- Kannada News Photo gallery Darshan gives 5 out of 5 rating to Bad Manners Kannada movie featuring Abhishek Ambareesh
ಅಭಿಷೇಕ್ ಅಂಬರೀಷ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿ 5ಕ್ಕೆ 5 ಸ್ಟಾರ್ ನೀಡಿದ ದರ್ಶನ್
ಈ ವರ್ಷದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಬ್ಯಾಡ್ ಮ್ಯಾನರ್ಸ್’ ಕೂಡ ಇದೆ. ಈ ಸಿನಿಮಾಗೆ ‘ದುನಿಯಾ’ ಖ್ಯಾತಿಯ ಸೂರಿ ಅವರು ನಿರ್ದೇಶನ ಮಾಡಿದ್ದಾರೆ. ನವೆಂಬರ್ 24ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾ ನೋಡಿರುವ ದರ್ಶನ್ ಅವರು ಸಖತ್ ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
Updated on: Nov 20, 2023 | 3:31 PM

ದರ್ಶನ್ ಮತ್ತು ಅಭಿಷೇಕ್ ಅಂಬರೀಷ್ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಅಭಿಷೇಕ್ ಅವರನ್ನು ಸಹೋದರ ಎಂದೇ ಪರಿಗಣಿಸಿದ್ದಾರೆ ದರ್ಶನ್. ಅಭಿಷೇಕ್ ಅಂಬರೀಷ್ ನಟಿಸಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾವನ್ನು ವೀಕ್ಷಿಸಿದ ದರ್ಶನ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಸುಮಲತಾ ಅಂಬರೀಷ್, ದರ್ಶನ್, ನಿರ್ದೇಶಕ ಸೂರಿ, ಅಭಿಷೇಕ್ ಅವರು ಖಾಸಗಿಯಾಗಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ್ದಾರೆ. ಈ ಚಿತ್ರವು ದರ್ಶನ್ ಅವರಿಗೆ ಬಹಳ ಮೆಚ್ಚುಗೆ ಆಗಿದೆ. ಹಾಗಾಗಿ ಅಭಿಷೇಕ್ ಅಂಬರೀಷ್ ಶರ್ಟ್ ಮೇಲೆ ದರ್ಶನ್ ಸಹಿ ಮಾಡಿ ಶುಭಾಶಯ ಕೋರಿದ್ದಾರೆ.

‘ತುಂಬಾ ಚೆನ್ನಾಗಿದೆ. 5ಕ್ಕೆ 5 ಸ್ಟಾರ್’ ಎಂದು ದರ್ಶನ್ ಅವರು ಬರೆದಿದ್ದಾರೆ. ಅವರಿಂದ ಈ ಪರಿ ಮೆಚ್ಚುಗೆ ಸಿಕ್ಕಿರುವುದು ಇಡೀ ತಂಡಕ್ಕೆ ಖುಷಿ ನೀಡಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ಅವರು ಆ್ಯಕ್ಷನ್ ಅವತಾರ ತಾಳಿದ್ದಾರೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾದಿದ್ದಾರೆ.

ಕೆಲವೇ ದಿನಗಳ ಹಿಂದೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ದರ್ಶನ್ ಅವರು ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡದ ಬೆನ್ನು ತಟ್ಟಿದ್ದರು.

ಮಾಸ್ ಸಿನಿಮಾಗಳ ಮೂಲಕ ಹೆಸರು ಮಾಡಿರುವ ನಿರ್ದೇಶಕ ಸೂರಿ ಅವರು ‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಆ ಕಾರಣದಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ.

‘ಬ್ಯಾಡ್ ಮ್ಯಾನರ್ಸ್’ ಸಿನಿಮಾಗೆ ಸುಧೀರ್ ಕೆ.ಎಂ. ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಅಭಿಷೇಕ್ ಅಂಬರೀಷ್ ನಟಿಸಿರುವ ಎರಡನೇ ಸಿನಿಮಾ. ಮೊದಲ ಚಿತ್ರಕ್ಕೂ ಈ ಸಿನಿಮಾಗೂ ಬಹಳ ವ್ಯತ್ಯಾಸ ಇದೆ. ಹಾಗಾಗಿ ನಿರೀಕ್ಷೆ ಮೂಡಿದೆ.









