ಶಿವಂ ದುಬೆ ಲಕ್ಕಿ ಚಾರ್ಮ್​… ಇಂತಹದೊಂದು ವಿಶ್ವ ದಾಖಲೆ ಯಾರೂ ಸಹ ನಿರ್ಮಿಸಿಲ್ಲ..!

Updated on: Sep 25, 2025 | 9:59 AM

Shivam Dube Record: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶಿವಂ ದುಬೆಯ ಗೆಲುವಿನ ನಾಗಾಲೋಟ ಮುಂದುವರೆದಿದೆ. ಈ ಗೆಲುವುಗಳೊಂದಿಗೆ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಯಾರೂ ಸಹ ಮಾಡದ ವಿಶೇಷ ವಿಶ್ವ ದಾಖಲೆಯನ್ನು ದುಬೆ ನಿರ್ಮಿಸಿದ್ದಾರೆ. ಅದು ಕೂಡ ಸತತ ಪಂದ್ಯಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಎಂಬುದು ವಿಶೇಷ.

1 / 7
ಟೀಮ್ ಇಂಡಿಯಾ ಪರ ಶಿವಂ ದುಬೆ (Shivam Dube) ಕಣಕ್ಕಿಳಿದರೆ ಗೆಲುವು ಖಚಿತ. ಇದಕ್ಕೆ ಸಾಕ್ಷಿ ಕಳೆದ 35 ಟಿ20 ಪಂದ್ಯಗಳ ಫಲಿತಾಂಶ. ಈ ಫಲಿತಾಂಶಗಳೊಂದಿಗೆ ಇದೀಗ ಶಿವಂ ದುಬೆ ಟಿ20 ಕ್ರಿಕೆಟ್​ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಕೂಡ ಸತತ 35 ಗೆಲುವುಗಳೊಂದಿಗೆ..!

ಟೀಮ್ ಇಂಡಿಯಾ ಪರ ಶಿವಂ ದುಬೆ (Shivam Dube) ಕಣಕ್ಕಿಳಿದರೆ ಗೆಲುವು ಖಚಿತ. ಇದಕ್ಕೆ ಸಾಕ್ಷಿ ಕಳೆದ 35 ಟಿ20 ಪಂದ್ಯಗಳ ಫಲಿತಾಂಶ. ಈ ಫಲಿತಾಂಶಗಳೊಂದಿಗೆ ಇದೀಗ ಶಿವಂ ದುಬೆ ಟಿ20 ಕ್ರಿಕೆಟ್​ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಕೂಡ ಸತತ 35 ಗೆಲುವುಗಳೊಂದಿಗೆ..!

2 / 7

ಹೌದು, ಟಿ20 ಕ್ರಿಕೆಟ್​ನಲ್ಲಿ ಸತತ 35 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ ವಿಶ್ವದ ಮೊದಲ ಆಟಗಾರನೆಂಬ ವಿಶ್ವ ದಾಖಲೆ ಶಿವಂ ದುಬೆ ಪಾಲಾಗಿದೆ. ಅಂದರೆ ದುಬೆ ಕಣಕ್ಕಿಳಿದ ಕಳೆದ 35 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಸೋತಿಲ್ಲ ಎಂಬುದು ವಿಶೇಷ.

3 / 7

ಜನವರಿ 2020 ರಿಂದ ಶುರುವಾದ ಈ ಗೆಲುವಿನ ನಾಗಾಲೋಟ ಇದೀಗ ಏಷ್ಯಾಕಪ್​ ಟೂರ್ನಿಯಲ್ಲೂ ಮುಂದುವರೆದಿದೆ. 2020 ರಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು 5-0 ಅಂತರದಿಂದ ಸೋಲಿಸಿದಾಗ ದುಬೆ ಭಾರತ ತಂಡದ ಭಾಗವಾಗಿದ್ದರು.

4 / 7

ಇನ್ನು 2024 ರಲ್ಲಿ ಟೀಮ್ ಇಂಡಿಯಾ ಆಡಿದ 15 ಪಂದ್ಯಗಳಲ್ಲಿ ದುಬೆ ಕಣಕ್ಕಿಳಿದಿದ್ದರು. ಈ ಎಲ್ಲಾ ಮ್ಯಾಚ್​ಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹಾಗೆಯೇ ಟಿ20 ವಿಶ್ವಕಪ್​ 2024ರಲ್ಲಿ ಭಾರತ ತಂಡವು 8 ಗೆಲುವುಗಳೊಂದಿಗೆ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಎಲ್ಲಾ ಪಂದ್ಯಗಳಲ್ಲೂ ದುಬೆ ಕಣಕ್ಕಿಳಿದಿದ್ದರು.

5 / 7

ಆ ಬಳಿಕ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ದುಬೆ ಕಣಕ್ಕಿಳಿದಿದ್ದಾರೆ. ಈ ಮ್ಯಾಚ್​ಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು. ಇದೀಗ ಏಷ್ಯಾಕಪ್​ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಭಾರತ ತಂಡ ಗೆಲುವು ದಾಖಲಿಸಿದೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸತತ 35 ಪಂದ್ಯಗಳಲ್ಲಿ ಗೆಲುವು ನೋಡಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಶಿವಂ ದುಬೆ ಪಾಲಾಯಿತು.

6 / 7

ಶಿವಂ ದುಬೆ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದು 2019 ರಲ್ಲಿ. ಬಾಂಗ್ಲಾದೇಶ್ ವಿರುದ್ಧದ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕಾಲಿಟ್ಟ ದುಬೆಗೆ ಸೋಲಿನ ಸ್ವಾಗತ ದೊರೆತಿತ್ತು. ಅಂದರೆ ದುಬೆ ಆಡಿದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ 7 ವಿಕೆಟ್​ಗಳ ಸೋಲನುಭವಿಸಿತ್ತು. ಇದಾದ ಬಳಿಕ ಶಿವಂ ದುಬೆ ಕಣಕ್ಕಿಳಿದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಆದರೆ 5ನೇ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಮತ್ತೆ ಸೋಲನುಭವಿಸಿತು.

7 / 7

ಆ ಒಂದು ಸೋಲಿನ ಬಳಿಕ ಶಿವಂ ದುಬೆ ಒಮ್ಮೆಯೂ ಪರಾಜಯ ಕಂಡಿಲ್ಲ ಎಂಬುದು ವಿಶೇಷ. ಅಂದರೆ 2020 ರಿಂದ ದುಬೆ ಕಣಕ್ಕಿಳಿದ 35 ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಇದೀಗ ಸತತ ಗೆಲುವಿನ ಸರದಾರನಾಗಿ ಶಿವಂ ದುಬೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Published On - 9:57 am, Thu, 25 September 25

Loading...
Unable to load recommendations.
Follow Us