200ನೇ ಗೆಲುವು; ಐತಿಹಾಸಿಕ ಸಾಧನೆ ಮಾಡಿದ ಟೀಂ ಇಂಡಿಯಾ

Updated on: Sep 22, 2026 | 3:37 PM

ಭಾರತ ತಂಡ ಜಪಾನ್ ವಿರುದ್ಧ ಗೆದ್ದು ಐತಿಹಾಸಿಕ 200ನೇ ಅಂತರರಾಷ್ಟ್ರೀಯ T20 ಪಂದ್ಯ ಗೆದ್ದ ದಾಖಲೆ ಮಾಡಿದೆ. ಮಳೆ ಪೀಡಿತ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಜಯಗಳಿಸಿದ ಟೀಮ್ ಇಂಡಿಯಾ, ಈ ಸ್ವರೂಪದಲ್ಲಿ 200 ಗೆಲುವು ಸಾಧಿಸಿದ ಮೊದಲ ತಂಡವಾಗಿದೆ. ಈ ಮೈಲಿಗಲ್ಲು 2006ರಿಂದ ಭಾರತ ತಂಡದ T20 ಪ್ರಯಾಣದ ಮಹತ್ವದ ಸಾಧನೆಯನ್ನು ತೋರಿಸುತ್ತದೆ.

1 / 5
ಭಾರತ ಹಾಗೂ ಜಪಾನ್ ನಡುವೆ ನಡೆದ ಏಕೈಕ ಟಿ20 ಪಂದ್ಯವನ್ನು ಬಲಿಷ್ಠ ಟೀಂ ಇಂಡಿಯಾ ಕೊನೆಯ ಓವರ್​ನಲ್ಲಿ ಗೆದ್ದುಕೊಂಡಿದೆ. ಮಳೆ ಪೀಡಿತ ಈ ಪಂದ್ಯವನ್ನು ತಲಾ 5 ಓವರ್​ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 4 ವಿಕೆಟ್‌ಗಳನ್ನು ಕಳೆದುಕೊಂಡು 32 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಜಪಾನ್ 30 ರನ್ ಕಲೆಹಾಕಲಷ್ಟೇ ಶಕ್ತವಾಗಿ 2 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿತು(PC-PTI).

ಭಾರತ ಹಾಗೂ ಜಪಾನ್ ನಡುವೆ ನಡೆದ ಏಕೈಕ ಟಿ20 ಪಂದ್ಯವನ್ನು ಬಲಿಷ್ಠ ಟೀಂ ಇಂಡಿಯಾ ಕೊನೆಯ ಓವರ್​ನಲ್ಲಿ ಗೆದ್ದುಕೊಂಡಿದೆ. ಮಳೆ ಪೀಡಿತ ಈ ಪಂದ್ಯವನ್ನು ತಲಾ 5 ಓವರ್​ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 4 ವಿಕೆಟ್‌ಗಳನ್ನು ಕಳೆದುಕೊಂಡು 32 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಜಪಾನ್ 30 ರನ್ ಕಲೆಹಾಕಲಷ್ಟೇ ಶಕ್ತವಾಗಿ 2 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿತು(PC-PTI).

2 / 5

ಜಪಾನ್‌ನ ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಏಕೈಕ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 200ನೇ ಗೆಲುವು ದಾಖಲಿಸಿದ ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ಟೀಂ ಇಂಡಿಯಾ ಈ ಸ್ವರೂಪದಲ್ಲಿ 200 ಗೆಲುವುಗಳನ್ನು ದಾಖಲಿಸಿದ ಮೊದಲ ತಂಡವೆಂಬ ದಾಖಲೆ ಬರೆದಿದೆ (ಈ ಅಂಕಿ ಅಂಶವು ಸೂಪರ್ ಓವರ್‌ಗಳಲ್ಲಿ ಸಾಧಿಸಿದ ಗೆಲುವುಗಳನ್ನು ಸಹ ಒಳಗೊಂಡಿದೆ)(PC-PTI).

3 / 5

2006 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಟಿ20 ಅಂತರರಾಷ್ಟ್ರೀಯ ಗೆಲುವು ದಾಖಲಿಸಿತ್ತು. ಅಂದಿನಿಂದ ತಂಡವು 50, 100 ಮತ್ತು 150 ನೇ ಗೆಲುವುಗಳ ಮೈಲಿಗಲ್ಲುಗಳನ್ನು ದಾಟಿದ್ದು, ಈಗ 200 ಗೆಲುವಿನ ಗಡಿಯನ್ನು ತಲುಪಿದೆ. ಭಾರತವು ತನ್ನ ಮೊದಲ 50 ಗೆಲುವುಗಳನ್ನು ತಲುಪಲು 83 ಪಂದ್ಯಗಳನ್ನು ತೆಗೆದುಕೊಂಡಿತ್ತು. ಆ ನಂತರ 50 ಗೆಲುವಿನ ಮೈಲಿಗಲ್ಲನ್ನು ತಲುಪಲು ಕಡಿಮೆ ಪಂದ್ಯಗಳನ್ನು ತೆಗೆದುಕೊಂಡಿತು(PC-BCCI).

4 / 5

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2006 ರಲ್ಲಿ ನಡೆದಿದ್ದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ತನ್ನ ಗೆಲುವಿನ ಖಾತೆ ತೆರೆದಿತ್ತು. ನಂತರ 2017 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದ ಟೀಂ ಇಂಡಿಯಾಕ್ಕೆ ಇದು 50ನೇ ಗೆಲುವಾಗಿತ್ತು(PC-BCCI).

5 / 5

ನಂತರ ವೆಸ್ಟ್ ಇಂಡೀಸ್ ವಿರುದ್ಧ 2022 ರಲ್ಲಿ ನಡೆದಿದ್ದ ಪಂದ್ಯವನ್ನು 8 ರನ್​​ಗಳಿಂದ ಗೆದ್ದುಕೊಂಡಿದ್ದ ಟೀಂ ಇಂಡಿಯಾ ತನ್ನ 100ನೇ ಟಿ20 ಪಂದ್ಯದ ಗೆಲುವಿನ ಮೈಲಿಗಲ್ಲು ದಾಟಿತ್ತು. ಹಾಗೆಯೇ 2024 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು 24 ರನ್​ಗಳಿಂದ ಜಯಿಸಿದ್ದ ಭಾರತಕ್ಕೆ ಇದು 150ನೇ ಗೆಲುವಾಗಿತ್ತು. ಈಗ ಜಪಾನ್ ವಿರುದ್ಧದ ಗೆಲುವು 200ನೇ ಗೆಲುವಾಗಿದೆ(PC-BCCI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us