RCB vs LSG ಪಂದ್ಯದಿಂದ ಹೊರಗುಳಿಯುತ್ತಾರಾ ವಿರಾಟ್ ಕೊಹ್ಲಿ?

Updated on: Apr 14, 2026 | 6:16 PM

Virat Kohli Injury Update: ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಜ್ವರದಿಂದ ಬಳಲುತ್ತಿದ್ದರು. ಇದಾಗ್ಯೂ ಅವರು ವಾಂಖೆಡೆ ಮೈದಾನದಲ್ಲಿ ಕಣಕ್ಕಿಳಿದಿದ್ದರು. ಆದರೆ ಬ್ಯಾಟಿಂಗ್​ ಮಾಡುವಾಗ ಅವರು ಹಿಮ್ಮಡಿ ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುತ್ತಾರಾ ಎಂಬುದೇ ಪ್ರಶ್ನೆ.

1 / 5
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಏಪ್ರಿಲ್ 15 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ.

2 / 5
ಏಪ್ರಿಲ್ 12 ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಕಾಲಿನ ಹಿಮ್ಮಡಿ ನೋವಿಗೆ ಒಳಗಾಗಿದ್ದರು. ಹೀಗಾಗಿ ಅವರು ಫೀಲ್ಡಿಂಗ್​ಗೆ ಆಗಮಿಸಿರಲಿಲ್ಲ. ಇದಾಗ್ಯೂ ಕೊಹ್ಲಿ ಎಲ್​ಎಸ್​ಜಿ ವಿರುದ್ಧದ ಪಂದ್ಯದ ವೇಳೆ ಸಂಪೂರ್ಣ ಫಿಟ್ ಆಗಲಿದ್ದಾರೆ ಎನ್ನಲಾಗಿತ್ತು.

3 / 5
ಆದರೆ ಸೋಮವಾರ ವಿರಾಟ್ ಕೊಹ್ಲಿ ಅವರು ಆರ್​​ಸಿಬಿ ತಂಡದ ಸದಸ್ಯರೊಂದಿಗೆ ಪ್ರಯಾಣಿಸಿರಲಿಲ್ಲ. ಅಂದರೆ ಬೆಂಗಳೂರಿಗೆ ಆಗಮಿಸಿರಲಿಲ್ಲ. ಬದಲಾಗಿ ಮುಂಬೈನಲ್ಲೇ ಉಳಿದುಕೊಂಡಿದ್ದರು. ಹೀಗಾಗಿಯೇ ಕೊಹ್ಲಿ ಆಡುವುದು ಅನುಮಾನ ಎನ್ನಲಾಗಿತ್ತು.

4 / 5
ಇದಾಗ್ಯೂ ಮಂಗಳವಾರ ಸಂಜೆಯ ವೇಳೆಗೆ ವಿರಾಟ್ ಕೊಹ್ಲಿ ಆರ್​​​ಸಿಬಿ ತಂಡವನ್ನು ಕೂಡಿಕೊಂಡರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಹೀಗಾಗಿ ಮಂಗಳವಾರ ರಾತ್ರಿ ಕೊಹ್ಲಿ ಆಡಲಿದ್ದಾರಾ ಅಥವಾ ಇಲ್ಲವಾ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.

5 / 5
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ಯಶ್ ದಯಾಳ್ (ಅಲಭ್ಯ).

Published On - 5:18 pm, Tue, 14 April 26

Follow Us