ಸೆಂಚುರಿಯನ್ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ವಿರಾಟ್ ಕೊಹ್ಲಿ (Virat Kohli) ವಿಶೇಷ ದಾಖಲೆ ಬರೆಯಬಹುದು. ಅದು ಕೂಡ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ (Steve Smith) ಅವರ ಸೆಂಚುರಿ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿದೇಶದಲ್ಲಿ ಅತ್ಯಧಿಕ ಶತಕ ಸಿಡಿಸಿರುವ ಸಕ್ರೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಸ್ಮಿತ್ ಇದುವರೆಗೆ 32 ಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ 16 ಸೆಂಚುರಿಗಳು ಮೂಡಿಬಂದಿರುವುದು ವಿದೇಶದಲ್ಲಿ ಎಂಬುದು ವಿಶೇಷ.
ಇತ್ತ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಬಾರಿಸಿರುವ ಶತಕಗಳ ಸಂಖ್ಯೆ 29. ಇದರಲ್ಲಿ ವಿದೇಶಿ ಪಿಚ್ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಮೂಡಿಬಂದಿರುವ ಸೆಂಚುರಿಗಳ ಸಂಖ್ಯೆ 15. ಅಂದರೆ ಸ್ಮಿತ್ಗಿಂತ ಕೊಹ್ಲಿ ಒಂದು ಶತಕದಿಂದ ಹಿಂದಿದ್ದಾರೆ.
ಒಂದು ವೇಳೆ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೆ, ವಿದೇಶದಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ ಸಕ್ರೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಮಿತ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಆಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕಗಳನ್ನು ಸಿಡಿಸಿರುವ ಬ್ಯಾಟರ್ಗಳ ಪಟ್ಟಿಗೂ ವಿರಾಟ್ ಕೊಹ್ಲಿ ಎಂಟ್ರಿ ಕೊಡಲಿದ್ದಾರೆ. ಅದರಂತೆ ಸೆಂಚುರಿಯನ್ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಸೆಂಚುರಿ ಮೂಡಿಬರಲಿದೆಯಾ ಕಾದು ನೋಡೋಣ.
ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ಗಳು: ಸ್ಟೀವ್ ಸ್ಮಿತ್ (16), ವಿರಾಟ್ ಕೊಹ್ಲಿ (15), ಕೇನ್ ವಿಲಿಯಮ್ಸನ್ (13), ಜೋ ರೂಟ್ (12), ಚೇತೇಶ್ವರ ಪೂಜಾರ (9).
Published On - 7:59 am, Mon, 25 December 23