Updated on: Jan 15, 2021 | 4:54 PM
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವೇದಾಂತ್ ಪಾತ್ರದಲ್ಲಿ ನಟಿಸುತ್ತಿರುವ ರಕ್ಷಿತ್ ಗೌಡ ಅಥವಾ ರಕ್ಷ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದರೆ, ಅವರ ಖಾಸಗಿ ಬದುಕಿನ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಆ ಬಗ್ಗೆ ಇಲ್ಲಿದೆ ವಿವರ.
ಗಟ್ಟಿಮೇಳದ ನಟ ರಕ್ಷ್ ಈ ಮೊದಲು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ನರಗುಂದ ಬಂಡಾಯ ಹೆಸರಿನ ಚಿತ್ರದಲ್ಲೂ ಇವರು ನಟಿಸಿದ್ದಾರೆ. ವಯಸ್ಸು 28. ಬಿಇ, ಎಲ್ಎಲ್ಬಿ ಓದಿರುವ ಅವರು ನಂತರ ನಟನೆಗೆ ಕಾಲಿಟ್ಟರು.
ತುಂಬಾನೇ ಬೇಡಿಕೆ ಹೊಂದಿರುವ ಇವರು, ಒಂದು ಎಪಿಸೋಡ್ಗೆ ಬರೋಬ್ಬರಿ 28 ಸಾವಿರ ರೂಪಾಯಿ ಪಡೆಯುತ್ತಾರೆ ಎನ್ನುತ್ತಿವೆ ಮೂಲಗಳು. ಕೆಲ ವರ್ಷಗಳ ಹಿಂದೆ ಇವರು ಆಡಿ ಎ-5 ಕಾರು ಖರೀದಿಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ರಕ್ಷ್ಗೆ ಈಗಾಗಲೇ ವಿವಾಹವಾಗಿದೆ. ತಮ್ಮ ಬಹುಕಾಲದ ಗೆಳತಿ ಅನುಷಾ ಜೊತೆ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನು, ರಕ್ಷ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಫ್ಯಾನ್ಸ್ ಬಳಗವೇ ಇದೆ. ಸಾಕಷ್ಟು ಜನರು ಇವರ ನಟನೆ ನೋಡಿ ಮೆಚ್ಚಿಕೊಂಡಿದ್ದಾರೆ.