Updated on:Oct 18, 2022 | 7:02 PM
ಮಹೇಶ್ ಬಾಬು ಹಾಗೂ ಎಸ್.ಎಸ್. ರಾಜಮೌಳಿ ಅವರು ಹೊಸ ಚಿತ್ರಕ್ಕಾಗಿ ಒಂದಾಗುತ್ತಿರುವುದು ಗೊತ್ತೇ ಇದೆ. ಈಗ ಈ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ರಾಜಮೌಳಿ ಅವರು ಪ್ರತಿ ಚಿತ್ರಕ್ಕಾಗಿ ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಳ್ಳುತ್ತಾರೆ. ಮಹೇಶ್ ಬಾಬು ಅವರ 29ನೇ ಸಿನಿಮಾ ಇದಾಗಿದ್ದು, ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈಗಾಗಲೇ ರಾಜಮೌಳಿ ಅವರು ದೀಪಿಕಾ ಅವರನ್ನು ಅಪ್ರೋಚ್ ಮಾಡಿದ್ದಾರಂತೆ.
ದೀಪಿಕಾ ಬಣ್ಣದ ಬದುಕು ಆರಂಭಿಸಿದ್ದು ಕನ್ನಡದಿಂದ. ನಂತರ ಅವರು ಬಾಲಿವುಡ್ನಲ್ಲಿ ಮಿಂಚಿದರು. ದಕ್ಷಿಣದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಟಾಲಿವುಡ್ನ ಅನೇಕ ಸಿನಿಮಾಗಳಿಗೆ ಹಿಂದಿ ನಾಯಕಿಯರು ಎಂಟ್ರಿ ಕೊಡುತ್ತಿದ್ದಾರೆ. ‘ಆರ್ಆರ್ಆರ್’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ ಆಗಿದ್ದರು. ಈಗ ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ದೀಪಿಕಾರನ್ನು ಕರೆ ತಂದಿದ್ದಾರೆ.
Published On - 5:01 pm, Tue, 18 October 22