- Kannada News Photo gallery Cricket photos T20 world cup 2022 prize money winners runners up amount in kannada
ಚಾಂಪಿಯನ್ ಪಟ್ಟಕ್ಕಾಗಿ ಇಂಗ್ಲೆಂಡ್- ಪಾಕ್ ಫೈಟ್; ಯಾರ ಖಾತೆಗೆ ಬೀಳಲಿದೆ 13 ಕೋಟಿ ರೂ. ಬಹುಮಾನ?
T20 World Cup 2022: ಈ ಬಾರಿ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 45.68 ಕೋಟಿ ರೂಪಾಯಿಗಳಾಗಿದ್ದು, ಇದು ಹಿಂದಿನ ಟಿ20 ವಿಶ್ವಕಪ್‌ನ ಬಹುಮಾನದ ಗಾತ್ರದಷ್ಟೇ ಇದೆ.
Updated on:Nov 12, 2022 | 2:57 PM

ಟಿ20 ವಿಶ್ವಕಪ್‌ನ ಅಂತಿಮ ಪಂದ್ಯ ನವೆಂಬರ್ 13 ರಂದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಎರಡೂ ತಂಡಗಳು ಮಧ್ಯಾಹ್ನ 1.30ಕ್ಕೆ ಮೆಲ್ಬೋರ್ನ್ ಮೈದಾನಕ್ಕೆ ಬಂದಿಳಿಯಲಿವೆ.

T20 World Cup Final Pakistan vs England Melbourne weather forecast there are 100 percent chances of rain on Sunday

ವಾಸ್ತವವಾಗಿ, ಈ ಬಾರಿ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 45.68 ಕೋಟಿ ರೂಪಾಯಿಗಳಾಗಿದ್ದು, ಇದು ಹಿಂದಿನ ಟಿ20 ವಿಶ್ವಕಪ್‌ನ ಬಹುಮಾನದ ಗಾತ್ರದಷ್ಟೇ ಇದೆ.

ಪ್ರಶಸ್ತಿ ಗೆಲ್ಲುವ ತಂಡ ಈ ಪೈಕಿ 13.05 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ರನ್ನರ್ ಅಪ್ ತಂಡಕ್ಕೆ ಅರ್ಧ ಅಂದರೆ 6.52 ಕೋಟಿ ರೂ. ಸಿಗಲಿದೆ.

ಮತ್ತೊಂದೆಡೆ, ಮಿಫೈನಲ್‌ನಲ್ಲಿ ಸೋತ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ತಲಾ 3. 26 ಕೋಟಿ ರೂಪಾಯಿಗಳು ಬಹುಮಾನವಾಗಿ ಸಿಗಲಿದೆ.

ಅಂತೆಯೆ ಸೂಪರ್ 12 ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿದ 8 ತಂಡಗಳಿಗೆ ತಲಾ 70,000 ಡಾಲರ್ (57,14,688 ರೂ.) ಮತ್ತು ಪ್ರತಿ ಸೂಪರ್ 12 ಪಂದ್ಯದ ವಿಜೇತರಿಗೆ 40,000 (32,65,536 ರೂ.) ಐಸಿಸಿ ನೀಡಿದೆ.
Published On - 2:57 pm, Sat, 12 November 22




