ ದಾಖಲೆಯೂ ಸುನಿಲ್ ನರೈನ್ ಹೆಸರನಿಲ್ಲಿದೆ. ವಿದೇಶಿ ಬೌಲರ್‌ಗಳ ಪಟ್ಟಿಯಲ್ಲಿ ಡ್ವೇನ್ ಬ್ರಾವೋ (183 ವಿಕೆಟ್‌ಗಳು) ಮತ್ತು ರಶೀದ್ ಖಾನ್ (174 ವಿಕೆಟ್‌ಗಳು) ನರೈನ್ ನಂತರ ಇದ್ದಾರೆ (PC- IPL X).

Follow Us