RR vs SRH: 15ನೇ ವಯಸ್ಸಿನಲ್ಲೇ ಎರಡೆರಡು ವಿಶ್ವದಾಖಲೆ ನಿರ್ಮಿಸಿದ ವೈಭವ್

Updated on: Apr 25, 2026 | 10:21 PM

Vaibhav Suryavanshi Shatters Records: ಐಪಿಎಲ್ 2026 ರ 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದರು. ಅವರು 15 ಎಸೆತಗಳಲ್ಲಿ ಅರ್ಧಶತಕ, ಅತಿ ಕಿರಿಯ ಹಾಗೂ ಕನಿಷ್ಠ ಎಸೆತಗಳಲ್ಲಿ 1000 ಟಿ20 ರನ್ ಪೂರೈಸಿದರು. ಅಲ್ಲದೆ, ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯ ಎಂಬ ದಾಖಲೆಯನ್ನೂ ನಿರ್ಮಿಸಿದರು.

1 / 5
ಐಪಿಎಲ್‌ 2026 ರ 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು. ವೈಭವ್ ಐಪಿಎಲ್‌ನಲ್ಲಿ ಆಡುವ ಪ್ರತಿಯೊಂದು ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ವೈಭವ್ 2 ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ.

2 / 5
ಎಂದಿನಂತೆ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಈ ಆವೃತ್ತಿಯಲ್ಲಿ ಕೇವಲ 15 ಎಸೆತಗಳಲ್ಲಿ ಮೂರನೇ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಹಾಗೆಯೇ ವೈಭವ್ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು.

3 / 5
ಇನ್ನು ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 50 ರನ್​ಗಳ ಗಡಿ ದಾಟುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 1,000 ರನ್ ಸಹ ಪೂರೈಸಿದರು. ಈ ಮೂಲಕ ಟಿ20ಕ್ರಿಕೆಟ್​ನಲ್ಲಿ 1,000 ರನ್ ಪೂರೈಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಭವ್ ಕೇವಲ 15 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ವಿಶ್ವದಾಖಲೆಯನ್ನು ಸೃಷ್ಟಿಸಿದರು.

4 / 5
ವೈಭವ್ ಸೂರ್ಯವಂಶಿ 1,000 ಟಿ20 ರನ್‌ಗಳನ್ನು ಪೂರೈಸಲು ಕೇವಲ 473 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಕೂಡ ವಿಶ್ವ ದಾಖಲೆಯಾಗಿದೆ. ಈ ಹಿಂದೆ, ಯಾವುದೇ ಬ್ಯಾಟ್ಸ್‌ಮನ್ 500 ಕ್ಕಿಂತ ಕಡಿಮೆ ಎಸೆತಗಳಲ್ಲಿ 1,000 ಟಿ20 ರನ್‌ಗಳನ್ನು ಪೂರೈಸಿರಲಿಲ್ಲ. ಇದಕ್ಕೂ ಮೊದಲು, ಮಿಚೆಲ್ ಓವನ್ 533 ಎಸೆತಗಳಲ್ಲಿ 1000 ರನ್ ಪೂರೈಸುವ ಮೂಲಕ ಅಗ್ರಸ್ಥಾನದಲ್ಲಿದ್ದರು. ಇದೀಗ ಆ ದಾಖಲೆ ವೈಭವ್ ಪಾಲಾಗಿದೆ.

5 / 5
ಈ ಶತಕದ ಇನ್ನಿಂಗ್ಸ್‌ನಲ್ಲಿ ವೈಭವ್ ಬರೋಬ್ಬರಿ 12 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ವೈಭವ್ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದ್ದ ಮುರಳಿ ವಿಜಯ್ ಈ ದಾಖಲೆಯನ್ನು ಹೊಂದಿದ್ದರು.

Follow Us