
ಟೀಂ ಇಂಡಿಯಾ, ಜಪಾನ್ ತಂಡವನ್ನು ಸೋಲಿಸುವ ಮೂಲಕ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200ನೇ ಗೆಲುವು ದಾಖಲಿಸಿತು. ಇದರೊಂದಿಗೆ, ಭಾರತ ತಂಡವು 200 ಟಿ20 ಪಂದ್ಯಗಳನ್ನು ಗೆದ್ದ ಮೊದಲ ತಂಡವೆಂಬ ದಾಖಲೆಯನ್ನು ಬರೆಯಿತು(PC-BCCI X).
ಇನ್ನು ಟೀಂ ಇಂಡಿಯಾ ಯಾವ ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿದೆ? ಯಾವ ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಸೋತಿದೆ ಮತ್ತು ಯಾವ ತಂಡಗಳ ವಿರುದ್ಧ ಎಂದಿಗೂ ಪಂದ್ಯವನ್ನು ಸೋತಿಲ್ಲ ಎಂಬುದನ್ನು ನೋಡುವುದಾದರೆ(PC-BCCI X)..
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ವಿರುದ್ಧ ಭಾರತ 23 ಪಂದ್ಯಗಳನ್ನು ಗೆದ್ದಿದ್ದರೆ, ಒಂಬತ್ತು ಪಂದ್ಯಗಳಲ್ಲಿ ಸೋತಿದೆ. ಇದಾದ ನಂತರ, ಆಸ್ಟ್ರೇಲಿಯಾ ವಿರುದ್ಧ ಭಾರತ 22 ಟಿ20 ಪಂದ್ಯಗಳನ್ನು ಗೆದ್ದಿದ್ದರೆ, 12 ಪಂದ್ಯಗಳಲ್ಲಿ ಸೋತಿದೆ(PC-BCCI X).
ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧವೂ ಭಾರತ ಉತ್ತಮ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ 21 ಪಂದ್ಯಗಳನ್ನು ಗೆದ್ದು 14 ಪಂದ್ಯಗಳಲ್ಲಿ ಸೋತಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧ 20 ಪಂದ್ಯಗಳಲ್ಲಿ ಗೆದ್ದು 10 ಪಂದ್ಯಗಳಲ್ಲಿ ಸೋತಿದೆ(PC-BCCI X).
ಇಂಗ್ಲೆಂಡ್ ವಿರುದ್ಧ ಭಾರತ ಅತಿ ಹೆಚ್ಚು ಪಂದ್ಯಗಳನ್ನು ಸೋತಿದೆ. ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮಾತ್ರ 16 ಪಂದ್ಯಗಳನ್ನು ಸೋತಿದ್ದು, 18 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಪ್ರದರ್ಶನ ಕೊಂಚ ಕಳಪೆಯಾಗಿದೆ ಎನ್ನಬಹುದು(PC-BCCI X).
ಇನ್ನು ಟೀಂ ಇಂಡಿಯಾ 10 ತಂಡಗಳ ವಿರುದ್ಧ ಇದುವರೆಗೆ ಒಂದೇ ಒಂದು ಟಿ20 ಪಂದ್ಯವನ್ನು ಸೋತಿಲ್ಲ. ಆ 10 ತಂಡಗಳ ಪೈಕಿ, ಅಫ್ಘಾನಿಸ್ತಾನ, ಯುಎಇ, ನಮೀಬಿಯಾ, ನೆದರ್ಲ್ಯಾಂಡ್ಸ್, ಯುಎಸ್ಎ, ಹಾಂಗ್ ಕಾಂಗ್, ನೇಪಾಳ, ಸ್ಕಾಟ್ಲೆಂಡ್, ಓಮನ್ ಮತ್ತು ಜಪಾನ್ ತಂಡಗಳು ಸೇರಿವೆ(PC-BCCI X).