
ಬಿಗ್ ಬಾಸ್ ವೇದಿಕೆಗೆ ಬಂದು ‘ಹೆಡ್ ಬುಷ್’ ಸಿನಿಮಾ ಪ್ರಚಾರ ಮಾಡಿದ್ದಾರೆ ನಟ ಡಾಲಿ ಧನಂಜಯ್. ತಮ್ಮ ಸಿನಿಮಾ ಬಗ್ಗೆ ಅವರು ಕಿಚ್ಚ ಸುದೀಪ್ ಎದುರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಬಗ್ಗೆ ಮಾತ್ರವಲ್ಲದೇ, ಡಾಲಿ ಧನಂಜಯ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸುದೀಪ್ ಅವರು ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಡಾಲಿ ನಾಚುತ್ತಲೇ ಉತ್ತರ ನೀಡಿದರು.

ಡಾಲಿ ಧನಂಜಯ್ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್ ಬಾಸ್ ವೇದಿಕೆಯಲ್ಲಿ ಕೇಳಲಾಯ್ತು. ‘ನಾನಿನ್ನೂ ಸಿಂಗಲ್’ ಎಂದರು ಧನಂಜಯ್.

‘ಎಲ್ಲಾ ಕಡೆ ಇದೇ ಪ್ರಶ್ನೆ ಕೇಳ್ತಾರೆ. ಜೀವನ ತುಂಬ ಚೆನ್ನಾಗಿದೆ. ಒಬ್ಬರೇ ಇರುವುದು ಯಾವಾಗಲೂ ಚೆನ್ನಾಗಿ ಇರುತ್ತದೆ’ ಎಂದು ಡಾಲಿ ಹೇಳಿದ ಮಾತು ಕೇಳಿ ಕಿಚ್ಚ ಸುದೀಪ್ ಅವರು ನಕ್ಕಿದ್ದಾರೆ. ಧನಂಜಯ್ ಅಭಿಮಾನಿಗಳು ಈ ಸಂಚಿಕೆ ನೋಡಿ ಎಂಜಾಯ್ ಮಾಡಿದ್ದಾರೆ.

ಧನಂಜಯ್ ಅವರು ನಡೆದು ಬಂದ ಹಾದಿಯನ್ನು ಕಿಚ್ಚ ಸುದೀಪ್ ಹೊಗಳಿದ್ದಾರೆ. ನಟನಾಗಿ ಬಂದು ನಿರ್ಮಾಪಕನಾಗಿ ಬೆಳೆದು ನಿಂತಿರುವ ಅವರ ಸಾಧನೆಗೆ ಚಪ್ಪಾಳೆ ಸಿಕ್ಕಿದೆ. ‘ಹೆಡ್ ಬುಷ್’ ಸಿನಿಮಾ ಅ.21ರಂದು ರಿಲೀಸ್ ಆಗಲಿದೆ.
Published On - 7:54 am, Mon, 17 October 22