Updated on:Aug 27, 2022 | 2:01 PM
Gauri Ganesha festival
ನೇರಳೆ ಬಣ್ಣ: ಈ ಬಣ್ಣದ ಬಳೆಯನ್ನು ಧರಿಸಿದರೆ ನಿಮಗೆ ಒಂದು ಸ್ವಾತಂತ್ರ್ಯವನ್ನು ನೀಡಿದಂತೆ, ಈ ಬಳೆಯಿಂದ ನೀವು ಯಾವುದೇ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳವ ಶಕ್ತಿಯನ್ನು ತುಂಬುತ್ತದೆ. ಮಾನಸಿಕವಾಗಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ಈ ಬಳೆಯಲ್ಲಿ ಮಾನಸಿಕ ಶಕ್ತಿಯನ್ನು ತುಂಬುವ ಆಧ್ಯಾತ್ಮಿಕ ಶಕ್ತಿ ಇದೆ. ನೇರಳೆ ಬಣ್ಣದ ಬಳೆ ಕೆಟ್ಟ ಯೋಚನೆಯನ್ನು ಯಾವತ್ತೂ ನಿಮ್ಮ ಮನಸ್ಸಿನಲ್ಲಿ ಸೃಷ್ಟಿ ಮಾಡುವುದಿಲ್ಲ.
ಹಸಿರು ಬಣ್ಣ: ಹಸಿರು ಬಣ್ಣದ ಬಳೆಗಳು ಸಮೃದ್ಧಿ ಹಾಗೂ ಅದೃಷ್ಟದ ಸಂಕೇತವಾಗಿದೆ. ಹಸಿರು ಬಣ್ಣದ ಬಳೆಗಳಿಂದ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಸಮೃದ್ಧಿಯಿಂದ ಇರುವಂತೆ ಮಾಡುತ್ತದೆ. ಇದು ನಿಮ್ಮ ಮನೆಯ ಸಂಪತ್ತನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಈ ಬಣ್ಣದ ಬಳೆಗಳು ಅದೃಷ್ಟವನ್ನು ಹೆಚ್ಚಿಸುತ್ತದೆ. ಹಸಿರು ಬಣ್ಣದಿಂದ ಅದೃಷ್ಟಕ್ಕೆ ಬಲವನ್ನು ತುಂಬುತ್ತದೆ.
ಕಿತ್ತಳೆ ಬಣ್ಣ: ಈ ಬಣ್ಣದ ಬಳೆಗಳು ನಿಮ್ಮ ಯಶಸ್ಸಿಗೆ ಕಾರಣವಾಗಬಹುದು, ಪ್ರತಿಯೊಂದು ಹಂತದಲ್ಲೂ ಕಿತ್ತಳೆ ಬಣ್ಣದ ಬಳೆಗಳು ನಿಮ್ಮ ಯಶಸ್ಸಿನ ಮೂಲ ಶಕ್ತಿಯಾಗಿದೆ ಗೌರಿ ಹಬ್ಬದಂದು ಈ ಬಳೆಯನ್ನು ಧರಿಸಿದರೆ ನಿಮ್ಮ ಜೀವನದಲ್ಲಿ ಯಾವುದೇ ಕೆಲಸದಲ್ಲೂ ಯಶಸ್ಸನ್ನು ಕಾಣುಬಹುದು.
ಕಪ್ಪು ಬಣ್ಣ : ಈ ಬಣ್ಣದ ಬಳೆಗಳು ಗೌರಿಗೆ ಇನ್ನೂ ಪ್ರೀಯವಾದ ಬಳೆಯಾಗಿದೆ. ಹೌದು ನಮ್ಮ ಪುರಾಣಗಳ ಪ್ರಕಾರ ಗೌರಿಯ ಅಂದರೆ ಪಾರ್ವತಿ ಆಕೆಯ ಮೈ ಬಣ್ಣ ಕಪ್ಪು, ಆಕೆ ಗಣಪತಿಯ ತಾಯಿ ಗೌರಿ ಎಂದೇ ಪ್ರಸಿದ್ಧ, ಈ ಕಾರಣಕ್ಕೆ ಕಫ್ಪು ಬಣ್ಣದ ಬಳೆ ಎಂದರೆ ಗೌರಿಗೆ ತುಂಬಾ ಪ್ರೀಯಾ, ಇದಕ್ಕಾಗಿ ಈ ಹಬ್ಬದಂದು ಕಪ್ಪು ಬಣ್ಣದ ಬಳೆಯನ್ನು ಮಹಿಳೆಯರು ಧರಿಸುತ್ತಾರೆ. ಇದನ್ನು ಗೌರಿ ಬಳೆ ಎಂದು ಕೂಡ ಕರೆಯುತ್ತಾರೆ. ಇದು ಶಕ್ತಿ ಹಾಗೂ ಅಧಿಕಾರ ಸಂಕೇತ.
ಚಿನ್ನದ ಬಣ್ಣ : ಚಿನ್ನದ ಬಣ್ಣದ ಬಳೆಯು ನಿಮ್ಮ ಜೀವನದ ಭಾಗ್ಯವನ್ನು ನಿರ್ಧಾರಿಸುತ್ತದೆ. ಯಾವುದನ್ನು ಪಡೆಯಬೇಕಾದರೂ ಶ್ರಮಬೇಕು ಅದರ ಜೊತೆಗೆ ಇಂತಹ ನಂಬಿಕೆ ಬೇಕು ಎಂದು ಹೇಳಲಾಗುತ್ತದೆ, ಈ ಬಳೆಯನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಶುಭ ದಿನಗಳು ಬರಬಹುದು. –
Published On - 1:59 pm, Sat, 27 August 22