
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ (Rajat Patidar) ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಕಾರಣವೇನು? ಎಂದು ನೋಡುವುದಾದರೆ... ಸಿಗುವ ಉತ್ತರ ಐಸಿಸಿ ನಿಯಮ. (PC: IPL)

ಹೌದು, ರಜತ್ ಪಾಟಿದಾರ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲು ಮುಖ್ಯ ಕಾರಣ ಐಸಿಸಿ ನಿಯಮ. ಈ ಪಂದ್ಯಕ್ಕೂ ಮುನ್ನ ಅಂದರೆ, ಮೇ 13 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದಲ್ಲಿ, ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಬೌನ್ಸರ್ ಬಾಲ್ ರಜತ್ ಪಾಟೀದಾರ್ ಅವರ ಹೆಲ್ಮೆಟ್‌ಗೆ ನೇರವಾಗಿ ಬಡಿದಿತ್ತು. (PC: IPL)

ಪಂದ್ಯದ ವೇಳೆ ಆರಂಭಿಕ ವೈದ್ಯಕೀಯ ತಪಾಸಣೆಯಲ್ಲಿ ಅವರು ತೇರ್ಗಡೆಯಾಗಿ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ, ಪಂದ್ಯ ಮುಗಿದ ನಂತರ ಅವರಲ್ಲಿ ಮೆದುಳಿನ ಆಘಾತದ (Concussion) ಲಕ್ಷಣಗಳು ಕಾಣಿಸಿಕೊಂಡವು. ಹೀಗಾಗಿ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪಾಟಿದಾರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ಪಂದ್ಯದಿಂದ ಹೊರಗಿಟ್ಟಿದ್ದಾರೆ. (PC: IPL)

ಏಕೆಂದರೆ, ಐಸಿಸಿಯ ವೈದ್ಯಕೀಯ ನಿಯಮಗಳ ಪ್ರಕಾರ, ಯಾವುದೇ ಆಟಗಾರನಿಗೆ ಮೆದುಳಿನ ಆಘಾತ (Concussion) ದೃಢಪಟ್ಟರೆ ಅಥವಾ ಅದರ ಲಕ್ಷಣಗಳು ಕಂಡುಬಂದರೆ ಅವರನ್ನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಸುವಂತಿಲ್ಲ. ಬದಲಾಗಿ ವಿಶ್ರಾಂತಿ ನೀಡುವುದು ಕಡ್ಡಾಯ. ಒಂದು ವೇಳೆ ಗಂಭೀರ ಲಕ್ಷಣಗಳು ಕಂಡು ಬಂದರೆ ಕಡ್ಡಾಯವಾಗಿ ಕನಿಷ್ಠ 7 ದಿನಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಬೇಕು. (PC: IPL)

ಆದರೆ ರಜತ್ ಪಾಟಿದಾರ್ ಅವರ ಗಾಯ ಗಂಭೀರವಲ್ಲ. ಇದಾಗ್ಯೂ ಐಸಿಸಿ ನಿಯಮವನ್ನು ಪಾಲಿಸುವ ಸಲುವಾಗಿ ರಜತ್ ಪಾಟಿದಾರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಾಟಿದಾರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ. (PC: IPL)

ಹೀಗಾಗಿ ಮೇ 22 ರಂದು ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೂಲಕ ರಜತ್ ಪಾಟಿದಾರ್ ಕಂಬ್ಯಾಕ್ ಮಾಡಲಿದ್ದಾರೆ. ಈ ಪಂದ್ಯದೊಂದಿಗೆ ಆರ್ಸಿಬಿ ತಂಡದ ಲೀಗ್ ಹಂತದ ಮ್ಯಾಚ್ಗಳು ಮುಗಿಯಲಿದ್ದು, ಇದಾದ ಬಳಿಕ ಚಾಲೆಂಜರ್ಸ್ ಪಡೆ ಪ್ಲೇಆಫ್ನಲ್ಲಿ ಕಣಕ್ಕಿಳಿಯಲಿದೆ. (PC: IPL)
Published On - 9:43 am, Mon, 18 May 26