AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs USA: ಟೀಮ್ ಇಂಡಿಯಾ ಪಾಲಿಗೆ ವರವಾದ ಹೊಸ ನಿಯಮ

T20 World Cup 2024: ಈ ಬಾರಿಯ ಟಿ20 ವಿಶ್ವಕಪ್​ ಮೂಲಕ ಐಸಿಸಿ ಹೊಸ ನಿಯಮವನ್ನು ಪರಿಚಯಿಸಿದೆ. ಈ ನಿಯಮದ ಪ್ರಕಾರ ಒಂದು ಓವರ್​ ಮುಗಿಸಿ ಮತ್ತೊಂದು ಓವರ್​ ಪ್ರಾರಂಭಿಸಲು ಕೇವಲ 60 ಸೆಕೆಂಡ್ಸ್ ಮಾತ್ರ ಇರಲಿದೆ. ಈ 60 ಸಕೆಂಡ್​ಗಳ ಒಳಗೆ ಮತ್ತೊಂದು ಓವರ್​ ಅನ್ನು ಶುರು ಮಾಡಬೇಕಾಗುತ್ತದೆ. ಹೀಗೆ ಒಂದೇ ತಪ್ಪನ್ನು ಮೂರು ಬಾರಿ ಮಾಡಿದರೆ 5 ರನ್​ಗಳ ಪೆನಾಲ್ಟಿ ವಿಧಿಸಲಾಗುತ್ತದೆ.

ಝಾಹಿರ್ ಯೂಸುಫ್
|

Updated on: Jun 13, 2024 | 9:23 AM

Share
T20 World Cup 2024: ಟಿ20 ವಿಶ್ವಕಪ್​ನ 25ನೇ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಟೀಮ್ ಇಂಡಿಯಾ (Team India) ಪ್ರಯಾಸದ ಗೆಲುವು ದಾಖಲಿಸಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತ್ತು.

1 / 7
ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ಯುಎಸ್​ಎ ಬೌಲರ್​ಗಳು ಯಶಸ್ವಿಯಾಗಿದ್ದರು. ಅಲ್ಲದೆ 15 ಓವರ್​ಗಳಲ್ಲಿ ನೀಡಿದ್ದು ಕೇವಲ 76 ರನ್​ಗಳು ಮಾತ್ರ. ಹೀಗಾಗಿಯೇ ಕೊನೆಯ ಐದು ಓವರ್​ಗಳ ವೇಳೆ ಪಂದ್ಯವು ರೋಚಕ ತಿರುವಿನತ್ತ ಸಾಗಿತು.

2 / 7
ಕೊನೆಯ 30 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 35 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಐಸಿಸಿಯ ಹೊಸ ನಿಯಮ ಟೀಮ್ ಇಂಡಿಯಾ ಪಾಲಿಗೆ ವರವಾಗಿದ್ದು ವಿಶೇಷ. ಈ ನಿಯಮದಂತೆ ಭಾರತ ತಂಡವು ಕೊನೆಯ 30 ಎಸೆತಗಳಲ್ಲಿ 30 ರನ್​ಗಳ ಗುರಿ ಪಡೆಯಿತು.

3 / 7
ಅಂದರೆ ಈ ಬಾರಿಯ ಟಿ20 ವಿಶ್ವಕಪ್​ ಮೂಲಕ ಐಸಿಸಿ ಸ್ಟಾಪ್ ಕ್ಲಾಕ್ ನಿಯಮ ಪರಿಚಯಿಸಿದೆ. ಈ ನಿಯಮದ ಪ್ರಕಾರ, ಒಂದು ಓವರ್​ ಮುಗಿಸಿ ಮತ್ತೊಂದು ಓವರ್​ ಪ್ರಾರಂಭಿಸಲು ಕೇವಲ 60 ಸೆಕೆಂಡ್​ಗಳ ಸಮಯವಕಾಶ ಇರಲಿದೆ. ಈ 60 ಸೆಕೆಂಡ್​ಗಳ ಒಳಗೆ ಮತ್ತೊಂದು ಓವರ್​ ಅನ್ನು ಶುರು ಮಾಡಬೇಕಾಗುತ್ತದೆ.

4 / 7
ಒಂದು ವೇಳೆ 60 ಸೆಕೆಂಡ್​ಗಳ ಒಳಗೆ ಓವರ್ ಪ್ರಾರಂಭಿಸದಿದ್ದರೆ ಅಂಪೈರ್ ಮೊದಲ ಎಚ್ಚರಿಕೆ ನೀಡುತ್ತಾರೆ. ಎರಡನೇ ಬಾರಿ ಅದೇ ತಪ್ಪನ್ನು ಪುನರಾವರ್ತಿಸಿದರೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುತ್ತದೆ. ಇನ್ನು ಮೂರನೇ ಬಾರಿ ಕೂಡ 60 ಸೆಕೆಂಡ್​ಗಳ ಒಳಗೆ ಓವರ್​ ಶುರು ಮಾಡದಿದ್ದರೆ, ಫೀಲ್ಡಿಂಗ್ ತಂಡಕ್ಕೆ 5 ರನ್​ಗಳ ಪೆನಾಲ್ಟಿ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್ ತಂಡಕ್ಕೆ 5 ರನ್​ಗಳನ್ನು ನೀಡಲಾಗುತ್ತದೆ.

5 / 7
ಭಾರತದ ವಿರುದ್ಧದ ಪಂದ್ಯದಲ್ಲಿ ಯುಎಸ್​ಎ ತಂಡವು ಮೂರು ಬಾರಿ ಈ ತಪ್ಪನ್ನು ಮಾಡಿದೆ. ಹೀಗಾಗಿ ನಿರ್ಣಾಯಕ ಹಂತದಲ್ಲಿ ಭಾರತ ತಂಡಕ್ಕೆ 5 ರನ್​ಗಳು ಹೆಚ್ಚುವರಿಯಾಗಿ ಸಿಕ್ಕಿದ್ದವು. ಇದರಿಂದ ಭಾರತ ತಂಡದ ಗುರಿಯು 35 ರನ್​ಗಳಿಂದ 30 ರನ್​ಗಳಿಗೆ ಇಳಿಯಿತು.

6 / 7
ಈ ಮೂಲಕ ಟೀಮ್ ಇಂಡಿಯಾ 18.2 ಓವರ್​ಗಳಲ್ಲಿ ಗುರಿ ಬೆನ್ನತ್ತಲು ಸಾಧ್ಯವಾಯಿತು. ಅಂದರೆ ಕೇವಲ 10 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತ್ತು. ಒಂದು ವೇಳೆ ಪೆನಾಲ್ಟಿ ರೂಪದಲ್ಲಿ ಭಾರತಕ್ಕೆ 5 ರನ್​ಗಳು ಸಿಗದಿದ್ದರೆ ಪಂದ್ಯವು ಮತ್ತಷ್ಟು ರೋಚಕ ಹಂತದತ್ತ ಸಾಗುವ ಸಾಧ್ಯತೆಯಿತ್ತು. ಆದರೆ ಐಸಿಸಿಯ ಹೊಸ ನಿಯಮವು ಯುಎಸ್​ಎ ಪಾಲಿಗೆ ಕಂಟಕವಾಗಿ ಪರಿಣಮಿಸಿದರೆ, ಟೀಮ್ ಇಂಡಿಯಾ ಪಾಲಿಗೆ ವರವಾಯಿತು. (ALL PC: ICC/Getty Images)

7 / 7
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ

ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ

IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ

ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ

ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!