Samantha: ವಿಜಯ್​ ದೇವರಕೊಂಡಗೆ ತಲೆ ಬಿಸಿ ತಂದ ಸಮಂತಾ ರುತ್​ ಪ್ರಭು ಡೇಟ್ಸ್​

Vijay Deverakonda | Samantha Ruth Prabhu: ‘ಖುಷಿ’ ಚಿತ್ರಕ್ಕೆ ಕಾಶ್ಮೀರದಲ್ಲಿ ಒಂದು ಹಂತದ ಶೂಟಿಂಗ್​ ಮುಗಿಸಲಾಗಿತ್ತು. ಆದರೆ ಮುಂದಿನ ಹಂತದ ಚಿತ್ರೀಕರಣಕ್ಕೆ ಸಮಂತಾ ಹಾಜರಾಗಿಲ್ಲ ಎನ್ನಲಾಗಿದೆ.ವಿಜಯ್​ ದೇವರಕೊಂಡಗೆ ತಲೆ ಬಿಸಿ ತಂದ ಸಮಂತಾ ರುತ್​ ಪ್ರಭು ಡೇಟ್ಸ್​

TV9 Web
| Updated By: ಮದನ್​ ಕುಮಾರ್​

Updated on:Oct 18, 2022 | 2:14 PM

ನಟಿ ಸಮಂತಾ ರುತ್​ ಪ್ರಭು ಹಾಗೂ ನಟ ವಿಜಯ್​ ದೇವರಕೊಂಡ ಅವರು ಜೊತೆಯಾಗಿ ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

Dates problem for Vijay Devarakonda starrer Kushi movie due to Samantha illness

1 / 5
ಈಗಾಗಲೇ ‘ಖುಷಿ’ ಚಿತ್ರಕ್ಕೆ ಕಾಶ್ಮೀರದಲ್ಲಿ ಒಂದು ಹಂತದ ಶೂಟಿಂಗ್​ ಮುಗಿಸಲಾಗಿತ್ತು. ಆದರೆ ಮುಂದಿನ ಹಂತದ ಚಿತ್ರೀಕರಣಕ್ಕೆ ಸಮಂತಾ ಹಾಜರಾಗಿಲ್ಲ ಎನ್ನಲಾಗಿದೆ. ಇದರಿಂದ ಚಿತ್ರತಂಡಕ್ಕೆ ಸಮಸ್ಯೆ ಆಗಿತ್ತು.

Dates problem for Vijay Devarakonda starrer Kushi movie due to Samantha illness

2 / 5
ಮೂಲಗಳ ಪ್ರಕಾರ ಸಮಂತಾ ಅವರಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ಸೂಕ್ತ ಚಿಕಿತ್ಸೆ ಪಡೆಯಲು ಅವರು ವಿದೇಶಕ್ಕೆ ತೆರಳಿದ್ದರು. ಹಾಗಾಗಿ ಅವರು ಮೊದಲೇ ಹೇಳಿದ ದಿನಾಂಕದಲ್ಲಿ ‘ಖುಷಿ’ ಚಿತ್ರದ ಶೂಟಿಂಗ್​ಗೆ ಹಾಜರಾಗಲಿಲ್ಲ.

3 / 5
ಸಮಂತಾ ಅವರು ಸರಿಯಾಗಿ ಡೇಟ್ಸ್​ ನೀಡದ ಕಾರಣ ವಿಜಯ್​ ದೇವರಕೊಂಡ ಅವರಿಗೆ ತಲೆಬಿಸಿ ಆಗಿತ್ತು. ಆದರೆ ವಿದೇಶದಿಂದ ಮರಳಿದ ಬಳಿಕ ಎಷ್ಟು ಬೇಕಾದರೂ ಡೇಟ್ಸ್​ ನೀಡುವುದಾಗಿ ಸಮಂತಾ ತಿಳಿಸಿದ್ದಾರೆ ಎನ್ನಲಾಗಿದೆ.

4 / 5
ಈ ಹಿಂದೆ ‘ಮಹಾನಟಿ’ ಚಿತ್ರದಲ್ಲೂ ಸಮಂತಾ ಮತ್ತು ವಿಜಯ್​ ದೇವರಕೊಂಡ ಜೊತೆಯಾಗಿ ನಟಿಸಿದ್ದರು. ಈಗ ಅವರು ‘ಖುಷಿ’ ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಶಿವ ನಿರ್ವಾಣ ನಿರ್ದೇಶನ ಮಾಡುತ್ತಿದ್ದಾರೆ.

5 / 5

Published On - 2:14 pm, Tue, 18 October 22

Follow us