ICC T20I Player: ಐಸಿಸಿ ವರ್ಷದ ಟಿ20 ಆಟಗಾರ ಸೂರ್ಯಕುಮಾರ್ ಯಾದವ್

Edited By:

Updated on: Jan 24, 2024 | 2:04 PM

ICC T20I player of the year: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರತಿ ವರ್ಷ ಪ್ರಧಾನ ಮಾಡುವ ವರ್ಷದ ಟಿ20 ಆಟಗಾರರ ಪ್ರಶಸ್ತಿಯು ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್​ಗೆ ಒಲಿದಿದೆ. ಈ ಮೂಲಕ ಈ ಪ್ರಶಸ್ತಿಯನ್ನು 2 ಬಾರಿ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

1 / 6
ಸೂರ್ಯಕುಮಾರ್ ಯಾದವ್ (Suryakumar Yadav) ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) 2023ರ ಸಾಲಿನ ಅತ್ಯುತ್ತಮ ಟಿ20 ಆಟಗಾರನಿಗೆ ನೀಡುವ ಈ ಪ್ರಶಸ್ತಿಯನ್ನು ಸೂರ್ಯಕುಮಾರ್ 2ನೇ ಬಾರಿ ಪಡೆಯುತ್ತಿರುವುದು ವಿಶೇಷ.

ಸೂರ್ಯಕುಮಾರ್ ಯಾದವ್ (Suryakumar Yadav) ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) 2023ರ ಸಾಲಿನ ಅತ್ಯುತ್ತಮ ಟಿ20 ಆಟಗಾರನಿಗೆ ನೀಡುವ ಈ ಪ್ರಶಸ್ತಿಯನ್ನು ಸೂರ್ಯಕುಮಾರ್ 2ನೇ ಬಾರಿ ಪಡೆಯುತ್ತಿರುವುದು ವಿಶೇಷ.

2 / 6

ಅಂದರೆ 2022 ರಲ್ಲೂ ವರ್ಷದ ಟಿ20 ಆಟಗಾರನ ಪ್ರಶಸ್ತಿಯನ್ನು ಸೂರ್ಯಕುಮಾರ್ ಯಾದವ್ ಮುಡಿಗೇರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಟಿ20 ಕ್ರಿಕೆಟ್​ನ ಬೆಸ್ಟ್ ಆಟಗಾರನಾಗಿ ಮತ್ತೊಮ್ಮೆ ಐಸಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಮೂಲಕ 2 ಬಾರಿ ಐಸಿಸಿ ಟಿ20 ಆಟಗಾರನ ಗೌರವಕ್ಕೆ ಪಾತ್ರರಾದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

3 / 6

2023 ರಲ್ಲಿ ಟಿ20 ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ 17 ಇನಿಂಗ್ಸ್​ಗಳಿಂದ 2 ಭರ್ಜರಿ ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 733 ರನ್ ಕಲೆಹಾಕಿದ್ದರು. ಈ ಮೂಲಕ ಕಳೆದ ವರ್ಷ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

4 / 6

ಅದರಂತೆ ಇದೀಗ ಝಿಂಬಾಬ್ವೆಯ ಸಿಕಂದರ್ ರಾಝ, ನ್ಯೂಝಿಲೆಂಡ್​ನ ಮಾರ್ಕ್​ ಚಾಪ್ಮನ್ ಹಾಗೂ ಉಗಾಂಡ ಅಲ್ಪೇಶ್ ರಾಮ್​ಜಾನಿ ಅವರನ್ನು ಹಿಂದಿಕ್ಕಿ ಸೂರ್ಯಕುಮಾರ್ ಯಾದವ್ ಐಸಿಸಿ ವರ್ಷದ ಟಿ20 ಆಟಗಾರನಾಗಿ ಹೊರಹೊಮ್ಮಿದ್ದಾರೆ.

5 / 6

ಇದಲ್ಲದೆ ಐಸಿಸಿ ಪ್ರಕಟಿಸಿದ 2023 ರ ಟಿ20 ತಂಡದ ನಾಯಕರಾಗಿಯೂ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಸೂರ್ಯಕುಮಾರ್ ಅವರನ್ನು ಹೊರತುಪಡಿಸಿ ಭಾರತದ ಯಶಸ್ವಿ ಜೈಸ್ವಾಲ್, ಅರ್ಷದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

6 / 6

ಐಸಿಸಿ ಟಿ20 ತಂಡಳ ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್ (ಭಾರತ), ಫಿಲ್ ಸಾಲ್ಟ್ (ಇಂಗ್ಲೆಂಡ್), ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್), ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್), ಸಿಕಂದರ್ ರಾಝ (ಝಿಂಬಾಬ್ವೆ), ಅಲ್ಪೇಶ್ ರಾಮ್​ಜಾನಿ (ಉಗಾಂಡ), ಮಾರ್ಕ್ ಅಡೈರ್ (ಐರ್ಲೆಂಡ್), ರವಿ ಬಿಷ್ಣೋಯ್ (ಭಾರತ), ರಿಚರ್ಡ್ ನಾಗರಾವ (ಝಿಂಬಾಬ್ವೆ), ಅರ್ಷದೀಪ್ ಸಿಂಗ್ (ಭಾರತ).

Loading...
Unable to load recommendations.
Follow Us