AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL 2023: ಬಿಗ್​ ಬ್ಯಾಷ್​ ಲೀಗ್​ನಲ್ಲಿ RCB ಆಟಗಾರನಿಗೆ 4 ಪಂದ್ಯಗಳ ನಿಷೇಧ..!

Tom Curran: ಇಂಗ್ಲೆಂಡ್ ಪರ 30 ಟಿ20 ಪಂದ್ಯಗಳನ್ನಾಡಿರುವ ಟಾಮ್ ಕರನ್ 29 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ 13 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿ 64 ರನ್​ ಕಲೆಹಾಕಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಕೆಕೆಆರ್​, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 13 ಪಂದ್ಯಗಳನ್ನಾಡಿರುವ ಟಾಮ್ ಕರನ್ 127 ರನ್ ಬಾರಿಸಿದ್ದಾರೆ.

TV9 Web
| Edited By: |

Updated on: Dec 21, 2023 | 3:26 PM

Share
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ ಸೀಸನ್ 14 ರ ನಾಲ್ಕು ಪಂದ್ಯಗಳಿಂದ ಟಾಮ್ ಕರನ್ ನಿಷೇಧಕ್ಕೊಳಗಾಗಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ಕರನ್ ಅಂಪೈರ್ ವಿರುದ್ಧ ಅನುಚಿತವಾಗಿ ವರ್ತಿಸಿದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.

1 / 6
ಲಾನ್ಸೆಸ್ಟನ್‌ನ ನಾರ್ತ್ ಟ್ಯಾಸ್ಮೆನಿಯಾ ಕ್ರಿಕೆಟ್ ಅಸೋಸಿಯೇಷನ್ ​​ಗ್ರೌಂಡ್‌ನಲ್ಲಿ ನಡೆದ ಹೋಬರ್ಟ್ ಹರಿಕೇನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಟಾಮ್ ಕರನ್ ಪಿಚ್​ನಲ್ಲಿ ಓಡಿದ್ದರಿಂದ ಅಂಪೈರ್ ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ಪರಿಗಣಿಸದೇ ಇಂಗ್ಲೆಂಡ್ ಆಟಗಾರ ಬೌಲಿಂಗ್ ರನ್ನಪ್​ ವೇಳೆ ಅಂಪೈರ್​ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದರು.

2 / 6
ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕರನ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನಲೆಯಲ್ಲಿ ಮ್ಯಾಚ್ ರೆಫರಿ ಸಿಡ್ನಿ ಸಿಕ್ಸರ್ಸ್​ ಆಟಗಾರನ ಮೇಲೆ 4 ಪಂದ್ಯಗಳ ನಿಷೇಧ ಹೇರಿದ್ದಾರೆ.

3 / 6
ವಿಶೇಷ ಎಂದರೆ ಎರಡು ದಿನಗಳ ಹಿಂದೆಯಷ್ಟೇ ಟಾಮ್ ಕರನ್ ಐಪಿಎಲ್​ನಲ್ಲಿ ಹರಾಜಾಗಿದ್ದರು. 1.50 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಆಲ್​ರೌಂಡರ್​ ಅನ್ನು ಆರ್​ಸಿಬಿ ಖರೀದಿಸಿತ್ತು. ಇದೀಗ ಅನುಚಿತ ವರ್ತನೆಯಿಂದಾಗಿ ಟಾಮ್ ಕರನ್ ಸುದ್ದಿಯಾಗಿದ್ದಾರೆ.

4 / 6
ಇಂಗ್ಲೆಂಡ್ ಪರ 30 ಟಿ20 ಪಂದ್ಯಗಳನ್ನಾಡಿರುವ ಟಾಮ್ ಕರನ್ 29 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ 13 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿ 64 ರನ್​ ಕಲೆಹಾಕಿದ್ದಾರೆ. ಇನ್ನು ಐಪಿಎಲ್​ನಲ್ಲಿ ಕೆಕೆಆರ್​, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 13 ಪಂದ್ಯಗಳನ್ನಾಡಿರುವ ಟಾಮ್ ಕರನ್ 127 ರನ್ ಬಾರಿಸಿದ್ದಾರೆ. ಈ ವೇಳೆ 13 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

5 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

6 / 6