SRH vs KKR: ಸುನಿಲ್ ನರೈನ್ ‘ಡಬಲ್ ಸೆಂಚುರಿ’; ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿಗ

Updated on: May 03, 2026 | 5:26 PM

Sunil Narine IPL 2026 Record: ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸುನಿಲ್ ನರೈನ್ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ವಿದೇಶಿ ಬೌಲರ್ ಎನಿಸಿದರು. ಅಲ್ಲದೆ, ಕೆಕೆಆರ್ ಪರ 201 ವಿಕೆಟ್ ಪಡೆದು, ಒಂದೇ ತಂಡಕ್ಕಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ನರೈನ್ ಮತ್ತು ಕೆಕೆಆರ್ ತಂಡಕ್ಕೆ ಹೆಮ್ಮೆಯ ಕ್ಷಣ.

1 / 5
ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್‌ ತಂಡದ ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ವಿದೇಶಿ ಬೌಲರ್ ಸಾಧಿಸದ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿದರು.

ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್‌ ತಂಡದ ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ವಿದೇಶಿ ಬೌಲರ್ ಸಾಧಿಸದ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿದರು.

2 / 5

ಸನ್‌ರೈಸರ್ಸ್ ವಿರುದ್ಧದ ಈ ಪಂದ್ಯದಲ್ಲಿ, ಸುನಿಲ್ ನರೈನ್ 4 ಓವರ್ ಬೌಲಿಂಗ್ ಮಾಡಿ, 31 ರನ್ ನೀಡಿ, 2 ವಿಕೆಟ್ ಪಡೆದರು. ಅವರು ಸಾಹಿಲ್ ಅರೋರಾ ಮತ್ತು ಇಶಾನ್ ಕಿಶನ್ ಅವರನ್ನು ಔಟ್ ಮಾಡಿದರು. ಸಾಹಿಲ್ ಅರೋರಾ ಅವರ ವಿಕೆಟ್ ಸುನಿಲ್ ಅವರಿಗೆ ವಿಶೇಷವಾಗಿ ಸ್ಮರಣೀಯವಾಗಿತ್ತು, ಏಕೆಂದರೆ ಇದು ಅವರ 200 ಐಪಿಎಲ್ ವಿಕೆಟ್‌ ಆಗಿತ್ತು.

3 / 5

ನರೈನ್ ಈಗ 197 ಐಪಿಎಲ್ ಪಂದ್ಯಗಳಲ್ಲಿ 201 ವಿಕೆಟ್‌ಗಳನ್ನು ಹೊಂದಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಯುಜ್ವೇಂದ್ರ ಚಾಹಲ್ ಮತ್ತು ಭುವನೇಶ್ವರ ಕುಮಾರ್ ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ. ಆದಾಗ್ಯೂ, ವಿದೇಶಿ ಆಟಗಾರನಾಗಿ 200 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಸುನಿಲ್ ನರೈನ್.

4 / 5

ಇದರಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ನರೈನ್, ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿಯೇ ಈ ಎಲ್ಲಾ 201 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2012 ರಿಂದ ಕೆಕೆಆರ್‌ ತಂಡದ ಭಾಗವಾಗಿರುವ ನರೈನ್ ಐಪಿಎಲ್ ಇತಿಹಾಸದಲ್ಲಿ ಒಬ್ಬ ಆಟಗಾರ ಒಂದೇ ತಂಡದ ಪರ 200 ವಿಕೆಟ್‌ಗಳನ್ನು ಕಬಳಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ.

5 / 5

ಕಳೆದ 14 ವರ್ಷಗಳಿಂದ ಕೆಕೆಆರ್‌ ತಂಡದ ಅವಿಭಾಜ್ಯ ಅಂಗವಾಗಿರುವ ನರೈನ್, ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಾಧನೆಯು ಸುನಿಲ್ ನರೈನ್‌ಗೆ ಮಾತ್ರವಲ್ಲದೆ ಇಡೀ ಕೆಕೆಆರ್ ಫ್ರಾಂಚೈಸಿಗೆ ಹೆಮ್ಮೆಯ ಕ್ಷಣವಾಗಿದೆ.

Loading...
Unable to load recommendations.
Follow Us