ಬಾಗಲಕೋಟೆಯಲ್ಲಿ ಶ್ವಾನ ಪ್ರದರ್ಶನ: ವಿವಿಧ ತಳಿಯ ಬೌ ಬೌ ನೋಡಿ ಜನರು ಫುಲ್ ಖುಷ್
ಬಾಗಲಕೋಟೆಯ ತೋಟಗಾರಿಕಾ ಮೇಳವು ವಿವಿಧ ತಳಿಯ ನಾಯಿಗಳ ಪ್ರದರ್ಶನ ನಡೆಯಿತು. ದೇಶಿ ಮುಧೋಳ ನಾಯಿ ಸೇರಿದಂತೆ ಡಾಬರ್ಮನ್, ಪೂಡಲ್, ಬಿಚ್ವಾನ್ ಮುಂತಾದ ವಿದೇಶಿ ತಳಿಯ ನಾಯಿಗಳು ಪ್ರದರ್ಶನಗೊಂಡವು. ಲಕ್ಷಾಂತರ ರೂಪಾಯಿ ಬೆಲೆಯ ನಾಯಿಗಳನ್ನು ಕಂಡು ಜನರು ಖುಷಿಪಟ್ಟರು. ಪಶು ಇಲಾಖೆಯ ಸಹಯೋಗದೊಂದಿಗೆ ಈ ಪ್ರದರ್ಶನ ಆಯೋಜಿಸಲಾಗಿತ್ತು.