- Kannada News Photo gallery Diverse Dog Breeds at Bagalkote Horticulture Fair, Karnataka news in kannada
ಬಾಗಲಕೋಟೆಯಲ್ಲಿ ಶ್ವಾನ ಪ್ರದರ್ಶನ: ವಿವಿಧ ತಳಿಯ ಬೌ ಬೌ ನೋಡಿ ಜನರು ಫುಲ್ ಖುಷ್
ಬಾಗಲಕೋಟೆಯ ತೋಟಗಾರಿಕಾ ಮೇಳವು ವಿವಿಧ ತಳಿಯ ನಾಯಿಗಳ ಪ್ರದರ್ಶನ ನಡೆಯಿತು. ದೇಶಿ ಮುಧೋಳ ನಾಯಿ ಸೇರಿದಂತೆ ಡಾಬರ್ಮನ್, ಪೂಡಲ್, ಬಿಚ್ವಾನ್ ಮುಂತಾದ ವಿದೇಶಿ ತಳಿಯ ನಾಯಿಗಳು ಪ್ರದರ್ಶನಗೊಂಡವು. ಲಕ್ಷಾಂತರ ರೂಪಾಯಿ ಬೆಲೆಯ ನಾಯಿಗಳನ್ನು ಕಂಡು ಜನರು ಖುಷಿಪಟ್ಟರು. ಪಶು ಇಲಾಖೆಯ ಸಹಯೋಗದೊಂದಿಗೆ ಈ ಪ್ರದರ್ಶನ ಆಯೋಜಿಸಲಾಗಿತ್ತು.
Updated on: Dec 22, 2024 | 4:26 PM

ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಪಶು ಇಲಾಖೆ ಸಹಯೋಗದಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ದೇಶಿ ತಳಿ ಮುಧೋಳ ಶ್ವಾನ ಸೇರಿದಂತೆ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಮಾಡಲಾಗಿದೆ.

ಡಾಬರ್‌ಮನ್, ಪಂಜಾಬಿ ಗ್ರೆ ಹೌಂಡ್, ಸೈಬೀರಿಯನ್ ಹಸ್ಕಿ, ಶಿಹ್ ತ್ಸು, ಜರ್ಮನ್ ಶೆಪರ್ಡ್, ಬೀಗಲ್, ಲಾಸಾ ಅಪ್ಸೊ, ಪೂಡಲ್, ಬಿಚ್ವಾನ್, ಲ್ಯಾಬ್ರಡಾರ್, ಗೋಲ್ಡನ್ ರೆಟ್ರಿವರ್, ಪೊಮೊರೇನಿಯನ್ ಸೇರಿದಂತೆ ದೇಶಿ ವಿದೇಶಿ ತಳಿಯ ಶ್ವಾನಗಳನ್ನು ಜನರು ಒಂದೇ ಕಡೆ ನೋಡಿ ಖುಷಿಪಟ್ಟರು.

ಶ್ವಾನ ಪ್ರದರ್ಶನದಲ್ಲಿ ಬೇಟೆ ನಾಯಿ ಮುಧೋಳ ಶ್ವಾನ ಸೇರಿದಂತೆ ಎಲ್ಲಾ ಶ್ವಾನಗಳು ನೋಡುಗರ ಗಮನ ಸೆಳೆದವು.

ಶ್ವಾನಗಳನ್ನು ನೋಡಿ ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ಮತ್ತು ರೈತರು ಸಂಭ್ರಮಿಸಿದ್ದಾರೆ. ಅದರಲ್ಲೂ ಅಮೇರಿಕ ದೇಶ ಕಂದು ಬಣ್ಣದ ಪೂಡಲ್ ತಳಿಯ ಶ್ವಾನ ಎಲ್ಲರನ್ನು ತನ್ನತ್ತ ಸೆಳೆಯಿತು. ಒಂದು ಮರಿಗೆ 50-601 ಲಕ್ಷ ರೂ. ಬೆಲೆ ಹೊಂದಿದೆ.

ಇನ್ನು ಅದೇ ರೀತಿಯಾಗಿ ಫ್ರಾನ್ಸ್ ಮೂಲದ ಬಿಚ್ವಾನ್ ಶ್ವಾನ ಎಲ್ಲರನ್ನು ಆಕರ್ಷಿಸಿತು.




