ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ‘ದ ಜಡ್ಜ್ಮೆಂಟ್’ ಸಿನಿಮಾ ಪ್ರಚಾರ ಮಾಡಿದ ಧನ್ಯಾ ರಾಮ್ಕುಮಾರ್
ಪ್ರೆಸಿಡೆನ್ಸಿ ಫೌಂಡೇಷನ್ನ ಚೇರ್ಪರ್ಸನ್ ಆದಂತಹ ಶ್ರೀಮತಿ ಕೌಸರ್ ನಿಸಾರ್ ಅಹ್ಮದ್ ಅವರ ಜೊತೆ ಧನ್ಯಾ ರಾಮ್ಕುಮಾರ್ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು. ಇದೇ ವೇದಿಕೆಯಲ್ಲಿ ‘ದ ಜಡ್ಜ್ಮೆಂಟ್’ ಸಿನಿಮಾದ ಪ್ರಚಾರವನ್ನೂ ಅವರು ಮಾಡಿದರು. ಆ ಕ್ಷಣದ ಫೋಟೋಸ್ ಇಲ್ಲಿವೆ...
Updated on: May 24, 2024 | 9:48 PM

ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೂರನೇ ಸಿನಿಮಾ ‘ದ ಜಡ್ಜ್ಮೆಂಟ್’ ಬಿಡುಗಡೆ ಆಗಿದೆ.

ಧನ್ಯಾ ರಾಮ್ಕುಮಾರ್ ನಟನೆಯ ಮೂರನೇ ಸಿನಿಮಾ ‘ದ ಜಡ್ಜ್ಮೆಂಟ್’. ಹಾಗಾಗಿ ಇದು ಅವರ ಪಾಲಿಗೆ ಸ್ಪೆಷಲ್ ಪ್ರಾಜೆಕ್ಟ್. ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 24ರಂದು ಈ ಸಿನಿಮಾ ತೆರೆಕಂಡಿದ್ದು, ಉತ್ಸಾಹದಿಂದ ಪ್ರಚಾರ ಮಾಡಲಾಗಿದೆ.

‘ದ ಜಡ್ಜ್ಮೆಂಟ್’ ಸಿನಿಮಾದ ಪ್ರಚಾರದಲ್ಲಿ ನಟಿ ಧನ್ಯಾ ರಾಮ್ಕುಮಾರ್ ಅವರು ಆ್ಯಕ್ಟೀವ್ ಆಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಧನ್ಯಾ ರಾಮ್ಕುಮಾರ್ ಪ್ರಚಾರ ಮಾಡಿದ್ದಾರೆ. ಆ ಫೋಟೋಗಳಿವು.

ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಾರ್ಷಿಕ ಸಮಾರಂಭವಾದ ‘Invincia 2024’ ಉದ್ಘಾಟಿಸಿದ್ದಾರೆ ಧನ್ಯಾ ರಾಮ್ಕುಮಾರ್. ಈ ವೇದಿಕೆಯಲ್ಲಿ ನಿಂತಾಗ ಧನ್ಯಾ ಅವರು ನೆನಪಿನ ಅಂಗಳಕ್ಕೆ ಜಾರಿದರು. ಯಾಕೆಂದರೆ ಅವರು ಓದಿದ್ದು ಆರ್ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ.

ಪ್ರೆಸಿಡೆನ್ಸಿ ಶಾಲೆಯಲ್ಲಿ ಓದಿದ ಧನ್ಯಾ ರಾಮ್ಕುಮಾರ್ ಅವರು ಈಗ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವೇದಿಕೆಯಲ್ಲಿ ಅಥಿತಿಯಾಗಿ ನಿಂತಿದ್ದಾರೆ. ಹಾಗಾಗಿ ಅವರಿಗೆ ಜೀವನದಲ್ಲಿ ಒಂದು ಪೂರ್ಣ ಅನುಭವ ಆದಂತೆ ಆಗಿದೆ. ಇದು ಅವರ ಪಾಲಿನ ಅಪರೂಪದ ಕ್ಷಣವಾಗಿತ್ತು.

ಪ್ರೆಸಿಡೆನ್ಸಿ ಫೌಂಡೇಷನ್ನ ಚೇರ್ಪರ್ಸನ್ ಆದಂತಹ ಶ್ರೀಮತಿ ಕೌಸರ್ ನಿಸಾರ್ ಅಹ್ಮದ್ ಅವರ ಜೊತೆ ಧನ್ಯಾ ರಾಮ್ಕುಮಾರ್ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು.

ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನ ಹಸಿರು ವಾತಾವರಣವನ್ನು ನೋಡಿ ಧನ್ಯಾ ರಾಮ್ಕುಮಾರ್ ಅವರು ಇಂಪ್ರೆಸ್ ಆಗಿದ್ದಾರೆ. ಅಲ್ಲದೇ ಅವರು ತಮ್ಮ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಂಡರು. ಸದ್ಯಕ್ಕೆ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮೇ 24ರಂದು ‘ದ ಜಡ್ಜ್ಮೆಂಟ್’ ರಿಲೀಸ್ ಆಗಿದೆ.
























