AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಲುವಿನ ನಾಗಾಲೋಟ… ಇಂಗ್ಲೆಂಡ್ ದಾಖಲೆ ಮುರಿದ ಇಂಡಿಯಾ

Team India Records: ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾರತ ತಂಡವು ಮತ್ತೊಂದು ಮೈಲುಗಲ್ಲು ಮುಟ್ಟಿದೆ. ಅದು ಸಹ ಇಂಗ್ಲೆಂಡ್ ಹೆಸರಿನಲ್ಲಿದ್ದ ಅತ್ಯಧಿಕ ಗೆಲುವಿನ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಂದರೆ ಇಂಟರ್​​​ನ್ಯಾಷನಲ್ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಗೆಲುವು ಕಂಡ ತಂಡಗಳ ಪಟ್ಟಿಯಲ್ಲಿ ಭಾರತವು ದ್ವಿತೀಯ ಸ್ಥಾನಕ್ಕೇರಿದೆ.

ಝಾಹಿರ್ ಯೂಸುಫ್
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 15, 2025 | 12:55 PM

Share
ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಎರಡು ಗೆಲುವುಗಳೊಂದಿಗೆ ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ತನ್ನ ಜಯದ ಸಂಖ್ಯೆಯನ್ನು 922 ಕ್ಕೇರಿಸಿದೆ. ಈ ಮೂಲಕ ಇಂಟರ್​​​ನ್ಯಾಷನಲ್ ಕ್ರಿಕೆಟ್​​ನಲ್ಲಿ ಅತ್ಯಧಿಕ ಗೆಲುವು ಕಂಡ 2ನೇ ತಂಡ ಎನಿಸಿಕೊಂಡಿದೆ.

1 / 5
ಇದಕ್ಕೂ ಮುನ್ನ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡವಿತ್ತು.1877 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಶುರು ಮಾಡಿದ್ದ ಆಂಗ್ಲರು ಈವರೆಗೆ 2117 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 921 ಮ್ಯಾಚ್​ಗಳಲ್ಲಿ ಮಾತ್ರ. ಇನ್ನು 790 ಪಂದ್ಯಗಳಲ್ಲಿ ಸೋಲುಂಡರೆ 11 ಮ್ಯಾಚ್​​ಗಳು ಟೈ ಆಗಿವೆ. ಹಾಗೆಯೇ 219 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ.

2 / 5
ಇದೀಗ ಗೆಲುವಿನ ಲೆಕ್ಕಾಚಾರದಲ್ಲಿ ಆಂಗ್ಲರನ್ನು ಹಿಂದಿಕ್ಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಶುಭ್​​ಮನ್ ಗಿಲ್ ಮುಂದಾಳತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದ ಭಾರತ ತಂಡವು ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಗರಿಷ್ಠ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಢಿದೆ.

3 / 5
1932 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಶುರು ಮಾಡಿದ ಟೀಮ್ ಇಂಡಿಯಾ ಈವರೆಗೆ 1916 ಪಂದ್ಯಗಳನ್ನಾಡಿದೆ. ಈ ವೇಳೆ 922 ಮ್ಯಾಚ್​​​ಗಳಲ್ಲಿ ಜಯ ಸಾಧಿಸಿದರೆ, 702 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು 18 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡರೆ, 50 ಮ್ಯಾಚ್​​ಗಳು ಡ್ರಾ ಆಗಿವೆ.

4 / 5
ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾ. 1877 ರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿರುವ ಆಸೀಸ್ ಪಡೆ ಈವರೆಗೆ 2107 ಮ್ಯಾಚ್​​ಗಳಲ್ಲಿ ಕಣಕ್ಕಿಳಿದಿವೆ. ಈ ವೇಳೆ 1158 ಗೆಲುವು, 676 ಸೋಲು, 14 ಟೈ ಹಾಗೂ 219 ಡ್ರಾ ಸಾಧಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಸಾವಿರಕ್ಕೂ ಅಧಿಕ ಗೆಲುವು ಕಂಡ ವಿಶ್ವ ಏಕೈಕ ತಂಡ ಎನಿಸಿಕೊಂಡಿದೆ.

5 / 5