AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ತಂಡದ ಖರೀದಿಗೆ ಮುಂದಾದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ

The Hundred: ದಿ ಹಂಡ್ರೆಡ್ ಲೀಗ್ ಎಂಬುದು 100 ಎಸೆತಗಳ ಪಂದ್ಯಾವಳಿ. ಅಂದರೆ ಇಲ್ಲಿ ಪ್ರತಿ ಇನಿಂಗ್ಸ್​ನಲ್ಲಿ 100 ಎಸೆತಗಳಿರುತ್ತವೆ. ಅಲ್ಲದೆ 5 ಎಸೆತಗಳನ್ನು ಒಂದು ಓವರ್ ಎಂದು ಪರಿಗಣಿಸಲಾಗುತ್ತದೆ. 2021 ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಶುರು ಮಾಡಿದ ಈ ವಿಭಿನ್ನ ಟೂರ್ನಿಯ ತಂಡಗಳ ಷೇರುಗಳನ್ನು ಮಾರಾಟ ಮಾಡಲು ಇಸಿಬಿ ನಿರ್ಧರಿಸಿದೆ.

ಝಾಹಿರ್ ಯೂಸುಫ್
|

Updated on:Aug 18, 2024 | 2:33 PM

Share
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ದಿ ಹಂಡ್ರೆಡ್ ಲೀಗ್​ನ ತಂಡಗಳ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಈ ಹೂಡಿಕೆ ಸುದ್ದಿ ಬೆನ್ನಲ್ಲೇ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ 'ಲಂಡನ್ ಸ್ಪಿರಿಟ್' ತಂಡವನ್ನು ಖರೀದಿಸಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಅಂದರೆ ದಿ ಹಂಡ್ರೆಡ್ ಲೀಗ್​ನಲ್ಲೂ ತಂಡವನ್ನು ಹೊಂದಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ​ ಆಸಕ್ತಿ ತೋರಿಸಿದೆ.

1 / 5
ಕೆಲ ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ತಂಡಗಳ ಷೇರುಗಳನ್ನು ಖರೀದಿಸುವಂತೆ ಐಪಿಎಲ್ ಮಾಲೀಕರಲ್ಲಿ ಮನವಿ ಮಾಡಿತ್ತು. ಅಲ್ಲದೆ ಈ ತಂಡಗಳ ಷೇರುಗಳ ಖರೀದಿ ಬಳಿಕ ಆಯಾ ತಂಡಗಳ ಹೆಸರನ್ನು ಬದಲಿಸಲು ಅವಕಾಶ ನೀಡುವುದಾಗಿಯೂ ಇಸಿಬಿ ತಿಳಿಸಿದೆ.

2 / 5
ಇದರ ಬೆನ್ನಲ್ಲೇ ಲಂಡನ್ ಸ್ಪಿರಿಟ್ ತಂಡದ ಷೇರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ (ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್) ಆಸಕ್ತಿ ತೋರಿಸಿದೆ. ಅಲ್ಲದೆ ಲಂಡನ್ ಸ್ಪಿರಿಟ್ ತಂಡವನ್ನು ಖರೀದಿಸಿದ ಬಳಿಕ ಈ ತಂಡಕ್ಕೆ ಎಂಐ ಲಂಡನ್ ಎಂದು ಹೆಸರಿಡುವ ಸಾಧ್ಯತೆಯಿದೆ.

3 / 5
ಏಕೆಂದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ತಂಡಗಳಿಗೆ MI (ಮುಂಬೈ ಇಂಡಿಯನ್ಸ್) ಟ್ಯಾಗ್​ಲೈನ್​ನೊಂದಿಗೆ ಹೆಸರಿಡಲಾಗಿದೆ. UAE ಟಿ20 ಲೀಗ್​ನಲ್ಲಿ ಎಂಐ ಎಮಿರೇಟ್ಸ್ ಹೆಸರಿನ ತಂಡವಿದ್ದರೆ, ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಎಂಐ ಕೇಪ್ ಟೌನ್​ ಹೆಸರಿನಲ್ಲಿ ಕಣಕ್ಕಿಳಿಯುತ್ತಿದೆ. ಹಾಗೆಯೇ ಯುಎಸ್​ಎ ಟಿ20 ಲೀಗ್​ನಲ್ಲಿ ಎಂಐ ನ್ಯೂಯಾರ್ಕ್​ ಹೆಸರಿನ ತಂಡವನ್ನು ಹೊಂದಿದೆ. ಹೀಗಾಗಿ ಲಂಡನ್ ಸ್ಪಿರಿಟ್ ತಂಡವನ್ನು ಖರೀದಿಸಿದರೆ ಅದರ ಹೆಸರು ಎಂಐ ಲಂಡನ್ ಆಗುವ ಸಾಧ್ಯತೆ ಹೆಚ್ಚಿದೆ.

4 / 5
ಮುಂಬೈ ಇಂಡಿಯನ್ಸ್ ಅಲ್ಲದೆ ಐಪಿಎಲ್​ನ ಇತರೆ ಫ್ರಾಂಚೈಸಿಗಳಿಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಬಿಗ್ ಆಫರ್ ನೀಡಿದ್ದು, ಇಸಿಬಿ 8 ತಂಡಗಳ ಶೇ.49 ರಷ್ಟು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ ಮುಂದಿನ ತಿಂಗಳು ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದ್ದು, ಅದರಂತೆ ಐಪಿಎಲ್​ನ ಯಾವ ಫ್ರಾಂಚೈಸಿ ದಿ ಹಂಡ್ರೆಡ್ ಲೀಗ್​ಗೆ ಕಾಲಿಡಲಿದೆ ಕಾದು ನೋಡಬೇಕಿದೆ.

5 / 5

Published On - 2:30 pm, Sun, 18 August 24

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ