
‘ಕೆಜಿಎಫ್’ ಸರಣಿ ಸಿನಿಮಾ ಮೂಲಕ ನಟಿ ಅರ್ಚನಾ ಜೋಯಿಸ್ ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿತು. ರಾಕಿ ಭಾಯ್ ತಾಯಿಯ ಪಾತ್ರ ಮಾಡುವ ಮೂಲಕ ಅವರು ಮನೆಮಾತಾದರು.

ದೀಪಾವಳಿ ಹಬ್ಬದ ಪ್ರಯುಕ್ತ ಅರ್ಚನಾ ಜೋಯಿಸ್ ಅವರು ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಬೆಳಕಿನ ಹಬ್ಬಕ್ಕಾಗಿ ಝಗಮಗಿಸುವ ಥೀಮ್ನಲ್ಲಿ ಅವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ನಾಗರಾಜ್ ಸೋಮಯಾಜಿ ಅವರ ಕಾನ್ಸೆಪ್ಟ್ನಲ್ಲಿ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಅರ್ಚನಾ ಜೋಯಿಸ್ ಅವರಿಗೆ ಯೋಗಿತಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ರೇಣುಕಾ ಅವರು ಕೇಶ ವಿನ್ಯಾಸ ಮತ್ತು ಮೇಕಪ್ ಮಾಡಿದ್ದಾರೆ.

‘ಪಟಾಕಿ ಹೊಡೆಯೋ ಅಭ್ಯಾಸ ಹೊರಟು ಹೋಗಿದೆ. ದೀಪಗಳ ಮೂಲಕವೇ ದೀಪಾವಳಿ ಸೆಲೆಬ್ರೇಟ್ ಮಾಡುತ್ತಿದ್ದೇವೆ. ನನಗೆ ಈ ವರ್ಷದ ದೀಪಾವಳಿ ಹಬ್ಬ ತುಂಬಾ ವಿಶೇಷ’ ಎಂದು ಅರ್ಚನಾ ಜೋಯಿಸ್ ಹೇಳಿದ್ದಾರೆ.

ಅರ್ಚನಾ ಜೋಯಿಸ್ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್ಗಳಿವೆ. ಅವರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ನವೆಂಬರ್ 18ರಂದು ರಿಲೀಸ್ ಆಗುತ್ತಿದ್ದು. ‘ಕ್ಷೇತ್ರಪಾಲ’ ಸಿನಿಮಾ ಕೂಡ ಬಿಡುಗಡೆಗೆ ಹತ್ತಿರವಾಗಿದೆ.