Sign In

By signing in or creating an account, you agree with Associated Broadcasting Company's Terms & Conditions and Privacy Policy.

Yashasvi Jaiswal: ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

IPL 2023 Kannada: ಯಶಸ್ವಿ ಜೈಸ್ವಾಲ್ ಮೊದಲ ಓವರ್​ನಲ್ಲಿ 2 ಭರ್ಜರಿ ಸಿಕ್ಸ್, ಮೂರು ಫೋರ್ ಹಾಗೂ 2 ರನ್​ಗಳೊಂದಿಗೆ 26 ರನ್​ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಪ್ರಥಮ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: May 12, 2023 | 3:57 PM

IPL 2023: ಐಪಿಎಲ್​ನ 56ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಅಕ್ಷರಶಃ ಅಬ್ಬರಿಸಿದ್ದರು. ಮೊದಲ ಓವರ್​ನಲ್ಲೇ 26 ರನ್​ ಚಚ್ಚಿದ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದರು.

1 / 9
ಅಷ್ಟೇ ಅಲ್ಲದೆ ಕೆಕೆಆರ್ ಬೌಲರ್​ಗಳ ಬೆಂಡೆತ್ತುವ ಮೂಲಕ ಅಬ್ಬರಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ 47 ಎಸೆತಗಳಲ್ಲಿ ಅಜೇಯ 98 ರನ್ ಸಿಡಿಸಿದ್ದರು.

2 / 9
ವಿಶೇಷ ಎಂದರೆ ಜೈಸ್ವಾಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್​ ವೇಳೆ ಬರೋಬ್ಬರಿ 5 ಭರ್ಜರಿ ಸಿಕ್ಸ್ ಹಾಗೂ 13 ಫೋರ್​ಗಳು ಮೂಡಿಬಂದಿದ್ದವು. ಈ ಸ್ಪೋಟಕ ಇನಿಂಗ್ಸ್​ಗೆ ಇದೀಗ ರನ್ ಮೆಷಿನ್ ವಿರಾಟ್ ಕೊಹ್ಲಿಯೇ ಫಿದಾ ಆಗಿದ್ದಾರೆ.

3 / 9
ಎಂತಹ ಅದ್ಭುತ ಬ್ಯಾಟಿಂಗ್...ಇತ್ತೀಚೆಗೆ ನಾ ನೋಡಿದ ಅತ್ಯುತ್ತಮ ಇನಿಂಗ್ಸ್ ಇದು...ಎಂತಹ ಅದ್ಭುತ ಪ್ರತಿಭೆ...ಎಂದು ಯಶಸ್ವಿ ಜೈಸ್ವಾಲ್ ಅವರನ್ನು ಕಿಂಗ್ ಕೊಹ್ಲಿ ಹಾಡಿ ಹೊಗಳಿ ಇನ್​ಸ್ಟಾಗ್ರಾಮ್ ಸ್ಟೋರಿ​ ಹಾಕಿದ್ದಾರೆ.

4 / 9
ಇತ್ತ ಪ್ರಸ್ತುತ ಕ್ರಿಕೆಟ್ ಅಂಗಳದ ಕಿಂಗ್ ಕಡೆಯಿಂದಲೇ ಹೊಗಳಿಸಿಕೊಂಡಿರುವ ಯಶಸ್ವಿ ಜೈಸ್ವಾಲ್ ಹಿರಿಹಿರಿ ಹಿಗ್ಗಿದ್ದಾರೆ. ಇನ್ನು ಈ ಸ್ಪೋಟಕ ಇನಿಂಗ್ಸ್​ ಮೂಲಕ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಆ ದಾಖಲೆಯೆಂದರೆ...

5 / 9
ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ದಾಖಲೆ ಇದೀಗ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೆಎಲ್ ರಾಹುಲ್ ಹೆಸರಿನಲ್ಲಿತ್ತು. ಇದೀಗ 13 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ ಯಶಸ್ವಿ ಜೈಸ್ವಾಲ್ ಹೊಸ ದಾಖಲೆ ನಿರ್ಮಿಸಿದ್ದಾರೆ.

6 / 9
ಇನ್ನು ನಿತೀಶ್ ರಾಣಾ ಎಸೆದ ಈ ಪಂದ್ಯದ ಮೊದಲ ಓವರ್​ನಲ್ಲಿ 20 ವರ್ಷದ ಯಶಸ್ವಿ ಜೈಸ್ವಾಲ್ 6, 6, 4, 4, 2, 4 ಫೋರ್ ಬಾರಿಸಿದ್ದರು. ಈ ಮೂಲಕ ಮೊದಲ ಓವರ್​ನಲ್ಲೇ ಅತ್ಯಧಿಕ ರನ್​ ಕಲೆಹಾಕಿದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಎನಿಸಿಕೊಂಡರು.

7 / 9
ಹಾಗೆಯೇ ಮೊದಲ ಓವರ್​ನಲ್ಲಿ ಅತೀ ಹೆಚ್ಚು ಬಾರಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಮುನ್ನ 2011 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿ ಮೊದಲ ಓವರ್​ನಲ್ಲಿ 27 ರನ್ ಬಾರಿಸಿತ್ತು. ಆದರೆ ಆ ಓವರ್​ನಲ್ಲಿ 7 ಎಕ್ಸ್​ಟ್ರಾ ರನ್​ಗಳಿದ್ದವು.

8 / 9
ಆದರೀಗ ಯಶಸ್ವಿ ಜೈಸ್ವಾಲ್ ಮೊದಲ ಓವರ್​ನಲ್ಲಿ 2 ಭರ್ಜರಿ ಸಿಕ್ಸ್, ಮೂರು ಫೋರ್ ಹಾಗೂ 2 ರನ್​ಗಳೊಂದಿಗೆ 26 ರನ್​ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಪ್ರಥಮ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ.

9 / 9
Follow us
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ

ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ

ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ

ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ

ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ

ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ

ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ

ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ

ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ

ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ