ದರ್ಶನ್ ಅಂಥಹಾ ವ್ಯಕ್ತಿಯ ನೋಡಿಯೇ ಇಲ್ಲ ಎಂದ ರಚನಾ: ಚಿತ್ರಗಳಲ್ಲಿ ನೋಡಿ ನಟಿಯ ಅಂದ

Updated on: Oct 13, 2025 | 1:41 PM

Darshan Thoogudeepa: ‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ಎದುರು ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ಇದೀಗ ನಟಿ ರಚನಾ ರೈ ತಮ್ಮ ಸಹ ನಟ ದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಲ್ಲಿವೆ ನಟಿ ರಚಿನಾ ರೈ ಅವರ ಚಿತ್ರಗಳು.

1 / 7
ದರ್ಶನ್ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರು ‘ಡೆವಿಲ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದೆ.

ದರ್ಶನ್ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರು ‘ಡೆವಿಲ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದೆ.

2 / 7

‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ಎದುರು ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ಇದೀಗ ನಟಿ ರಚನಾ ರೈ ತಮ್ಮ ಸಹ ನಟ ದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

3 / 7

‘ನಿಮ್ಮಂಥಹಾ ಸ್ಟಾರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಸೆಟ್‌ನಲ್ಲಿ ನಿಮ್ಮ ಏಕಾಗ್ರತೆ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಆ ಪ್ರಕ್ರಿಯೆಗಳನ್ನು ಪ್ರತಿದಿನವೂ ಸೆಟ್​​ನಲ್ಲಿ ನೋಡುವುದು ನನಗೆ ಒಂದು ಅದ್ಭುತ ಪಾಠವಾಯ್ತು’ ಎಂದಿದ್ದಾರೆ ರಚನಾ.

4 / 7

‘ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದಿದ್ದಾರೆ ರಚನಾ ರೈ.

5 / 7

‘ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಪ್ರೀತಿ, ಆಪ್ತತೆ, ದಯೆ ನಿಮ್ಮ ವ್ಯಕ್ತಿತ್ವದ ದೊಡ್ಡ ಛಾಪು ಇತರರಲ್ಲಿ ಮೂಡಿಸುತ್ತದೆ. ನಾನು ಭೇಟಿ ಆಗಿರುವ ಅದ್ಭುತ ವ್ಯಕ್ತಿಗಳಲ್ಲಿ ನೀವೂ ಒಬ್ಬರು ಎಂದಿದ್ದಾರೆ ರಚನಾ ರೈ.

6 / 7

ರಚನಾ ರೈ ಮಂಗಳೂರಿನ ಚೆಲುವೆ. ರೂಪೇಶ್ ಶೆಟ್ಟಿ ನಟನೆಯ ‘ಸರ್ಕಸ್’ ಹೆಸರಿನ ತುಳು ಸಿನಿಮಾನಲ್ಲಿ ಈಗಾಗಲೇ ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ‘ವಾಮನ’ ಸಿನಿಮಾನಲ್ಲಿಯೂ ನಟಿಸಿದ್ದಾರೆ.

7 / 7

ಈಗ ದರ್ಶನ್ ಅವರು ಜೈಲಿನಲ್ಲಿರುವ ಕಾರಣ, ಸಿನಿಮಾದ ಪ್ರಚಾರ ಜವಾಬ್ದಾರಿಯನ್ನು ರಚನಾ ರೈ ಅವರೇ ಹೊರಬೇಕಾದ ಪರಿಸ್ಥಿತಿ ಇದೆ. ಧನ್ವೀರ್ ಸೇರಿದಂತೆ ದರ್ಶನ್ ಅವರ ಕೆಲವು ಗೆಳೆಯರು ಸಹ ಕೈ ಜೋಡಿಸಲಿದ್ದಾರೆ.

Published On - 1:35 pm, Mon, 13 October 25

Loading...
Unable to load recommendations.
Follow Us