- Kannada News Photo gallery Cricket photos West Indies batter Devon Thomas banned by ICC For Match Fixing
ಮ್ಯಾಚ್ ಫಿಕ್ಸಿಂಗ್ ಆರೋಪ; ವಿಂಡೀಸ್ ಕ್ರಿಕೆಟಿಗನಿಗೆ ಐದು ವರ್ಷಗಳ ನಿಷೇಧದ ಶಿಕ್ಷೆ..!
Devon Thomas Banned : ಕಳೆದ ವರ್ಷ ಮೇ 23 ರಂದೇ ಡೆವೊನ್ ಥಾಮಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಆ ಬಳಿಕ ಥಾಮಸ್ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಇದೀಗ ಆರೋಪ ಸಾಭೀತಾದ ಬಳಿಕ ಅವರಿಗೆ ಈ ಐದು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗಿದೆ.
Updated on: May 03, 2024 | 4:56 PM

ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡೆವೊನ್ ಥಾಮಸ್ಗೆ ಐಸಿಸಿ ಐದು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ. ಥಾಮಸ್ ವಿರುದ್ಧ 7 ನಿಯಮಗಳನ್ನು ಉಲ್ಲಂಘಿಸಿದ ಆರೋಪ ಕೇಳಿಬಂದಿತ್ತು. ಆ ಬಳಿಕ ನಡೆದ ತನಿಖೆಯಲ್ಲಿ ಥಾಮಸ್ ಈ ಆರೋಪಗಳೆಲ್ಲ ನಿಜವೆಂದು ಒಪ್ಪಿಕೊಂಡಿದ್ದರು.

ವಿಂಡೀಸ್ ಬ್ಯಾಟರ್ ಡೆವೊನ್ ಥಾಮಸ್, ಶ್ರೀಲಂಕಾ ಕ್ರಿಕೆಟ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಭ್ರಷ್ಟಾಚಾರ-ವಿರೋಧಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಹೇಳಿದೆ.

ಕಳೆದ ವರ್ಷ ಮೇ 23 ರಂದೇ ಡೆವೊನ್ ಥಾಮಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಆ ಬಳಿಕ ಥಾಮಸ್ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಇದೀಗ ಆರೋಪ ಸಾಭೀತಾದ ಬಳಿಕ ಅವರಿಗೆ ಈ ಐದು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗಿದೆ.

34 ವರ್ಷದ ಬ್ಯಾಟ್ಸ್‌ಮನ್ ಡೆವೊನ್ ಥಾಮಸ್ 2009 ರಲ್ಲಿ ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 2011 ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಥಾಮಸ್ 2022 ರಲ್ಲಿ ವಿಂಡೀಸ್ ಪರ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ಡೆವೊನ್ ಥಾಮಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ವಿಂಡೀಸ್ ಪರ ಒಂದು ಟೆಸ್ಟ್, 21 ಏಕದಿನ ಮತ್ತು 12 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 31, 238 ಮತ್ತು 51 ರನ್ ಕಲೆಹಾಕಿದ್ದಾರೆ. ಬೌಲಿಂಗ್‌ನಲೂ ಕಮಾಲ್ ಮಾಡಿರುವ ಅವರು ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದಾರೆ.




