IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯುವರಾಜ್ ಸಿಂಗ್ ಕೋಚ್?

Updated on: Jun 19, 2026 | 8:14 PM

Delhi Capitals Shake-up: ಐಪಿಎಲ್ 2026 ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಅಕ್ಷರ್ ಪಟೇಲ್ ಬದಲು ಕನ್ನಡಿಗ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡುವ ಮತ್ತು ರಿಷಭ್ ಪಂತ್ ಅವರನ್ನು ತಂಡಕ್ಕೆ ಮರಳಿ ಕರೆತರುವ ಮಾತುಕತೆಗಳು ನಡೆಯುತ್ತಿವೆ. ಜೊತೆಗೆ, ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಆಗಿ ಸೇರಲಿದ್ದಾರೆ ಎಂದು ವರದಿಯಾಗಿದೆ. ಈ ನಡೆಗಳು ತಂಡಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.

1 / 5
ಐಪಿಎಲ್‌ನಲ್ಲಿ ಇದುವರೆಗೆ ಒಮ್ಮೆಯೂ ಪ್ರಶಸ್ತಿಯನ್ನು ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿ ಆವೃತ್ತಿಗೂ ಮುನ್ನ ತಂಡವನ್ನು ಬಲಿಷ್ಠಗೊಳಿಸಿ ಕಣಕ್ಕಿಳಿಯುತ್ತದೆ. ಆದರೆ ಟ್ರೋಫಿ ಮಾತ್ರ ತಂಡದ ಕೈಸೇರಿಲ್ಲ. 2026 ರ ಆವೃತ್ತಿಯಲ್ಲಿ ಪ್ಲೇಆಫ್​ಗೂ ಅರ್ಹತೆ ಪಡೆಯದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲು ಶುರುವಾಗಿದೆ (PC-PTI).

2 / 5
ಸಧ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈಗಿರುವ ನಾಯಕ ಅಕ್ಷರ್ ಪಟೇಲ್​ರನ್ನು ಆ ಸ್ಥಾನದಿಂದ ಕೆಳಗಿಳಿಸಿ ಕನ್ನಡಿಗ ಕೆಎಲ್ ರಾಹುಲ್​ಗೆ ತಂಡದ ನಾಯಕತ್ವವಹಿಸುವ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಇದರ ಜೊತೆಗೆ ಲಕ್ನೋ ತಂಡದಲ್ಲಿರುವ ರಿಷಭ್ ಪಂತ್ ಅವರನ್ನು ಮತ್ತೆ ತಂಡಕ್ಕೆ ಕರೆತರುವುದಕ್ಕೆ ತಯಾರಿ ಕೂಡ ಶುರವಾಗಿದೆ ಎನ್ನಲಾಗುತ್ತಿದೆ (PC-PTI).

3 / 5
ಇದೆಲ್ಲದರ ನಡುವೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಸಿಬ್ಬಂದಿಗಳ ಬಳಗಕ್ಕೆ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸೇರಲಿದ್ದಾರೆ ಎಂದು ವರದಿಯಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಸ್ಟಾರ್ ಆಟಗಾರರಿಗೆ ಕೋಚಿಂಗ್ ನೀಡಿ ಯಶಸ್ವಿಯಾಗಿರುವ ಯುವರಾಜ್ ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ (PC-PTI).

4 / 5
ಯುವರಾಜ್ ಸಿಂಗ್ ಈ ಮೊದಲು ಯಾವುದೇ ಐಪಿಎಲ್ ತಂಡದಲ್ಲಿ ಕೋಚ್ ಆಗಿ ಕೆಲಸ ಮಾಡಿಲ್ಲ. ಆದರೆ ಟೀಂ ಇಂಡಿಯಾದ ಯುವ ಆಟಗಾರರಿಗೆ ತರಬೇತಿ ನೀಡುವಲ್ಲಿ ಯುವರಾಜ್​ಗೆ ಸಾಕಷ್ಟು ಅನುಭವವಿದೆ. ಅವರು ಅಭಿಷೇಕ್ ಶರ್ಮಾ ಮತ್ತು ಪ್ರಿಯಾಂಶ್ ಆರ್ಯ ಸೇರಿದಂತೆ ಹಲವಾರು ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ತರಬೇತಿ ನೀಡಿದ್ದಾರೆ. ಈ ಆಟಗಾರರ ಬ್ಯಾಟಿಂಗ್ ಸುಧಾರಿಸುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. (PC-PTI)

5 / 5
ಇನ್ನು ಆಟಗಾರನಾಗಿ ಯುವರಾಜ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು ಆರು ತಂಡಗಳ ಪಡಿ ಆಡಿದ್ದಾರೆ.ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್), ಪುಣೆ ವಾರಿಯರ್ಸ್ ಇಂಡಿಯಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಡೆಲ್ಲಿ ಡೇರ್‌ಡೆವಿಲ್ಸ್ (ಈಗ ದೆಹಲಿ ಕ್ಯಾಪಿಟಲ್ಸ್), ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪರ ಯುವಿ ಬ್ಯಾಟ್ ಬೀಸಿದ್ದರು (PC-PTI).

Loading...
Unable to load recommendations.
Follow Us