- Kannada News Photo gallery Kannada News | Desi Kalarava in Davanagere College, Sree-panches that sparkled on Yatnik Day, here are the photos
Davanagere: ಕಾಲೇಜಿನಲ್ಲಿ ದೇಶಿ ಕಲರವ; ಯತ್ನಿಕ್ ಡೇನಲ್ಲಿ ಮಿಂಚಿದ ಸೀರೆ-ಪಂಚೆಗಳು, ಇಲ್ಲಿವೆ ಫೋಟೋಸ್
ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ಹಿರಿಯರು ಆಗಲಿ, ಯುವಕರಾಗಲಿ, ಈ ರೋಡ್ ಹೆಸರು ಹೇಳಿದ್ರು, ಸಾಕು ಮುಖ ಹಾಗೆ ಅರಳುತ್ತದೆ. ಕಾರಣ ಇಲ್ಲಿರುವ ಮಹಿಳಾ ಕಾಲೇಜಿನಲ್ಲಿಂದು ಯತ್ನಿಕ್ ಡೇ ಹಮ್ಮಿಕೊಳ್ಳಲಾಗಿದ್ದು, ಕಾಲೇಜು ಕನ್ಯೆಯರ ದೇಶಿ ಕಲರವ ಇಲ್ಲಿದೆ ನೋಡಿ.
Updated on: May 28, 2023 | 12:39 PM

ಇಲ್ಲಿ ಮನಸ್ಸಿಗೆ ಬಂದಂತೆ ನಾ ಮುಂದು ತಾಮುಂದು ಎಂದು ಓಡಾಡುತ್ತಿರುವ ಯುವತಿಯರು. ಅಲ್ಲಿ ಇಲ್ಲಿ ಸೇಲ್ಫಿಗೆ ಲೈನ್. ಮರಕ್ಕೆ ಹೊಂದಿಕೊಂಡು ಪೋಸ್ ಕೊಡುವ ಇನ್ನೊಂದಿಷ್ಟು ಜನ. ಫಳ ಫಳ ಹೊಳೆಯುವ ಬಿಳಿ ಪಂಜೆ ಶರ್ಟ್ ಹಾಗೂ ಪೇಟೆದಲ್ಲಿ ಮಿಂಚುತ್ತಿರುವ ಶಿಕ್ಷಕ ವರ್ಗ.

ಇತ್ತ ಮಹಿಳಾ ಮಣಿಗಳು ವೀರ ಮಹಿಳೆಯ ವೇಷದಲ್ಲಿ ಮೂಗಿಗಿಂತ ದೊಡ್ಡ ನತ್ತು ಹಾಕಿಕೊಂಡು ಸಂಭ್ರಮಿಸುತ್ತಿದ್ದರು. ಇದನ್ನೆಲ್ಲ ನೋಡಿದರೇ ಇಲ್ಲೊಂದು ಹೊಸ ಲೋಕವೇ ಸೃಷ್ಠಿಯಾಗಿತ್ತು.

ನಾವು ಹೇಳುತ್ತಿರುವುದು ದಾವಣಗೆರೆ ಎವಿಕೆ ಕಾಲೇಜ್ನಲ್ಲಿ ನಡೆದ ಯತ್ನಿಕ್ ಡೇ ಬಗ್ಗೆ. ಎವಿಕೆ ಕಾಲೇಜ್ ಅಂದ್ರೆ, ಸ್ಮಾರ್ಟ ಸಿಟಿ ದಾವಣಗೆರೆಯಲ್ಲಿ ಪ್ರಸಿದ್ಧ ಪಡೆದ ಕಾಲೇಜು.

ಹೇಳಿ ಕೇಳಿ ಇದು ಮಹಿಳಾ ಕಾಲೇಜ್. ಡಿಜಿಪಿ ಡಿ.ರೂಪಾ ಸೇರಿದಂತೆ ಸಾವಿರಾರು ಪ್ರಸಿದ್ಧ ಮಹಿಳೆಯರು ಓದಿದ್ದು ಇದೇ ಕಾಲೇಜ್ನಲ್ಲಿ. ಇಂತಹ ಕಾಲೇಜ್ನಲ್ಲಿ ನಿನ್ನೆ(ಮೇ.27) ಸಂಭ್ರಮ ಮನೆ ಮಾಡಿತ್ತು.

ದೇಶಿಯ ಪರಂಪರೆ ಬಿಂಬಿಸುವ ವೇಷದಲ್ಲಿ ವಿದ್ಯಾರ್ಥಿನಿಯರು, ಅಧ್ಯಾಪಕರು ಮಿಂಚಿದ್ದು, ಈ ದಿನ ವಿಶೇಷ ಡ್ರೇಸ್ ಹಾಕಿ ಮಕ್ಕಳೊಂದಿಗೆ ಮಕ್ಕಳಾಗಿದ್ದರು.

ಹೆಚ್ಚಾಗಿ ಮೂಗುತಿ ಸುಂದರಿಯರೇ ಕಂಡ್ರು. ಜೊತೆಗೆ ಕೆಲ ಹುಡುಗಿಯರಂತು ಪಂಚೆಯಲ್ಲಿ ಕಾಲೇಜ್ ಗೆ ಬಂದು ಗಮನ ಸೆಳೆದರು.

ಬಾವಿ, ಜೋಕಾಲಿ, ಗುಡಿಸಲು ಹೀಗೆ ಇಡಿ ನಮ್ಮ ದೇಶಿಯ ಪರಂಪರೆ ಪ್ರತಿಬಿಂಬಿಸುವ ಪ್ರಯತ್ನ ಇಲ್ಲಿ ನಡೆದಿತ್ತು. ಒಂದು ಕಡೆ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಸಜ್ಜಾದ ಸನ್ನಿವೇಷಗಳು. ಇನ್ನೊಂದು ಟಪಾಂಗ್ ಗುಚ್ಚಿ ನೃತ್ಯ.ಯುವತಿಯರು ಹಿಂಡು ಹಿಂಡಾಗಿ ಸೇಲ್ಫಿಗೆ ಮುಗಿ ಬಿದ್ದರೇ ಮುಖಕ್ಕೆ ಒಪ್ಪುವಂತಹ ಕನ್ನಡಕ ಹಾಕಿಕೊಂಡು ನಗುತ್ತಿದ್ದರೇ, ಅಂತವರಿಗೆ ಆ ನಗುವೇ ಭೂಷಣ ಆಗಿತ್ತು.

ಬಾವಿ, ಜೋಕಾಲಿ, ಗುಡಿಸಲು ಹೀಗೆ ಇಡಿ ನಮ್ಮ ದೇಶಿಯ ಪರಂಪರೆ ಪ್ರತಿಬಿಂಬಿಸುವ ಪ್ರಯತ್ನ ಇಲ್ಲಿ ನಡೆದಿತ್ತು. ಒಂದು ಕಡೆ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಸಜ್ಜಾದ ಸನ್ನಿವೇಷಗಳು. ಇನ್ನೊಂದು ಟಪಾಂಗ್ ಗುಚ್ಚಿ ನೃತ್ಯ.

ಯುವತಿಯರು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹಾಡುಗಳನ್ನ ಹಾಡುತ್ತಾ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದರು. ಕೇರಳ ಸ್ಟೈಲ್ ಪಂಚೆ ಹಾಕಿಕೊಂಡು ಕೆಲ ಕನ್ಯೆಯರು ಜೀನ್ಸ್ , ಚೂಡಿಗಳ ಬಿಟ್ಟು ಅಪ್ಪಟ ದೇಶಿ ಸ್ಟೈಲ್ ನಲ್ಲಿ ಮಿಂಚುತ್ತಿದ್ದರು.

ಹೀಗೆ ಸಂಭ್ರಮ ಒಂದಿಷ್ಟು ಜಾಸ್ತಿನೇ ಇತ್ತು ಅಂದ್ರೆ, ತಪ್ಪಾಗಲಿಕ್ಕಿಲ್ಲ. ಕಾಲೇಜ್ ಹುಡುಗಿಯರು ಮಾತ್ರವಲ್ಲ ಇಲ್ಲಿ ಕಾಲೇಜ್ ಸಿಬ್ಬಂದಿ ಸಹ ಇದೇ ವಿಶೇಷ ದೇಶಿ ವೇಷದಲ್ಲಿ ಬಂದು ಗಮನ ಸೆಳೆದರು. ಹೀಗಾಗಿ ಇಡೀ ಕಾಲೇಜು ಅಂಗಳದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.



















