- Kannada News Photo gallery Cricket photos WPL RCB name Heather Graham, Kim Garth replacements for Healy, Devine
WPL 2025: ಆರ್‌ಸಿಬಿ ತಂಡಕ್ಕೆ ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರ್ತಿರ ಆಗಮನ
RCB WPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಸೋಫಿ ಡಿವೈನ್ ಮತ್ತು ಕೇಟ್ ಕ್ರಾಸ್ ಅವರ ಬದಲಿಯಾಗಿ, ಆಸ್ಟ್ರೇಲಿಯಾದ ಆಲ್-ರೌಂಡರ್‌ಗಳಾದ ಹೀದರ್ ಗ್ರಹಾಂ ಮತ್ತು ಕಿಮ್ ಗಾರ್ತ್ ಅವರನ್ನು ಸೇರ್ಪಡೆ ಮಾಡಿಕೊಂಡಿದೆ. ಈ ಆಟಗಾರ್ತಿಯರ ಸೇರ್ಪಡೆಯಿಂದ ಆರ್‌ಸಿಬಿ ತಂಡಕ್ಕೆ ಹೆಚ್ಚಿನ ಬಲ ಬಂದಂತ್ತಾಗಿದೆ.
Updated on: Feb 03, 2025 | 7:15 PM

ಫೆಬ್ರವರಿ 14 ರಿಂದ ವಡೋದರಾದಲ್ಲಿ ಪ್ರಾರಂಭವಾಗುವ ಮಹಿಳಾ ಪ್ರೀಮಿಯರ್ ಲೀಗ್ನ ಮೂರನೇ ಆವೃತ್ತಿ ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಬ್ಬರು ಆಸ್ಟ್ರೇಲಿಯಾ ತಂಡದ ಮಹಿಳಾ ಆಟಗಾರ್ತಿಯರ ಆಗಮನವಾಗಿದೆ. ಇದೀಗ ಈ ಇಬ್ಬರ ಎಂಟ್ರಿಯಿಂದ ತಂಡ ಇನ್ನಷ್ಟು ಬಲಿಷ್ಠವಾಗಿ ಕಾಣುತ್ತಿದೆ.

ವಾಸ್ತವವಾಗಿ 2025 ರ ಡಬ್ಲ್ಯುಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಮಹಿಳಾ ತಂಡದಿಂದ ಇಬ್ಬರು ಆಟಗಾರ್ತಿಯರು ಈ ಬಾರಿಯ ಟೂರ್ನಿಯಿಂದ ಹಿಂದೆ ಸರಿದಿದ್ದರು. ಆ ಇಬ್ಬರಲ್ಲಿ ನ್ಯೂಜಿಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಸೋಫಿ ಡಿವೈನ್ ಮತ್ತು ಇಂಗ್ಲೆಂಡ್ ಆಟಗಾರ್ತಿ ಕೇಟ್ ಕ್ರಾಸ್ ಸೇರಿದ್ದಾರೆ.

ಸೋಫಿ ಡಿವೈನ್ ಮತ್ತು ಕೇಟ್ ಕ್ರಾಸ್ ವೈಯಕ್ತಿಕ ಕಾರಣಗಳಿಗಾಗಿ ಈ ವರ್ಷ ಡಬ್ಲ್ಯುಪಿಎಲ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ನ್ಯೂಜಿಲೆಂಡ್‌ನ 35 ವರ್ಷದ ಆಟಗಾರ್ತಿ ಡಿವೈನ್ ಆಟದಿಂದ ಅನಿರ್ದಿಷ್ಟಾವಧಿಯ ವಿರಾಮ ತೆಗೆದುಕೊಂಡಿದ್ದಾರೆ. ಇತ್ತ ಇಂಗ್ಲೆಂಡ್ ಆಲ್‌ರೌಂಡರ್ ಕೆಟ್ ಕ್ರಾಸ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ ಇಬ್ಬರ ಬದಲಿಯಾಗಿ ಆಸ್ಟ್ರೇಲಿಯಾ ತಂಡದ ಹೀದರ್ ಗ್ರಹಾಂ ಮತ್ತು ಕಿಮ್ ಗಾರ್ತ್ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ರಹಾಂ ಇದುವರೆಗೆ ಐದು ಟಿ20 ಪಂದ್ಯಗಳನ್ನು ಆಡಿದ್ದು ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇತ್ತ ಕಿಮ್ ಗಾರ್ತ್ ಆಸ್ಟ್ರೇಲಿಯಾ ತಂಡವನ್ನು 56 ಏಕದಿನ, ನಾಲ್ಕು ಟೆಸ್ಟ್ ಹಾಗೂ 59 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಅವರು ಈ ಹಿಂದೆ ಡಬ್ಲ್ಯುಪಿಎಲ್ನಲ್ಲಿ ಗುಜರಾತ್ ಜಾಯಿಂಟ್ಸ್ ಪರ ಆಡಿದ್ದರು. ಆರ್‌ಸಿಬಿ ಈ ಇಬ್ಬರೂ ಆಟಗಾರ್ತಿಯರನ್ನು ತಲಾ 30 ಲಕ್ಷ ರೂ. ಮೂಲ ಬೆಲೆಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಆರ್‌ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಹೀದರ್ ಗ್ರಹಾಂ, ರೇಣುಕಾ ಸಿಂಗ್, ಚಾರ್ಲಿ ಡೀನ್, ಏಕ್ತಾ ಬಿಶ್ತ್, ಕಿಮ್ ಗಾರ್ತ್, ಕನಿಕಾ ಅಹುಜಾ, ದಾನಿ ವ್ಯಾಟ್‌ಮಟ್, ಜೋಶಿತಾ ವಿಜೆ, ರಾಘ್ವಿ ಬಿಸ್ತ್, ಜಾಗರವಿ ಪವಾರ್,



















