AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final 2023: ಒಂದೇ ಪಂದ್ಯದಲ್ಲಿ ಒಂದೇ ರೀತಿಯ ದಾಖಲೆ ಬರೆಯಲ್ಲಿದ್ದಾರೆ ರೋಹಿತ್- ಕಮ್ಮಿನ್ಸ್..!

WTC Final 2023: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ಅಪರೂಪದ ದಾಖಲೆಗೆ ಸಾಕ್ಷಿಯಾಗುತ್ತಿದೆ.

ಪೃಥ್ವಿಶಂಕರ
|

Updated on:Jun 04, 2023 | 12:40 PM

Share
ಒಂದೇ ಪಂದ್ಯದಲ್ಲಿ ಉಭಯ ತಂಡಗಳ ನಾಯಕರು ತಮ್ಮ ಹೆಸರಿನಲ್ಲಿ ಒಂದೇ ರೀತಿಯ ದಾಖಲೆ ಬರೆಯುವುದು ತೀರ ಅಪರೂಪದ ಸಂಗತಿ. ಆದರೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ಈ ವಿಶೇಷ ಘಳಿಗೆಗೆ ಸಾಕ್ಷಿಯಾಗುತ್ತಿದೆ. ಉಭಯ ತಂಡದ ನಾಯಕರಾದ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮ್ಮಿನ್ಸ್ ಫೈನಲ್​ ಪಂದ್ಯಕ್ಕೆ ಕಣಕ್ಕಿಳಿದ ತಕ್ಷಣ ಅವರ ಹೆಸರಿನಲ್ಲಿ ದೊಡ್ಡ ದಾಖಲೆಯೊಂದು ಸೃಷ್ಟಿಯಾಗಲಿದೆ.

1 / 6
 ಜೂನ್ 7 ರಿಂದ ಜೂನ್ 11 ರ ನಡುವೆ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲ್ಲಿರುವ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ಇಬ್ಬರೂ ತಮ್ಮ ಟೆಸ್ಸ್ ವೃತ್ತಿಜೀವನದ 50 ನೇ ಟೆಸ್ಟ್ ಪಂದ್ಯವನ್ನಾಡಲ್ಲಿದ್ದಾರೆ.

2 / 6
ಇದುವರೆಗೆ ಆಡಿರುವ 49 ಟೆಸ್ಟ್‌ಗಳಲ್ಲಿ ಪ್ಯಾಟ್ ಕಮಿನ್ಸ್ 924 ರನ್ ಬಾರಿಸಿದ್ದು, 217 ವಿಕೆಟ್ ಪಡೆದಿದ್ದಾರೆ.

3 / 6
ಅದೇ ಸಮಯದಲ್ಲಿ, ರೋಹಿತ್ ಶರ್ಮಾ ಅದೇ ಸಂಖ್ಯೆಯ ಟೆಸ್ಟ್ ಪಂದ್ಯಗಳಲ್ಲಿ 3379 ರನ್ ಬಾರಿಸಿದ್ದು, 2 ವಿಕೆಟ್ ಕೂಡ ಪಡೆದಿದ್ದಾರೆ. ರೋಹಿತ್ ಅವರ ಈ 49 ಟೆಸ್ಟ್‌ಗಳಲ್ಲಿ 1 ದ್ವಿಶತಕ, 9 ಶತಕ ಮತ್ತು 14 ಅರ್ಧ ಶತಕಗಳೂ ಸೇರಿವೆ.

4 / 6
ಆದರೆ ನಾಯಕತ್ವದ ವಿಚಾರದಲ್ಲಿ ರೋಹಿತ್‌ಗಿಂತ ಎರಡಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ನಾಯಕತ್ವದ ಅನುಭವವನ್ನು ಕಮ್ಮಿನ್ಸ್ ಹೊಂದಿದ್ದಾರೆ. ರೋಹಿತ್ ಇಲ್ಲಿಯವರೆಗೆ 6 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ರೋಹಿತ್, 1 ಸೋಲು ಹಾಗೂ 1 ಡ್ರಾವನ್ನು ಕಂಡಿದ್ದಾರೆ. ಮತ್ತೊಂದೆಡೆ, ಪ್ಯಾಟ್ ಕಮ್ಮಿನ್ಸ್ ಇದುವರೆಗೆ 15 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದು, ಅದರಲ್ಲಿ 8 ಗೆಲುವು, 3 ಸೋಲು ಮತ್ತು 4 ಡ್ರಾಗಳನ್ನು ಕಂಡಿದ್ದಾರೆ.

5 / 6
ಇನ್ನು ಓವಲ್ ಮೈದಾನದಲ್ಲಿದೆ ಉಭಯ ನಾಯಕರ ದಾಖಲೆಯನ್ನು ನೋಡುವುದಾದರೆ.. ಇಂಗ್ಲೆಂಡ್‌ನ ಈ ನೆಲದಲ್ಲಿ ಕಮ್ಮಿನ್ಸ್ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ ಕೂಡ ಈ ಮೈದಾನದಲ್ಲಿ ವಿದೇಶದಲ್ಲಿ ತಮ್ಮ ಮೊದಲ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಹೀಗಾಗಿ ಈ 50ನೇ ಟೆಸ್ಟ್ ಪಂದ್ಯದಲ್ಲಿ ಯಾರ ಆಟ ಮೇಲುಗೈ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

6 / 6

Published On - 12:37 pm, Sun, 4 June 23

pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ