- Kannada News Photo gallery Cricket photos U-19 Asia Cup 2024 Vaibhav Suryavanshi smashed 76 runs vs uae
U-19 Asia Cup 2024: ಶಾರ್ಜಾದಲ್ಲಿ ಸಿಕ್ಸರ್ಗಳ ಮಳೆಗರೆದ 13 ವರ್ಷದ ವೈಭವ್
Vaibhav Suryavanshi: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಎಲ್ಲರ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ ಅಂಡರ್-19 ಏಷ್ಯಾಕಪ್‌ನಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 13ರ ಹರೆಯದ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ 6 ಸಿಕ್ಸರ್ಗಳ ಸಹಿತ ಬರೋಬ್ಬರಿ 76 ರನ್ ಕಲೆಹಾಕಿದರು.
Updated on: Dec 04, 2024 | 7:17 PM

ಶಾರ್ಜಾ ಮೈದಾನದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ 13 ವರ್ಷದ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಯುಎಇ ನೀಡಿದ 138 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಅಜೇಯ ಅರ್ಧಶತಕ ಸಿಡಿಸಿದರು.

ಕ್ರೀಸ್ಗೆ ಕಾಲಿಟ್ಟು ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ವಯಭವ್ ಸಿಕ್ಸರ್ ಬಾರಿಸಿದರು. ವೈಭವ್ ಅವರ ಈ ಸಿಡಿಲಬ್ಬರ ನೋಡಿದ ಯುಎಇ ಬೌಲರ್‌ಗಳು ಕೂಡ ದಂಗಾದರು. ವೈಭವ್ ಮುಂದಿನ 10 ಎಸೆತಗಳಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿದರು. ಹೀಗಾಗಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ವೈಭವ್ ಅವರ ಮೊದಲ ಅರ್ಧಶತಕವಾಗಿದೆ.

ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಸ್ಟ್ರೈಕ್ ಪಡೆದ ವೈಭವ್ ಸೂರ್ಯವಂಶಿ, ಅಲಿ ಅಸ್ಗರ್ ಎಸೆತದಲ್ಲಿ ಸ್ಲಾಗ್ ಸ್ವೀಪ್ ಶಾಟ್ ಆಡುವ ಮೂಲಕ ಸಿಕ್ಸರ್ ಬಾರಿಸಿದರು. ಇದಾದ ಬಳಿಕ ಅಯಾನ್ ಖಾನ್ ಅವರ ಮೂರನೇ ಮತ್ತು ಐದನೇ ಎಸೆತಗಳಲ್ಲಿಯೂ ಸೂರ್ಯವಂಶಿ ಬಿಗ್ ಸಿಕ್ಸರ್ ಬಾರಿಸಿದರು. ವೈಭವ್ ಬಾರಿಸಿದ ಈ ಎಲ್ಲಾ ಸಿಕ್ಸರ್ಗಳು 80ರಿಂದ 90 ಮೀಟರ್ ದೂರ ಹೋಗಿ ಬಿದ್ದವು.

ಕಳೆದ ಎರಡು ಪಂದ್ಯಗಳಲ್ಲಿ ಮುಕ್ತವಾಗಿ ಆಡಲು ಸಾಧ್ಯವಾಗದ ಕಾರಣ ವೈಭವ್ ಸೂರ್ಯವಂಶಿ ಅವರಿಗೆ ಈ ಇನ್ನಿಂಗ್ಸ್ ಬಹಳ ಮಹತ್ವದ್ದಾಗಿತ್ತು. ಪಾಕಿಸ್ತಾನದ ವಿರುದ್ಧ ವೈಭವ್ ಕೇವಲ ಒಂದು ರನ್ ಮತ್ತು ಜಪಾನ್ ವಿರುದ್ಧ ಕೇವಲ 23 ರನ್ ಗಳಿಸಿ ಔಟಾಗಿದ್ದರು.

ಆದರೆ ಯುಎಇ ವಿರುದ್ಧ ವೈಭವ್ ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದರೆ, ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಈ ಆಟಗಾರನನ್ನು 1.1 ಕೋಟಿ ರೂಪಾಯಿಗೆ ಏಕೆ ಖರೀದಿಸಿತು ಎಂದು ಎಲ್ಲರೂ ಊಹಿಸಬಹುದು. ವೈಭವ್ ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನು ನೋಡಿದರೆ, ಮುಂದಿನ ಐಪಿಎಲ್ನಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಓಪನಿಂಗ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.



















