
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದು ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿದ್ದ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯದಿಂದಾಗಿ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 4ಓವರ್ಗಳನ್ನು ಬೌಲ್ ಮಾಡಿದ್ದ ವರುಣ್ ಕೇವಲ 16 ರನ್ ನೀಡಿ 1 ವಿಕೆಟ್ ಪಡೆದಿದ್ದರು(PC-BCCI).
ಅಚ್ಚರಿಯ ಸಂಗತಿಯೆಂದರೆ ವರುಣ್ ಚಕ್ರವರ್ತಿ ಎರಡು ತಿಂಗಳ ನಂತರ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ತಿಂಗಳು ಅವರು ಎಲ್ಲಿದ್ದರು ಎಂದರೆ ಗಾಯದಿಂದ ಚೇತರಿಸಿಕೊಳ್ಳಲು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದರು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ವರುಣ್, ತಮ್ಮ ಫಿಟ್ನೆಸ್ ಸಾಭೀತುಪಡಿಸಿ ತಂಡದಲ್ಲಿ ಸ್ಥಾನ ಪಡೆದಿದ್ದರು(PC-BCCI).
ಆದರೀಗ ತಂಡವನ್ನು ಕೂಡಿಕೊಂಡು ಕೇವಲ ಒಂದೇ ಒಂದು ಪಂದ್ಯವನ್ನು ಆಡಿದ ಬಳಿಕ ವರುಣ್ ಚಕ್ರವರ್ತಿ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ ನಾಲ್ಕು ಓವರ್ ಬೌಲಿಂಗ್ ಮಾಡಿದ್ದ ವರುಣ್ಗೆ ಮತ್ತೆ ಗಾಯವಾಗಿದೆ . ಈ ಗಾಯವು ಮತ್ತೊಮ್ಮೆ ಬಿಸಿಸಿಐ ಮತ್ತು ಅದರ ಸೆಂಟರ್ ಆಫ್ ಎಕ್ಸಲೆನ್ಸ್ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ(PC-BCCI).
ಇಂಗ್ಲೆಂಡ್ ಸರಣಿಯಿಂದಲೂ ವರುಣ್ ಚಕ್ರವರ್ತಿ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದು ಫಿಟ್ನೆಸ್ ಮೇಲೆ ಕೆಲಸ ಮಾಡಿದ್ದರು. ಆದರೀಗ ಒಂದು ಪಂದ್ಯದ ಬಳಿಕ ವರುಣ್ ಗಾಯಕ್ಕೆ ತುತ್ತಾಗಿದ್ದಾರೆ. ಈ ರೀತಿಯಾಗಿರುವುದು ಕೇವಲ ವರುಣ್ ಚಕ್ರವರ್ತಿಗೆ ಮಾತ್ರವಲ್ಲ. ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಆಟಗಾರರು ಈ ಹಿಂದೆ ಇದೇ ರೀತಿಯಾಗಿ ಗಾಯಕ್ಕೆ ತುತ್ತಾಗಿದ್ದಾರೆ(PC-PTI).
ಗಾಯದಿಂದ ಬಳಲುತ್ತಿರುವ ವರುಣ್ ಚಕ್ರವರ್ತಿ ಅಫ್ಘಾನಿಸ್ತಾನ ವಿರುದ್ಧದ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ಗೆ ಆಡುವ ಅವಕಾಶ ಸಿಗಬಹುದು. ರವಿ ಬಿಷ್ಣೋಯ್ ಎರಡನೇ ಮತ್ತು ಮೂರನೇ ಟಿ20 ಪಂದ್ಯದಲ್ಲಿ ಆಡುವುದನ್ನು ಕಾಣಬಹುದು. ರವಿ ಬಿಷ್ಣೋಯ್ ಟೀಂ ಇಂಡಿಯಾ ಪರ ಇದುವರೆಗೆ 49 ಪಂದ್ಯಗಳನ್ನಾಡಿದ್ದು 67 ವಿಕೆಟ್‌ಗಳನ್ನು ಕಬಳಿಸಿದ್ದಾರೆ(PC-PTI).